ಕೊರೋನಾ ತರ ಮತ್ತೊಂದು ರೋಗದ ಭೀತಿ: ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ

Updated on: May 04, 2025 | 1:44 PM

ಕೊರೋನಾ ಬಳಿಕ ಮತ್ತೊಂದು ರೋಗ ಬರಲಿದೆ ಎಂದು ಕೋಡಿಮಠದ ಸ್ವಾಮೀಜಿ ಆಘಾತಕಾರಿ ಭವಿಷ್ಯ ನುಡಿದಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಸ್ವಾಮೀಜಿ, ಈ ಸಂವತ್ಸರದಲ್ಲಿ ಪ್ರಾಕೃತಿಕವಾಗಿ ಬಹಳ ಅಪಾಯವಿದೆ. ಜಗತ್ತಿನಾದ್ಯಂತ ಅಪಾಯವಿದೆ. ಒಂದು ಹೇಳ್ತಿನಿ ವಿವರಿಸೋದಿಲ್ಲ ಎಂದ ಸ್ವಾಮೀಜಿ, ಸೂಳೆಯ ಮಗನು ಹುಟ್ಟಿ ಆಳುವನು ಮುನಿಪುರವ . ಯುದ್ದವಿಲ್ಲದ ಮಡಿಯೆ ಪುರವೆಲ್ಲ ಕೋಳಾದೀತು.

ಬಾಗಲಕೋಟೆ, (ಮೇ 04): ಕೊರೋನಾ ಬಳಿಕ ಮತ್ತೊಂದು ರೋಗ ಬರಲಿದೆ ಎಂದು ಕೋಡಿಮಠದ ಸ್ವಾಮೀಜಿ ಆಘಾತಕಾರಿ ಭವಿಷ್ಯ ನುಡಿದಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಸ್ವಾಮೀಜಿ, ಈ ಸಂವತ್ಸರದಲ್ಲಿ ಪ್ರಾಕೃತಿಕವಾಗಿ ಬಹಳ ಅಪಾಯವಿದೆ. ಜಗತ್ತಿನಾದ್ಯಂತ ಅಪಾಯವಿದೆ. ಒಂದು ಹೇಳ್ತಿನಿ ವಿವರಿಸೋದಿಲ್ಲ ಎಂದ ಸ್ವಾಮೀಜಿ, ಸೂಳೆಯ ಮಗನು ಹುಟ್ಟಿ ಆಳುವನು ಮುನಿಪುರವ . ಯುದ್ದವಿಲ್ಲದ ಮಡಿಯೆ ಪುರವೆಲ್ಲ ಕೋಳಾದೀತು. ಅರಸನಾಲಯಕ್ಕೆ ಕಾರ್ಮೋಡ ಕವಿದೀತಿ ಸ್ಟೇಟ್ ಗೂ ಇದೆ ಸೆಂಟ್ರಲ್ ಗೂ ಇದೆ ಇದು. ನೋಡ್ತಿ ಗೊತ್ತಾಗುತ್ತದೆ ರಿಸಲ್ಟ್. ಯುದ್ದ ಭೀತಿ ಸಾವು ನೋವು ಇರುತ್ತದೆ. ದೊಡ್ಡ ರೋಗ ಬರುತ್ತದೆ ಐದು ವರ್ಷ ಇರುತ್ತದೆ ಎಂದು ಎಚ್ಚರಿಕೆ ಭವಿಷ್ಯ ನುಡಿದರು.

ನಾನು‌ ಭವಿಷ್ಯ ಹೇಳೋದಿಲ್ಲ ಭವಿಷ್ಯ ರೂಪಿಸುತ್ತೇನೆ. ಅದು ಆಳುವವರಿಗೆ ಸೇರಿದ ವಿಷಯ. ಇಲ್ಲಿವರೆಗೆ ಹೇಳಿದ ಭವಿಷ್ಯವೆಲ್ಲ ಆಗೆ ಬಿಡ್ತವೆ. ಆಗಬಾರದು ಅಂತ‌ ಹೇಳ್ತಿನಿ ನಾನು. ಕೊರೊನಾ ಬಗ್ಗೆ ಮೊದಲೇ ಹೇಳಿದ್ದೆ ರೋಗ ಬರುತ್ತೆ ಜನ ಸಾಯ್ತಾರೆ ಅಂತ. ಮದ್ದಿಲ್ಲದ ವ್ಯಾದಿ ಬರುತ್ತದೆ ಎಚ್ಚೆತ್ತುಕೊಳ್ಳಬೇಕು ಅಂದೆ. ಎಷ್ಟು ಜನರ ಸತ್ರು ಅಲ್ವೆ? ಈಗಲೂ ಹೇಳ್ತಿನಿ ಅಂತ ಒಂದು ರೋಗ ಬರುವ ಚಾನ್ಸಸ್ ಇದೆ. ಐದು ವರ್ಷ ಕಾಡುತ್ತದೆ. ಅವರು ಹುಷಾರಾದರೆ ಹೋಗಬಹುದು ಎಂದು ಸರ್ಕಾರಗಳಿಗೆ ಎಚ್ಚರಿಕೆ ವಹಿಸುವಂತೆ ಕಿವಿಮಾತು ಹೇಳಿದ್ದಾರೆ.

Published on: May 04, 2025 01:43 PM