ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಐತಿಹಾಸಿಕ ಕ್ಷಣ ಎಂದು ಅಯೋಧ್ಯೆಯಲ್ಲಿ ಹೇಳಿದ ಪಂಚಮಸಾಲಿ ಪೀಠದ ವಚನಾನಂದ ಶ್ರೀ

|

Updated on: Jan 22, 2024 | 11:23 AM

ಸೀತೆ ಜನಿಸಿದ ಸ್ಥಳ ಮಿಥೆಲೆಯಿಂದ ಆಗಮಿಸಿರುವ ಹಿರಿಯ ಸಾಧುವೊಬ್ಬರು,ರಾಮ ಮಂದಿರದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಮಂತ್ರಣ ಸಿಕ್ಕ ಕೂಡಲೇ, ಶ್ರೀರಾಮಮ ಬಗ್ಗೆ 50 ಸಾಲುಗಳ ರಾಮಜಪವನ್ನು ರಚಿಸಿದ್ದಾರೆ. ಅದನ್ನವರು ಟಿವಿ9 ಕನ್ನಡ ವಾಹಿನಿಗೆ ಓದಿ ಹೇಳಿದರು.

ಅಯೋಧ್ಯೆ: ಭರತ ಖಂಡದಲ್ಲಿ ಇಂದು ರಾಮೋತ್ಸವ. ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯರಾಮ ಮಂದಿರದಲ್ಲಿ ಇಂದು ಬಾಲರಾಮನ ಪ್ರಾಣ ಪ್ರತಿಷ್ಠೆಯಾಗುವ (Ram temple consecration ceremony) ಕ್ಷಣವನ್ನು ನೋಡಲು ಎಲ್ಲ ಭಾರತೀಯರು ಕಾತುರರಾಗಿದ್ದಾರೆ. ಈಗಾಗಲೇ ವರದಿಯಾಗಿರುವ ಹಾಗೆ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಸಾಧು ಸಂತರಿಗೆಲ್ಲ ಅಮಂತ್ರಣ ಪತ್ರ ನೀಡಲಾಗಿದ್ದು ಆಹ್ವಾನಿತರಲ್ಲಿ ಕರ್ನಾಟಕದ ಪಂಚಮಸಾಲಿ ಪೀಠದ ಶ್ರೀಗಳಾಗಿರುವ ವಚನಾನಂದ ಶ್ರೀ (Vachananda Swamiji ), ಬಂಜಾರಾ ಪೀಠದ ಶ್ರೀ (Banjara Peetha) ಮತ್ತು ಬೇರೆ ಬೇರೆ ಸಂತರು ಸೇರಿದ್ದಾರೆ. ಟಿವಿ ಕನ್ನಡ ವಾಹಿನಿಯ ವರದಿಗಾರ ರಾಜ್ಯದ ಸಂತರೊಂದಿಗೆ ಮಾತಾಡಿದ್ದಾರೆ. ವಚನಾನಂದ ಶ್ರೀಗಳು, ಇದೊಂದು ಐತಿಹಾಸಿಕ ಕ್ಷಣ, ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಕ್ಷಣ, ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿದ್ದು ತಮ್ಮ ಸೌಭಾಗ್ಯ ಎಂದು ಹೇಳಿದರು. ರಾಜ್ಯದ ಮತ್ತೊಬ್ಬ ಸ್ವಾಮೀಜಿ, ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನವಿದು, ಭಾರತೀಯರೆಲ್ಲ ತಮ್ಮ ಮನೆಗಳಲ್ಲಿ ಹಬ್ಬವಾಚರಿಸಲಿ, ದೀಪಗಳನ್ನು ಬೆಳಗಲಿ, ಲಕ್ಷಾಂತರ ಸಾಧು ಸಂತರು ಈ ಪವಿತ್ರ ಕ್ಷಣಕ್ಕೆ ಸಾಕ್ಷಿಯಾಗುತ್ತಿದ್ದಾರೆ ಎಂದು ಹೇಳಿದರು. ಬಂಜಾರಾ ಪೀಠದ ಸ್ವಾಮೀಜಿ ಅವರು, ಬಂಜಾರಾ ಸಮುದಾಯಕ್ಕೂ ಇದು ರೋಮಾಂಚಕ ಕ್ಷಣ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ