ರಾಮಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ಕೆ ಕ್ಷಣಗಣನೆ, ಅಯೋಧ್ಯೆಯಲ್ಲಿ ಬಿಗಿ ಭದ್ರತಾ ವ್ಯವಸ್ಥೆ

ರಾಮಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ಕೆ ಕ್ಷಣಗಣನೆ, ಅಯೋಧ್ಯೆಯಲ್ಲಿ ಬಿಗಿ ಭದ್ರತಾ ವ್ಯವಸ್ಥೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 22, 2024 | 10:31 AM

ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಹೋಗುವ ರಾಮಪಥ್ ಮತ್ತು ಧರ್ಮಪಥ್ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ, ಸಾರ್ವಜನಿಕರು ಈ ರಸ್ತೆಗಳಲ್ಲಿ ಓಡಾಡುವ ಹಾಗಿಲ್ಲ. ರಸ್ತೆಗಳನ್ನು ಬ್ಯಾರಿಕೇಡಿಂಗ್ ಮಾಡಲಾಗಿದ್ದು, ಕೇವಲ ಫುಟ್​ಪಾತ್​ಗಳಲ್ಲಿ ಮಾತ್ರ ಜನ ಸಂಚರಿಸಬಹುದು. ಪಾದಾಚಾರಿ ರಸ್ತೆಗಳಲ್ಲೂ ಜನ ಗುಂಪುಗೂಡುವಂತಿಲ್ಲ

ಅಯೋಧ್ಯೆ: ಐತಿಹಾಸಿಕ ಮತ್ತು ಅಭೂತಪೂರ್ವ ರಾಮಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ (Ram Temple Consecration Ceremony) ಕೆಲ ನಿಮಿಷಗಳಷ್ಟೇ ಬಾಕಿ. ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ ಮತ್ತು ಅಯೋಧ್ಯೆ ನಗರಿಯಲ್ಲಿ (Ayodhya) ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ. ಟಿವಿ9 ಕನ್ನಡ ವಾಹಿನಿ ವರದಿಗಾರ ಪಟ್ಟಣದಲ್ಲಿ ಕೈಗೊಂಡಿರುವ ಬಂದೋಬಸ್ತ್ ಬಗ್ಗೆ ವಿವರಣೆ ನೀಡಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಹೋಗುವ ರಾಮಪಥ್ (Rampath) ಮತ್ತು ಧರ್ಮಪಥ್ (Dharmapath) ಸಂಪೂರ್ಣವಾಗಿ ಬಂದ್ ಮಾಡಲಾಗಿದೆ, ಸಾರ್ವಜನಿಕರು ಈ ರಸ್ತೆಗಳಲ್ಲಿ ಓಡಾಡುವ ಹಾಗಿಲ್ಲ. ರಸ್ತೆಗಳನ್ನು ಬ್ಯಾರಿಕೇಡಿಂಗ್ ಮಾಡಲಾಗಿದ್ದು, ಕೇವಲ ಫುಟ್ ಪಾತ್ ಗಳಲ್ಲಿ ಮಾತ್ರ ಜನ ಸಂಚರಿಸಬಹುದು. ಪಾದಾಚಾರಿ ರಸ್ತೆಗಳಲ್ಲೂ ಜನ ಗುಂಪುಗೂಡುವಂತಿಲ್ಲ. ಬೇರೆ ಬೇರೆ ಪ್ರದೇಶಗಳಿಂದ ಆಗಮಿಸುತ್ತಿರುವ ಸಾಧುಸಂತರು ಫುಟ್ ಪಾತ್ ಗಳ ಮೂಲಕವೇ ಮಂದಿರದ ಕಡೆ ಹೋಗಬಹುದು. ನಗರದಾದ್ಯಂತ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಧ್ಯಾಹ್ನ 2.30ರವರೆಗೆ ಅಯೋಧ್ಯೆಯಲ್ಲಿರುತ್ತಾರಾದ್ದರಿಂದ ಅಲ್ಲಿಯವರೆಗೆ ಎಲ್ಲೆಡೆ ಫೂಲ್ ಪ್ರೂಫ್ ಭದ್ರತೆ ಜಾರಿಯಲ್ಲಿರಲಿದೆ ಎಂದು ವರದಿಗಾರ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ