ಗ್ಯಾರಂಟಿ ಸ್ಕೀಮುಗಳನ್ನು ನೀಡಿ ಬೆಲೆಗಳನ್ನು ಹೆಚ್ಚಿಸುವ ಮೂಲಕ ನಮ್ಮಿಂದ ಹಣ ಪೀಕಿದರೆ ಹೇಗೆ? ಗೃಹಿಣಿ, ದೇವನಹಳ್ಳಿ
ಮಾತಿನ ಭರದಲ್ಲಿ ನಾಗಮ್ಮ ಕೇಂದ್ರ ಸರ್ಕಾರವನ್ನು ದೂಷಿಸುತ್ತಾರೆ, ಸಿದ್ದರಾಮಯ್ಯ ಸರ್ಕಾರ ನಮಗೆ ಅಷ್ಟಿಷ್ಟಾದರೂ ನೀಡುತ್ತಿದೆ, ಬಿಜೆಪಿ ಸರ್ಕಾರ ಏನು ನೀಡಿದೆ ಎಂದು ಅವರು ಪ್ರಶ್ನಿಸುತ್ತಾರೆ. ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿರುವ ಇಲ್ಲಿನ ಬೇರೆ ನಿವಾಸಿಗಳು ಪೆಟ್ರೋಲ್ ಬೆಲೆ ಕಮ್ಮಿ ಮಾಡಬೇಕು, ಸ್ಕೂಲು ಕಾಲೇಜುಗಳಲ್ಲಿ ವಸೂಲಿ ಮಾಡುತ್ತಿರುವ ಫೀಸನ್ನು ಕಡಿಮೆ ಮಾಡಬೇಕು ಎಂದು ಹೇಳುತ್ತಾರೆ.
ದೇವನಹಳ್ಳಿ, ಮಾರ್ಚ್ 6 : ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನಾಳೆ ಸದನದ ಕಲಾಪಗಳಿಗೆ ವ್ಹೀಲ್ ಚೇರ್ನಲ್ಲಿ ಆಗಮಿಸಿದರೂ ಪ್ರಾಯಶಃ ನಿಂತುಕೊಂಡೇ ಬಜೆಟ್ ಮಂಡಿಸಲಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವ ದಿನಗಳಲ್ಲಿ ಗೃಹಿಣಿಯರು ಸಹಜವಾಗೇ ಬೆಲೆಗಳು ಇಳಿಯುವ ನಿರೀಕ್ಷೆ ಇಟ್ಟುಕೊಂಡು ಮುಖ್ಯಮಂತ್ರಿಯವರ ಕಡೆ ನೋಡುತ್ತಿದ್ದಾರೆ. ದೇವನಹಳ್ಳಿಯಲ್ಲಿ ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿರುವ ನಾಗಮ್ಮ ಹೆಸರಿನ ಗೃಹಿಣಿ ಅಕ್ಕಿ, ಬೇಳೆ, ಸಕ್ಕರೆ ಎಣ್ಣೆ ಮೊದಲಾದ ಎಲ್ಲ ಪದಾರ್ಥಗಳ ಬೆಲೆ ಹೆಚ್ಚಾಗಿದೆ, ಪಡಿತರ ಚೀಟಿ ಹೊಂದಿರುವವರಿಗೆ ಅಕ್ಕಿ ಸಿಗುತ್ತಿದೆ ಆದರೆ ರಾಗಿ ಸಿಗುತ್ತಿಲ್ಲ, ಗೃಹಲಕ್ಷ್ಮಿ ಯೋಜನೆ ಮೂಲಕ ತಿಂಗಳಿಗೆ ₹ 2,000 ನೀಡುತ್ತಿರೋದು ನಿಜ, ಅದರೆ ಬೆಲೆಯೇರಿಕೆಯೊಂದಿಗೆ ಹೇಗೆ ಏಗುವುದು ಅಂತ ಕೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕೇಂದ್ರ ಬಜೆಟ್ನಲ್ಲಿ ರೈಲ್ವೆಗೆ 2.60 ಲಕ್ಷ ಕೋಟಿ ರೂ ಮೀಸಲು: ಇದರಲ್ಲಿ ಕರ್ನಾಟಕಕ್ಕೆ ಬಂಪರ್!