ಕಾಲ್ಸಿ ದಡದಲ್ಲಿ 2,100 ದೀಪಗಳ ಬೆಳಕು; ಪ್ರಧಾನಿ ಮೋದಿ ಜನ್ಮದಿನಕ್ಕೆ ಸಿಎಂ ಧಾಮಿಯಿಂದ ಯಮುನಾ ಆರತಿ

Updated on: Sep 17, 2026 | 11:10 PM

ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಹರಿಪುರ್ ಕಾಲ್ಸಿಯಲ್ಲಿ ಪವಿತ್ರ ಯಮುನಾ ನದಿ ದಂಡೆಯ ಮೇಲೆ ಪೂಜ್ಯ ಸಾಧು-ಸಂತರು, ಸಾವಿರಾರು ಭಕ್ತರು ಮತ್ತು ಸ್ಥಳೀಯ ನಾಗರಿಕರೊಂದಿಗೆಗೂಡಿ ಯಮುನಾ ಆರತಿ ನೆರವೇರಿಸಿದರು. ದೇಶಾದ್ಯಂತ ಹಮ್ಮಿಕೊಳ್ಳಲಾಗಿರುವ 'ಆಶೀರ್ವಾದ ಕಾ ದಿಯಾ' ಕಾರ್ಯಕ್ರಮದ ಭಾಗವಾಗಿ, ಯಮುನಾ ನದಿಯ ನೂತನವಾಗಿ ನಿರ್ಮಿಸಲಾದ ಘಾಟ್‌ಗಳನ್ನು ಒಟ್ಟು 2,100 ಮಣ್ಣಿನ ದೀಪಗಳಿಂದ ಬೆಳಗಿಸಲಾಯಿತು.

ಡೆಹ್ರಾಡೂನ್, ಸೆಪ್ಟೆಂಬರ್ 17: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 76ನೇ ಜನ್ಮದಿನದ ಸಂದರ್ಭದಲ್ಲಿ, ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಹರಿಪುರ್ ಕಾಲ್ಸಿಯಲ್ಲಿ ಪವಿತ್ರ ಯಮುನಾ ನದಿ ದಂಡೆಯ ಮೇಲೆ ಪೂಜ್ಯ ಸಾಧು-ಸಂತರು, ಸಾವಿರಾರು ಭಕ್ತರು ಮತ್ತು ಸ್ಥಳೀಯ ನಾಗರಿಕರೊಂದಿಗೆಗೂಡಿ ಯಮುನಾ ಆರತಿ ನೆರವೇರಿಸಿದರು. ದೇಶಾದ್ಯಂತ ಹಮ್ಮಿಕೊಳ್ಳಲಾಗಿರುವ ‘ಆಶೀರ್ವಾದ ಕಾ ದಿಯಾ’ ಕಾರ್ಯಕ್ರಮದ ಭಾಗವಾಗಿ, ಯಮುನಾ ನದಿಯ ನೂತನವಾಗಿ ನಿರ್ಮಿಸಲಾದ ಘಾಟ್‌ಗಳನ್ನು ಒಟ್ಟು 2,100 ಮಣ್ಣಿನ ದೀಪಗಳಿಂದ ಬೆಳಗಿಸಲಾಯಿತು.

ಸಾಧು-ಸಂತರು ಮತ್ತು ಸ್ಥಳೀಯ ನಾಗರಿಕರು ಏಕಕಾಲಕ್ಕೆ 2,100 ದೀಪಗಳನ್ನು ಹಚ್ಚುವ ಮೂಲಕ ಪವಿತ್ರ ಯಮುನಾ ತೀರವನ್ನು ಪ್ರಜ್ವಲಿಸಿದರು. ಪ್ರಧಾನಿ ಮೋದಿಯವರ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ದೇಶಸೇವೆಯ ಸಂಕಲ್ಪಕ್ಕಾಗಿ ಈ ದೀಪಗಳನ್ನು ಸಮರ್ಪಿಸಲಾಯಿತು.

ಇದನ್ನೂ ಓದಿ:

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More