AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಂಗಭದ್ರಾ ಜಲಾಶಯದಲ್ಲಿ ಹರಿದು ಬರುತ್ತಿದೆ ದಿನಕ್ಕೊಂದು ಟಿಎಂಸಿ ನೀರು, ರೈತರಲ್ಲಿ ಸಂತಸ!

ತುಂಗಭದ್ರಾ ಜಲಾಶಯದಲ್ಲಿ ಹರಿದು ಬರುತ್ತಿದೆ ದಿನಕ್ಕೊಂದು ಟಿಎಂಸಿ ನೀರು, ರೈತರಲ್ಲಿ ಸಂತಸ!

ಅರುಣ್​ ಕುಮಾರ್​ ಬೆಳ್ಳಿ
|

Updated on: May 27, 2025 | 11:13 AM

Share

ಜಲಾಶಯಕ್ಕೆ ನೀರು ಬರುತ್ತಿರೋದು ರೈತಾಪಿ ಸಮುದಾಯಕ್ಕೆ ಖುಷಿಯನ್ನುಂಟು ಮಾಡಿದ್ದರೆ, ಅದರೊಂದಿಗಿರುವ ಸಮಸ್ಯೆ ಅವರನ್ನು ಬಾಧಿಸುತ್ತಿದೆ. ವಿಷಯವೇನೆಂದರೆ ಕಳೆದ ವರ್ಷ ಬಿರುಕು ಕಂಡಿದ್ದ ಕ್ರಸ್ಟ್​ ಗೇಟ್ ಇನ್ನೂ ರಿಪೇರಿಯಾಗದ ಕಾರಣ 130 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 80 ಟಿಎಂಸಿಗಿಂತ ಹೆಚ್ಚು ನೀರು ಸಂಗ್ರಹಗೊಂಡರೆ ಅದು ಜಲಾಶಯದ ಎಲ್ಲ 33 ಗೇಟ್​ಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.

ಕೊಪ್ಪಳ, ಮೇ 27: ಮಲೆನಾಡಲ್ಲಿ ಜೋರು ಮಳೆ ಬಿಸಿಲುನಾಡಿನ ರೈತರ ಮೊಗದಲ್ಲಿ ಕಳೆ! ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ (coastal region) ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಬಳಿಯ ತುಂಗಭದ್ರಾ ಜಲಾಶಯದಲ್ಲಿ ನೀರು ಒಂದೇ ಸಮನೆ ಹರಿದು ಬರುತ್ತಿದೆ. ಟಿವಿ9 ಕೊಪ್ಪಳ ವರದಿಗಾರ ಹೇಳುವ ಹಾಗೆ ಟಿಬಿ ಡ್ಯಾಂಗೆ ಪ್ರತಿದಿನ ಒಂದು ಟಿಎಂಸಿ ನೀರು ಬರುತ್ತಿದೆ ಮತ್ತು ಜಲಾಶಯದಲ್ಲಿ ಈಗಾಗಲೇ 12ಟಿಎಂಸಿಯಷ್ಟು ನೀರು ಶೇಖರಣೆಗೊಂಡಿದೆ. ಇದಿನ್ನೂ ಮೇ ತಿಂಗಳು. ಕಳೆದ ವರ್ಷ ಜೂನ್ ತಿಂಗಳಲ್ಲಿ 10ಟಿಎಂಸಿ ನೀರು ಮಾತ್ರ ಸಂಗ್ರಹವಾಗಿತ್ತಂತೆ. ರಾಯಚೂರು, ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಜೀವನಾಡಿಯಾಗಿರುವ ಟಿಬಿ ಡ್ಯಾಂ ನೀರು ಸಂಗ್ರಹಗೊಳ್ಳುತ್ತಿರೋದು ರೈತರನ್ನು ಸಂತಸಕ್ಕೀಡು ಮಾಡಿದೆ.

ಇದನ್ನೂ ಓದಿ:  ತುಂಗಭದ್ರಾ ಜಲಾಶಯ ಗೇಟ್‌‌ ದುರಸ್ತಿ ಸಂಪೂರ್ಣ ಮುಕ್ತಾಯ: ಹನಿ ನೀರು ಹೊರಹೋಗದಂತೆ ತಡೆಯುವಲ್ಲಿ ಸಿಬ್ಬಂದಿ ಯಶಸ್ವಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ