OnePlus 9RT: 50MP ಕ್ಯಾಮೆರಾ, 65W ಫಾಸ್ಟ್ ಚಾರ್ಜಿಂಗ್: ಭಾರತದಲ್ಲಿ ಒನ್‌ಪ್ಲಸ್ 9RT ಸ್ಮಾರ್ಟ್‌ಫೋನ್ ಸೇಲ್ ಆರಂಭ
ಒನ್‌ಪ್ಲಸ್ 9ಆರ್ಟಿ (OnePlus 9RT) ಸ್ಮಾರ್ಟ್‌ಫೋನ್ ಮೊದಲ ಸೇಲ್ ಕಾಣುತ್ತಿದೆ. ಅಮೆಜಾನ್ ಆಯೋಜಿಸಿರುವ ಗ್ರೇಟ್ ರಿಪಬ್ಲಿಕ್ ಡೇ ಸೇಲ್ನಲ್ಲಿ (Aamazon Great Republic Day Sale) ಮಾರಾಟ ಪ್ರಾರಂಭಿಸಿದೆ
ಭಾರತದಲ್ಲಿ ಒನ್‌ಪ್ಲಸ್ 9ಆರ್ಟಿ (OnePlus 9RT) ಸ್ಮಾರ್ಟ್‌ಫೋನ್ ಮೊದಲ ಸೇಲ್ ಕಾಣುತ್ತಿದೆ. ಬಿಡುಗಡೆಗೂ ಮುನ್ನವೇ ಟೆಕ್ ಪ್ರಿಯರ ನಿದ್ದೆ ಕದ್ದಿದ್ದ ಈ ಫೋನ್ ಈಗ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಆಯೋಜಿಸಿರುವ ಗ್ರೇಟ್ ರಿಪಬ್ಲಿಕ್ ಡೇ ಸೇಲ್ನಲ್ಲಿ (Aamazon Great Republic Day Sale) ಮಾರಾಟ ಪ್ರಾರಂಭಿಸಿದೆ. ಇದರಲ್ಲಿರುವ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ನಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ನಿಂದ ಕೂಡಿದೆ. ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್ ಬಲವನ್ನು ಪಡೆದಿದೆ. 65W ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಅಮೋಘ ಫೀಚರ್ಗಳಿಂದ ಒನ್‌ಪ್ಲಸ್ 9RT ಕೂಡಿದೆ. ಒಟ್ಟು ಎರಡು ಆಯ್ಕೆಯಲ್ಲಿ ಖರೀದಿಗೆ ಸಿಗುತ್ತಿದೆ. ಇದರ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಸಾಮರ್ಥ್ಯಕ್ಕೆ 42,999 ರೂ. ನಿಗದಿ ಮಾಡಲಾಗಿದೆ. 12GB RAM ಮತ್ತು 256GB ಇಂಟರ್ ಸ್ಟೋರೇಜ್ಗೆ 46,999 ರೂ. ಇದೆ. ಬ್ಲಾಕ್ ಮತ್ತು ಸಿಲ್ವರ್ನ ಎರಡು ಬಣ್ಣಗಳಲ್ಲಿ ಇದು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.
Amazon Great Republic Day Sale: ಅಮೇಜಾನ್ನಲ್ಲಿ ಲೈವ್ ಆಗಿದೆ ಗ್ರೇಟ್ ರಿಪಬ್ಲಿಕ್ ಡೇ ಸೇಲ್: ಆಫರ್ಗಳ ಸುರಿಮಳೆ