AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dhanush: 18 ವರ್ಷಗಳ ದಾಂಪತ್ಯವನ್ನು ಅಂತ್ಯಗೊಳಿಸಿದ ಧನುಷ್- ಐಶ್ವರ್ಯಾ; ಕಾರಣವೇನು?

Dhanush and Aishwaryaa Divorce: ಕಾಲಿವುಡ್ ನಟ ಧನುಷ್ ಹಾಗೂ ರಜಿನಿಕಾಂತ್ ಪುತ್ರಿ ಐಶ್ವರ್ಯಾ ಪರಸ್ಪರ ದೂರಾಗುತ್ತಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ 18 ವರ್ಷಗಳ ವೈವಾಹಿಕ ಜೀವನ ಅಂತ್ಯಗೊಂಡಂತಾಗಿದೆ.

Dhanush: 18 ವರ್ಷಗಳ ದಾಂಪತ್ಯವನ್ನು ಅಂತ್ಯಗೊಳಿಸಿದ ಧನುಷ್- ಐಶ್ವರ್ಯಾ; ಕಾರಣವೇನು?
ಧನುಷ್, ಐಶ್ವರ್ಯಾ (ಎಡ ಚಿತ್ರ), ರಜಿನಿ ಜತೆ ಧನುಷ್ ಹಾಗೂ ಐಶ್ವರ್ಯಾ
TV9 Web
| Edited By: |

Updated on: Jan 18, 2022 | 7:51 AM

Share

ತಮಿಳು ನಟ ಧನುಷ್ (Dhanush) ಹಾಗೂ ಅವರ ಪತ್ನಿ ಐಶ್ವರ್ಯಾ (Aishwaryaa) 18 ವರ್ಷಗಳ ದಾಂಪತ್ಯದ ನಂತರ ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈರ್ವರೂ ಬರೆದುಕೊಂಡಿದ್ದು, ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಘೋಷಿಸಿದ್ದಾರೆ. ಇಬ್ಬರ ಹಾದಿಗಳೂ ಪರಸ್ಪರ ಬೇರೆಯಾಗಿವೆ. ಆದ್ದರಿಂದ ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಈರ್ವರೂ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿರುವ ನಟ ಧನುಷ್, ‘‘18 ವರ್ಷಗಳಿಂದ ಸ್ನೇಹಿತರಾಗಿ, ದಂಪತಿಗಳಾಗಿ, ಪೋಷಕರಾಗಿ ಪರಸ್ಪರ ಜತೆಗಿದ್ದೆವು. ಈ ಹಾದಿಯಲ್ಲಿ ಈರ್ವರೂ ಬೆಳೆದವು, ಅರ್ಥ ಮಾಡಿಕೊಂಡೆವು ಹಾಗೂ ಹೊಂದಿಕೆಯನ್ನು ಕಲಿತೆವು. ಈಗ ಈರ್ವರೂ ಭಿನ್ನ ದಾರಿಗಳಲ್ಲಿ ನಿಂತಿದ್ದೇವೆ. ಆದ್ದರಿಂದ ನಾನು ಮತ್ತು ಐಶ್ವರ್ಯಾ ಪರಸ್ಪರ ಒಪ್ಪಿಗೆಯಿಂದ ಬೇರೆಯಾಗುತ್ತಿದ್ದೇವೆ. ವೈಯಕ್ತಿಕವಾಗಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳು ಸಮಯ ತೆಗೆದುಕೊಳ್ಳುವೆವು’’ ಎಂದು ಬರೆದಿದ್ದಾರೆ. ಅಲ್ಲದೇ ಈರ್ವರ ಖಾಸಗಿತನವನ್ನು ಗೌರವಿಸುವಂತೆ ಧನುಷ್ ಮನವಿ ಮಾಡಿದ್ದು, ‘‘ಓಂ ನಮಃ ಶಿವಾಯ’’ ಎಂದು ಬರೆದು ಬರಹ ಮುಕ್ತಾಯಗೊಳಿಸಿದ್ದಾರೆ.

ಧನುಷ್ ಹಂಚಿಕೊಂಡ ಟ್ವೀಟ್ ಇಲ್ಲಿದೆ:

ಐಶ್ವರ್ಯಾ ಅವರು ನಟ ರಜಿನಿಕಾಂತ್ ಹಿರಿಯ ಪುತ್ರಿ. ವೃತ್ತಿಯಲ್ಲಿ ಅವರು ನಿರ್ದೇಶಕಿ ಹಾಗೂ ಗಾಯಕಿ. ಧನುಷ್ ಹಾಗೂ ಐಶ್ವರ್ಯಾ 2004ರ ನವೆಂಬರ್ 18ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಈ ಜೋಡಿಗೆ ಯಾತ್ರಾ ಹಾಗೂ ಲಿಂಗಾ ಎಂಬ ಈರ್ವರು ಪುತ್ರರಿದ್ದಾರೆ. ಯಾತ್ರಾ 2006ರಲ್ಲಿ ಹಾಗೂ ಲಿಂಗಾ 2010ರಲ್ಲಿ ಜನಿಸಿದ್ದರು.

ಬೇರೆಯಾಗುತ್ತಿರುವುದರ ಕುರಿತು ಐಶ್ವರ್ಯಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದು, ‘‘ಯಾವುದೇ ಕ್ಯಾಪ್ಶನ್ ಅಗತ್ಯವಿಲ್ಲ. ನಿಮ್ಮ ಸಹಕಾರ ಹಾಗೂ ಪ್ರೀತಿ ಇರಲಿ’’ ಎಂದು ಬರೆದುಕೊಂಡಿದ್ದಾರೆ. ಐಶ್ವರ್ಯಾ ರಜಿನಿಕಾಂತ್ ಎಂದು ಕೊನೆಯಲ್ಲಿ ಬರೆದು ಅವರು ಬರಹವನ್ನು ಮುಕ್ತಾಯಗೊಳಿಸಿದ್ದಾರೆ.

ಐಶ್ವರ್ಯಾ ಹಂಚಿಕೊಂಡ ಪೋಸ್ಟ್:

ಚಿತ್ರಗಳ ವಿಷಯಕ್ಕೆ ಬಂದರೆ ಧನುಷ್ ಇತ್ತೀಚೆಗೆ ಬಾಲಿವುಡ್ ಸೇರಿದಂತೆ ವಿವಿಧ ಭಾಷೆಗಳ ಚಿತ್ರಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಅಕ್ಷಯ್ ಕುಮಾರ್ ಹಾಗೂ ಸಾರಾ ಅಲಿ ಖಾನ್ ಜತೆ ಧನುಷ್ ನಟಿಸಿದ ‘ಅತರಂಗಿ ರೇ’ ಇತ್ತೀಚೆಗೆ ಓಟಿಟಿಯಲ್ಲಿ ತೆರೆಕಂಡಿತ್ತು.

ಇದನ್ನೂ ಓದಿ:

ಚಿತ್ರರಂಗಕ್ಕೆ ಕೊರೊನಾ ಹೊಡೆತ; ಕೇವಲ ಬಾಲಿವುಡ್​ಗೇ ಸಾವಿರಾರು ಕೋಟಿ ನಷ್ಟ: ಇಲ್ಲಿದೆ ಪೂರ್ಣ ಲೆಕ್ಕಾಚಾರ

ಕಪಿಲ್ ಶರ್ಮಾ ಪ್ರಪೋಸ್ ಮಾಡಿದ್ದು ಹೇಗೆ? ಗಿನ್ನಿ ಒಪ್ಪಿಕೊಂಡಿದ್ದು ಏಕೆ? ಇಲ್ಲಿದೆ ಮಜವಾದ ಕತೆ