ಯಾರೋ ಒಬ್ಬ ಮಿಮಿಕ್ರಿ ಕಲಾವಿದ ನನ್ನ ಧ್ವನಿಯನ್ನು ಅನುಕರಿಸಿ ಮಾತಾಡಿರುವಂತಿದೆ: ಡಿಕೆ ಸುರೇಶ್
ಈಗಾಗಲೇ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಛ ನ್ಯಾಯಾಲಯಗಳು ಜಾರಿ ನಿರ್ದೇಶನಾಲಯ ತನ್ನ ವ್ಯಾಪ್ತಿಗೆ ಮೀರಿದ ಪ್ರಕರಣಗಳನ್ನು ಕೈಗೆತ್ತಿಕೊಂಡು ತನಿಖೆ ನಡೆಸುತ್ತಿದೆ ಅಂತ ತಾಕೀತು ಮಾಡಿದ್ದರೂ, ಈಡಿ ಪ್ರಕರಣಗಳನ್ನು ದಾಖಲಿಸಿಕೊಂಡು ವಿಚಾರಣೆ ನಡೆಸುವುದು ಮುಂದುವರಿಸಿದೆ ಎಂದು ಹೇಳಿದ ಸುರೇಶ್, ಈಡಿ ಅಧಿಕಾರಿಗಳು ತನ್ನನ್ನು ಯಾಕೆ ಕರೆದಿದ್ದರೆಂದು ವಿಚಾರಣೆ ನಂತರ ಗೊತ್ತಾಗಲಿದೆ ಎಂದರು.
ಬೆಂಗಳೂರು, ಜೂನ್ 23: ಐಶ್ವರ್ಯ ಗೌಡ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳ (ED officials) ಮುಂದೆ ವಿಚಾರಣೆಗೆ ಹಾಜರಾಗುವ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಮುಲ್ ಅಧ್ಯಕ್ಷ ಡಿಕೆ ಸುರೇಶ್, ಯಾರೋ ಒಬ್ಬ ಧ್ವನಿಯನ್ನು ಮಿಮಿಕ್ರಿ ಮಾಡುವ ಕಲಾವಿದ ತನ್ನ ವಾಯ್ಸ್ ಅನುಕರಣೆ ಮಾಡಿ ಮಾತಾಡಿರವುದು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿರುವುದನ್ನು ತಾನು ನೋಡಿದ್ದೇನೆಂದು ಹೇಳಿದರು. ಈ ಬಗ್ಗೆ ಹಲವು ದೂರುಗಳು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ, ತನಿಖೆ ಯಾವ ಹಂತದಲ್ಲಿದೆ ಅಂತ ಗೊತ್ತಿಲ್ಲ; ಏತನ್ಮಧ್ಯೆ, ಈಡಿ ಯಾವ ಮಾನದಂಡವನ್ನು ಆಧರಿಸಿ ತನ್ನ ವಿರುದ್ಧ ತನಿಖೆ ಕೈಗೆತ್ತಿಕೊಂಡಿದೆಯೋ ಗೊತ್ತಿಲ್ಲ ಎಂದು ಸುರೇಶ್ ಹೇಳಿದರು.
ಇದನ್ನೂ ಓದಿ: Bengaluru Stampede; ಡ್ರಾಮಾ ಮಾಡೋದ್ರಲ್ಲಿ ಕುಮಾರಸ್ವಾಮಿ ಎಕ್ಸ್ಪರ್ಟ್ ಅಂತ ಜನರಿಗೆ ಗೊತ್ತಿದೆ: ಡಿಕೆ ಸುರೇಶ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡಾ. ರಾಜ್ಕುಮಾರ್ ಅಪಹರಣಕ್ಕೂ ಮುನ್ನ ಏನೆಲ್ಲ ನಡೆದಿತ್ತು? ವಿವರಿಸಿದ ಅಳಿಯ

ಡಿವೈಡರ್ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ

ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್

‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
