Radhika Kumaraswamy: ಹಿಂದಿ ಹಾಡಿಗೆ ರಾಧಿಕಾ ಮಸ್ತ್ ಡಾನ್ಸ್; ವಿಡಿಯೋ ವೈರಲ್
ಸ್ಯಾಂಡಲ್ವುಡ್ ನಟಿ ರಾಧಿಕಾ ಕುಮಾರಸ್ವಾಮಿ ಹಾಡೊಂದಕ್ಕೆ ಹೆಜ್ಜೆ ಹಾಕುತ್ತಿರುವ ಹೊಸ ವಿಡಿಯೋ ಹಂಚಿಕೊಂಡಿದ್ದು, ಅಭಿಮಾನಿಗಳ ಮನಗೆದ್ದಿದೆ.
ಸ್ಯಾಂಡಲ್ವುಡ್ (Sandalwood) ನಟಿ ರಾಧಿಕಾ ಕುಮಾರಸ್ವಾಮಿ (Radhika Kumarswamy) ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟಿವ್. ಇತ್ತೀಚೆಗೆ ಅವರು ಹಿಂದಿ ಹಾಡು ‘ಮೇರಾ ಯಾರಾ’ದ ಕವರ್ ಸಾಂಗ್ಗೆ ಸಖತ್ ಹೆಜ್ಜೆ ಹಾಕಿದ್ದಾರೆ. ಅವರು ಹಂಚಿಕೊಂಡಿರುವ ಈ ಇನ್ಸ್ಟಾಗ್ರಾಂ ರೀಲ್ಸ್ ಸದ್ಯ ವೈರಲ್ ಆಗಿದ್ದು, ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಇತ್ತೀಚೆಗಷ್ಟೇ ರಾಧಿಕಾ ಸಮುದ್ರ ತಟದಲ್ಲಿ ನೃತ್ಯ ಮಾಡುತ್ತಿರುವ ವಿಡಿಯೋವೊಂದನ್ನೂ ಹಂಚಿಕೊಂಡಿದ್ದರು. ಅದೂ ಅಭಿಮಾನಿಗಳ ಮನಗೆದ್ದಿತ್ತು.
ಚಿಯತ್ರಗಳ ವಿಷಯಕ್ಕೆ ಬಂದರೆ ರಾಧಿಕಾ ಬತ್ತಳಿಕೆಯಲ್ಲಿ ಸದ್ಯ ಮೂರು ಚಿತ್ರಗಳಿವೆ. ‘ಕಾಂಟ್ರಾಕ್ಟ್’, ‘ಭೈರಾದೇವಿ’ ಹಾಗೂ ‘ರಾಜೇಂದ್ರ ಪೊನ್ನಪ್ಪ’ ಚಿತ್ರಗಳ ಕೆಲಸಗಳು ನಡೆಯುತ್ತಿದ್ದು, ಈ ವರ್ಷ ತೆರೆಕಾಣುವ ನಿರೀಕ್ಷೆ ಇದೆ.
View this post on Instagram
ಇದನ್ನೂ ಓದಿ:
ನ್ಯೂ ಇಯರ್ ಪಾರ್ಟಿಗೆ ರಾಧಿಕಾ ಕುಮಾರಸ್ವಾಮಿ ರಂಗು; ಕಲರ್ಸ್ ಕನ್ನಡದಲ್ಲಿ ಮಸ್ತ್ ಡ್ಯಾನ್ಸ್
Dhanush: 18 ವರ್ಷಗಳ ದಾಂಪತ್ಯವನ್ನು ಅಂತ್ಯಗೊಳಿಸಿದ ಧನುಷ್- ಐಶ್ವರ್ಯಾ; ಕಾರಣವೇನು?
Latest Videos