AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Onion Price: ಈರುಳ್ಳಿ ದರ ಕುಸಿತ, ವಿಜಯಪುರದಲ್ಲಿ ಹೆದ್ದಾರಿಯಲ್ಲಿ ಈರುಳ್ಳಿ ಸುರಿದು ರೈತರ ಪ್ರತಿಭಟನೆ

Onion Price: ಈರುಳ್ಳಿ ದರ ಕುಸಿತ, ವಿಜಯಪುರದಲ್ಲಿ ಹೆದ್ದಾರಿಯಲ್ಲಿ ಈರುಳ್ಳಿ ಸುರಿದು ರೈತರ ಪ್ರತಿಭಟನೆ

ಅಶೋಕ ಯಡಳ್ಳಿ, ವಿಜಯಪುರ
| Updated By: Ganapathi Sharma|

Updated on: Jun 03, 2025 | 10:18 AM

Share

ಬೇರೆಡೆಗಳಲ್ಲಿ ಕ್ವಿಂಟಾಲ್​ಗೆ ಸಾವಿರ ರೂಪಾಯಿಗೆ ಮಾರಾಟವಾಗುವ ಈರುಳ್ಳಿ ವಿಜಯಪುರದಲ್ಲಿ 200 ರೂ.ಗೆ ಮಾರಾಟವಾಗುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜಯಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈರುಳ್ಳಿ ಸುರಿದು ಅದರ ಮೇಲೆ ಹೊರಳಾಡಿ ಆಕ್ರೋಶ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿಗಳು ಗಮನಹರಿಸಿ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದ್ದಾರೆ. ರೈತರ ಪ್ರತಿಭಟನೆಯ ವಿಡಿಯೋ ಇಲ್ಲಿದೆ.

ವಿಜಯಪುರ, ಜೂನ್ 3: ಈರುಳ್ಳಿ ದರ ತೀವ್ರ ಕುಸಿತ ಹಿನ್ನೆಲೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ಕುಪಕಡ್ಡಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ರೈತರು ಈರುಳ್ಳಿ ರಾಶಿ ಸುರಿದು ಪ್ರತಿಭಟನೆ ಮಾಡಿದ್ದಾರೆ. ಕುಪಕಡ್ಡಿ ಬಳಿಯ ತೋಟಗಾರಿಕೆ ಎಫ್​​ಪಿಒ (ಫಾರ್ಮರ್ಸ್ ಪ್ರೊಡ್ಯೂಸರ್ ಆರ್ಗನೈಜೇಷನ್) ಆವರಣದಲ್ಲಿ ಈರುಳ್ಳಿ ಸುರಿದು ಪ್ರತಿಭಟನೆ ಮಾಡಲಾಗಿದೆ. ಉತ್ತಮ ಗುಣಮಟ್ಟದ ಈರುಳ್ಳಿ ಕ್ವಿಂಟಾಲ್​​ಗೆ ಕೇವಲ 200 ರೂಪಾಯಿಗೆ ಹರಾಜಾಗುತ್ತಿದೆ. ಕಡಿಮೆ ದರಕ್ಕೆ ಹರಾಜಾದ ಕಾರಣ ಈರುಳ್ಳಿ ಬೆಳೆಗಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಮೇಲೆ ಈರುಳ್ಳಿ ಸುರಿದು ಬಿದ್ದು ಮಲ್ಲಿಕಾರ್ಜುನ ಬೋಲಗೊಂಡ ಎಂಬ ರೈತ ಹೊರಳಾಡಿದ್ದಾರೆ. ಇದೇ ಈರುಳ್ಳಿ ಬಾಗಲಕೋಟೆಯಲ್ಲಿ ಕ್ವಿಂಟಾಲ್​ಗೆ 1000 ರೂಪಾಯಿಗೆ ಮಾರಾಟವಾಗಿತ್ತು. ಡಿಎಪಿ ರಸಗೊಬ್ಬರ 1200 ರೂ., ಯೂರಿಯಾ 300 ರೂ. ಇದೆ. ನಾವು ಕಷ್ಟಪಟ್ಟು ಬೆಳೆದ ಈರುಳ್ಳಿಗೆ ಕೇವಲ 200 ರೂ. ಯಾಕೆಂದು ಪ್ರಶ್ನೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಈ ಕುರಿತು ಗಮನ ಹರಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ