ಈರುಳ್ಳಿ ಬೆಲೆ ಕುಸಿತ; ಲೋಡ್ಗಟ್ಟಲೇ ಈರುಳ್ಳಿ ಬಿಟ್ಟುಹೋದ ರಾಯಚೂರು ರೈತರು
Onion price: ಕಳೆದ ಕೆಲವು ದಿನಗಳಿಂದ ಈರುಳ್ಳಿ ಬೆಲೆಯಲ್ಲಿ ಭಾರಿ ಕುಸಿತವಾಗಿದ್ದು, ಬೆಳೆಯಿಂದ ಯಾವುದೇ ಆದಾಯವಿಲ್ಲದೇ ರಾಯಚೂರು ರೈತರು ಕಂಗಾಲಾಗಿದ್ದಾರೆ. ಬೆಳೆಗಾರರು ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಲೋಡ್ಗಟ್ಟಲೆ ಈರುಳ್ಳಿಯನ್ನು ಬಿಟ್ಟು ಹೋಗಿದ್ದಾರೆ. ಸರ್ಕಾರ ನಿಗದಿ ಪಡಿಸಿದ ಬೆಲೆಯೂ ಸಿಗದಿದ್ದರೆ ಜೀವನ ಮಾಡುವುವು ಕಷ್ಟವೆಂದು ರೈತರು ಕಣ್ಣೀರಿಟ್ಟಿದ್ದಾರೆ.
ರಾಯಚೂರು, ಅಕ್ಟೋಬರ್ 5: ಕಳೆದ ಕೆಲವು ದಿನಗಳಿಂದ ಈರುಳ್ಳಿ ದರ ಸಂಪೂರ್ಣವಾಗಿ ಕುಸಿದಿದ್ದು, ರಾಯಚೂರಿನ ರೈತರು ಕಂಗಾಲಾಗಿದ್ದಾರೆ. ಬೆಲೆ ಇಳಿಕೆಯಾದ ಹಿನ್ನೆಲೆ ರೈತರು ಲೋಡ್ಗಟ್ಟಲೆ ಈರುಳ್ಳಿ ಬೆಳೆಯನ್ನು ರಾಯಚೂರು ನಗರದ ಏಪಿಎಂಸಿಯಲ್ಲಿಯೇ ಬಿಟ್ಟುಹೋಗಿದ್ದಾರೆ. ಸರ್ಕಾರ ನಿಗದಿ ಮಾಡಿರುವ ಬೆಲೆ ನೀಡಿದರೆ ರೈತರು ಉಳಿಯುತ್ತಾರೆಂದು ಬೆಳೆಗಾರರು ಬೇಸರ ವ್ಯಕ್ತಪಡಿಸಿದ್ದಾರೆ. ಲಕ್ಷಾಂತರ ಬೆಲೆಯ ಈರುಳ್ಳಿ ಬೆಳೆ ಜಾನುವಾರುಗಳ ಪಾಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
