ಚಿಕ್ಕ ಆಂಟಿಲಿಯಾದಂತೆ ಕಾಣುವ ಕೆಪಿಟಿಸಿಎಲ್ ಕಿರಿಯ ಇಂಜಿನೀಯರ್ ಮನೆ ಮೇಲೆ ಲೋಕಾಯುಕ್ತ ದಾಳಿ, ಕಾಗದಪತ್ರ ಪರಿಶೀಲನೆ

ಚಿಕ್ಕ ಆಂಟಿಲಿಯಾದಂತೆ ಕಾಣುವ ಕೆಪಿಟಿಸಿಎಲ್ ಕಿರಿಯ ಇಂಜಿನೀಯರ್ ಮನೆ ಮೇಲೆ ಲೋಕಾಯುಕ್ತ ದಾಳಿ, ಕಾಗದಪತ್ರ ಪರಿಶೀಲನೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 30, 2023 | 11:06 AM

ಹಾಸನದ ಹೊರವಲಯ ಬೊಮ್ಮನಾಯಕನಹಳ್ಳಿಯಲ್ಲಿರುವ ನಾರಾಯಣರ ಮನೆ ಚಿಕ್ಕ ಅಂಟಿಲಿಯಾಯದಂತೆ ಕಾಣುತ್ತದೆ. ಅಂದರೆ ಮಹಡಿ ಮೇಲೆ ಮಹಡಿ! ಹಾಸನದ ಟಿವಿ9 ವರದಿಗಾರ ನೀಡಿರುವ ಮಾಹಿತಿ ಪ್ರಕಾರ ನಾರಾಯಣ ಅವರು ಗೊರೂರು ಕೆಪಿಟಿಸಿಎಲ್ ಕಚೇರಿಯಲ್ಲಿ ಉದ್ಯೋಗಿಯಾಗಿದ್ದಾರೆ.

ಹಾಸನ: ರಾಜ್ಯದ ಹಲವಾರು ಭ್ರಷ್ಟ ಸರ್ಕಾರೀ ನೌಕರರಿಗೆ (corrupt government servants) ಸೋಮವಾರದ ಬೆಳಗು ಎಂದಿನ ಬೆಳಗಿನಂತಿರಲಿಲ್ಲ. ಲೋಕಾಯುಕ್ತ ಅಧಿಕಾರಿಗಳು (Lokayukta sleuths) ಅವರ ಮನೆಗಳ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಗಳಿಸಿರಿವ ಆಸ್ತಿಪಾಸ್ತಿಗಳ ಪರಿಶೀಲನೆ ನಡೆಸುತ್ತಿದ್ದಾರೆ. ಹಾಸನ ನಗರದಲ್ಲೂ ಅಧಿಕಾರಿಗಳ ರೇಡ್ ನಡೆದಿದ್ದು ಕರ್ನಾಟಕ ವಿದ್ಯತ್ ಪ್ರಸರಣ ನಿಗಮ ನಿಯಮಿತದಲ್ಲಿ (KPTCL) ಕಿರಿಯ ಇಂಜಿನೀಯರ್ ಆಗಿ ಕೆಲಸ ಮಾಡುವ ಹೆಚ್ ಇ ನಾರಾಯಣ (HC Narayana) ಮನೆಯಲ್ಲಿ ದಾಖಲಾತಿ, ಕಾಗದ ಪತ್ರ ಪರಿಶೀಲಿಸುತ್ತಿರುವುದನ್ನು ನೋಡಬಹುದು. ಹಾಸನದ ಹೊರವಲಯ ಬೊಮ್ಮನಾಯಕನಹಳ್ಳಿಯಲ್ಲಿರುವ ನಾರಾಯಣರ ಮನೆ ಚಿಕ್ಕ ಅಂಟಿಲಿಯಾಯದಂತೆ ಕಾಣುತ್ತದೆ. ಅಂದರೆ ಮಹಡಿ ಮೇಲೆ ಮಹಡಿ! ಹಾಸನದ ಟಿವಿ9 ವರದಿಗಾರ ನೀಡಿರುವ ಮಾಹಿತಿ ಪ್ರಕಾರ ನಾರಾಯಣ ಅವರು ಗೊರೂರು ಕೆಪಿಟಿಸಿಎಲ್ ಕಚೇರಿಯಲ್ಲಿ ಉದ್ಯೋಗಿಯಾಗಿದ್ದಾರೆ. ಹಾಗಾಗಿ ಅವರ ಕಚೇರಿಯ ಮೇಲೂ ಅಧಿಕಾರಿಗಳು ನಾರಾಯಣ ಚೇಂಬರ್ ನ ಪರಿಶೀಲನೆ ನಡೆಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ