ಎರಡೂವರೆ ವರ್ಷಗಳ ಬಳಿಕ ಸಿಎಂ ಬದಲಾವಣೆಯಾ ಇಲ್ಲವಾ ಅಂತ ಕೇವಲ ಐವರಿಗೆ ಮಾತ್ರ ಗೊತ್ತು: ಪ್ರಿಯಾಂಕ್ ಖರ್ಗೆ, ಸಚಿವ

|

Updated on: Oct 30, 2023 | 12:49 PM

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ, ಕೆಸಿ ವೇಣುಗೋಪಾಲ್ ಮತ್ತು ಎಐಸಿಸಿ ಕರ್ನಾಟಕ ಉಸ್ತುವಾರಿ ರಂದೀಪ್ ಸುರ್ಜೆವಾಲಾ ನೀಡುವ ಸೂಚನೆಗಳನ್ನು ರಾಜ್ಯ ನಾಯಕರು ಪಾಲಿಸುತ್ತಾರೆ ಎಂದು ಖರ್ಗೆ ಹೇಳಿದರು. ಎರಡೂವರೆ ವರ್ಷಗಳ ಬಳಿಕ ಹೈಕಮಾಂಡ್ ತನಗೆ ಮುಖ್ಯಮಂತ್ರಿಯ ಜವಾಬ್ದಾರಿ ನೀಡಿದರೆ, ಅದನ್ನು ಪಾಲಿಸಲೇಬೇಕಾಗುತ್ತದೆ ಎಂದು ಖರ್ಗೆ ಹೇಳಿದರು

ಬೆಂಗಳೂರು: ನಗರದಲ್ಲಿಂದು ತಮ್ಮ ಕಚೇರಿಯಲ್ಲಿ ಟಿವಿ9 ವರದಿಗಾರನೊಂದಿಗೆ ಮಾತಾಡಿದ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ (Priyank Kharge), ಎರಡೂವರೆ ವರ್ಷಗಳ ಬಳಿಕ ರಾಜ್ಯದಲ್ಲಿ ಮುಖ್ಯಮಂತ್ರಿ (chief minister) ಬದಲಾವಣೆಯಾಗುತ್ತಾರೆಯೇ ಎನ್ನುವ ಚರ್ಚೆಗೆ ಪೂರ್ಣ ವಿರಾಮ ಹಾಕುವ ರೀತಿಯಲ್ಲಿ ಮಾತಾಡಿದರು. ರಾಜ್ಯದಲ್ಲಿ ಸರ್ಕಾರ ರಚಿಸುವಾಗ, ಮುಖ್ಯಮಂತ್ರಿಯನ್ನು ನೇಮಕ ಮಾಡುವಾಗ ಎಐಸಿಸಿಯ (AICC) ಮೂವರು ಮತ್ತು ರಾಜ್ಯದ ಇಬ್ಬರು ನಾಯಕರ ನಡುವೆ ಮಾತ್ರ ಚರ್ಚೆ ನಡೆದಿದೆ. ಅವರ ನಡುವೆ ನಡೆದ ಮಾತುಕತೆ ವಿವರ ಕೇವಲ ಅವರಿಗೆ ಮಾತ್ರ ಗೊತ್ತು, ಬೇರೆ ಯಾರಿಗೂ ಗೊತ್ತಿಲ್ಲ. ಹಾಗಾಗಿ ಎರಡೂವರೆ ವರ್ಷಗಳ ನಂತರ ಸಿಎಂ ಬದಲಾವಣೆ ಬಗ್ಗೆ ಅ ಐವರನ್ನು ಉಳಿದು ಬೇರೆ ಯಾರನ್ನೇ ಕೇಳಿದರೂ ಅದಕ್ಕೆ ಉತ್ತರ ಸಿಗಲಾರದು. ಮಂತ್ರಿಮಂಡಳದ ಸದಸ್ಯರಿಗೆ ಹೈಕಮಾಂಡ್ ಕೆಲ ಸ್ಪಷ್ಟ ನಿರ್ದೇಶನಗಳನ್ನು ನೀಡಿದೆ, ಮತ್ತು ಪ್ರತಿಯೊಬ್ಬರ ಜವಾಬ್ದಾರಿನ್ನು ವಿವರಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ, ಕೆಸಿ ವೇಣುಗೋಪಾಲ್ ಮತ್ತು ಎಐಸಿಸಿ ಕರ್ನಾಟಕ ಉಸ್ತುವಾರಿ ರಂದೀಪ್ ಸುರ್ಜೆವಾಲಾ ನೀಡುವ ಸೂಚನೆಗಳನ್ನು ರಾಜ್ಯ ನಾಯಕರು ಪಾಲಿಸುತ್ತಾರೆ ಎಂದು ಖರ್ಗೆ ಹೇಳಿದರು. ಎರಡೂವರೆ ವರ್ಷಗಳ ಬಳಿಕ ಹೈಕಮಾಂಡ್ ತನಗೆ ಮುಖ್ಯಮಂತ್ರಿಯ ಜವಾಬ್ದಾರಿ ನೀಡಿದರೆ, ಅದನ್ನು ಪಾಲಿಸಲೇಬೇಕಾಗುತ್ತದೆ ಎಂದು ಖರ್ಗೆ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ