ತನಿಖೆ ಮುಗಿಯುವವರೆಗೆ ರನ್ಯಾ ಮತ್ತು ಅವರ ತಂದೆ ಬಗ್ಗೆ ಹಗುರವಾಗಿ ಮಾತಾಡಬಾರದು: ಅಣ್ಣಾಮಲೈ, ಬಿಜೆಪಿ ನಾಯಕ
ವಿಐಪಿ ಪ್ರೋಟೋಕಾಲ್ ದುರ್ಬಳಕೆಯಾಗಿದೆ ಮತ್ತು ವ್ಯವಸ್ಥೆಯ ದುರುಪಯೋಗವೂ ನಡೆದಿದೆ, ಹಾಗಾಗಿ ಯಾವುದೇ ತಾರತಮ್ಯಗೆ ಅವಕಾಶ ನೀಡದೆ ಸಮಗ್ರ ತನಿಖೆ ನಡೆಯಲಿ, ಸಿಬಿಐ ತನಿಖೆಯನ್ನು ಮಾಡುತ್ತಿದೆ ಮತ್ತು ಚಾರ್ಜ್ ಶೀಟ್ ಸಲ್ಲಿಸದ ಹೊರತು ಯಾರೇನೂ ಕಾಮೆಂಟ್ ಮಾಡುವ ಹಾಗಿಲ್ಲ ಎಂದು ಹಿಂದೆ ರಾಜ್ಯದ ಪೊಲೀಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಹೇಳಿದರು.
ಬೆಂಗಳೂರು, 14 ಮಾರ್ಚ್: ತಮಿಳುನಾಡು ಬಿಜಿಪಿ ಮುಖ್ಯಸ್ಥ ಕೆ ಅಣ್ಣಾಮಲೈ ಇಂದು ನಗರದಲ್ಲಿ ರನ್ಯಾ ರಾಬ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ (Ranya Rao gold smuggling case) ಸಂಬಂಧಿಸಿದಂತೆ ಬಹಳ ಸಮತೋಲನದಿಂದ ಮಾತಾಡಿದರು. ಪ್ರಕರಣ ತನಿಖೆಯನ್ನು ಸಿಬಿಐ ತನಿಖೆಯನ್ನು ಮಾಡುತ್ತಿರುವುದರಿಂದ ಏನೂ ಮಾತಾಡಲಾಗದು, ಆದರೆ ಒಂದಷ್ಟು ವಿಷಯಗಳ ಬಗ್ಗೆ ಗಮನಹರಿಸಬೇಕಾಗುತ್ತದೆ, ರಾಜ್ಯ ಸರ್ಕಾರ ಸಿಐಡಿಗೆ ಪೊಲೀಸ್ ಆ್ಯಂಗಲ್ ತನಿಖೆ ಮಾಡಲು ಹೇಳಿ ಯಾಕೆ ತನಿಖೆಯನ್ನು ನಿಲ್ಲಿಸಲು ಹೇಳಿತೋ ಗೊತ್ತಿಲ್ಲ, ರನ್ಯಾ ರಾವ್ ಖುದ್ದು ಸೆಲಿಬ್ರಿಟಿಯಾಗಿದ್ದಾರೆ ಮತ್ತು ಅವರ ತಂದೆಯೂ ಹಿರಿಯ ಪೊಲೀಸ್ ಅಧಿಕಾರಿಯಾಗಿದ್ದಾರೆ ಎಂದು ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕರ್ನಾಟಕ ನಕ್ಸಲರ ಶರಣಾಗತಿ ಪ್ರಕ್ರಿಯೆ ಅನುಮಾನ ಹುಟ್ಟಿಸುತ್ತದೆ, ಅದೊಂದು ದೊಡ್ಡ ಪ್ರಕ್ರಿಯೆ: ಕೆ ಅಣ್ಣಾಮಲೈ