ಉಪ ಲೋಕಾಯುಕ್ತರಿಗೇ ಆನ್​​ಲೈನ್ ದೋಖಾ! ರೇಜರ್ ಬ್ಲೇಡ್‌ ಆರ್ಡರ್ ಮಾಡಿದ್ರೆ ಬಂದಿದ್ದು ಹಳೇ ಬಟ್ಟೆ ತುಂಡು

Updated on: Feb 13, 2026 | 10:33 AM

ಉಪಲೋಕಾಯುಕ್ತ ಕೆ.ಎನ್. ಫಣೀಂದ್ರ ಅವರು ಗುಡ್ ಮ್ಯಾಕ್ಸ್ ಕಂಪನಿಯಿಂದ ಆರ್ಡರ್ ಮಾಡಿದ ರೇಜರ್ ಬ್ಲೇಡ್ ಬದಲಿಗೆ ಹಳೇ ಬಟ್ಟೆಗಳ ಪಾರ್ಸೆಲ್ ಪಡೆದಿದ್ದಾರೆ. ಈ ಆನ್‌ಲೈನ್ ವಂಚನೆಯ ಕುರಿತು ಆರ್ಡರ್ ಮಾಡಿದ ಕಂಪನಿ, ಡೆಲಿವರಿ ಕಂಪನಿ ಮತ್ತು ಡೆಲಿವರಿ ಬಾಯ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆನ್‌ಲೈನ್ ಶಾಪಿಂಗ್‌ನಲ್ಲಿ ನಂಬಿಕೆ ಕಳೆದುಕೊಳ್ಳುವ ಘಟನೆ ಇದಾಗಿದೆ.

ಬೆಂಗಳೂರು, ಫೆಬ್ರವರಿ 13: ಕರ್ನಾಟಕದ ಉಪಲೋಕಾಯುಕ್ತ ಕೆಎನ್ ಫಣೀಂದ್ರ ಅವರೇ ಆನ್‌ಲೈನ್ ಶಾಪಿಂಗ್ ಮೋಸಕ್ಕೆ ಬಲಿಯಾಗುವಂತಾಗಿದೆ. ಅವರು ಗುಡ್ ಮ್ಯಾಕ್ಸ್ ಕಂಪನಿಯ ರೇಜರ್ ಬ್ಲೇಡ್‌ಗಳನ್ನು ಆನ್​ಲೈನ್ ಮೂಲಕ ಆರ್ಡರ್ ಮಾಡಿದ್ದರು. ಶ್ಯಾಡೋಫ್ಯಾಕ್ಸ್ ಮುಖಾಂತರ ಬಂದ ಪಾರ್ಸೆಲ್ ಅನ್ನು ತೆರೆದಾಗ, ಅದರಲ್ಲಿ ರೇಜರ್ ಬ್ಲೇಡ್‌ಗಳ ಬದಲು ಹಳೆಯ ಬಟ್ಟೆಗಳು ಪತ್ತೆಯಾಗಿವೆ! ಈ ಘಟನೆಯು ಆನ್‌ಲೈನ್ ಶಾಪಿಂಗ್‌ ಪ್ಲಾಟ್‌ಫಾರ್ಮ್‌ಗಳ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಉಪಲೋಕಾಯುಕ್ತರಂತಹ ಉನ್ನತ ಹುದ್ದೆಯಲ್ಲಿರುವವರೇ ಇಂತಹ ವಂಚನೆಗೆ ಗುರಿಯಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ, ಗುಡ್ ಮ್ಯಾಕ್ಸ್ ಕಂಪನಿ, ಡೆಲಿವರಿ ಸೇವೆ ಒದಗಿಸಿದ ಶ್ಯಾಡೋಫ್ಯಾಕ್ಸ್ ಕಂಪನಿ ಹಾಗೂ ಡೆಲಿವರಿ ಬಾಯ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಗ್ರಾಹಕರ ಆತಂಕಕ್ಕೆ ಕಾರಣವಾಗಿದೆ.

ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More