ಬಾಗಲಕೋಟೆಯಲ್ಲಿ ಚರಂಡಿಗೆ ಆಕಸ್ಮಿಕವಾಗಿ ಬಿದ್ದ ಹಸುವನ್ನು ಮೇಲೆತ್ತಿದ ಕಾರ್ಯಾಚರಣೆ ಸಫಲ
ಚರಂಡಿಯ ಅಗಲ ಬಹಳ ಕಿರಿದಾಗಿದ್ದರಿಂದ ಬುಲ್ಡೋಜರ್ ಸಹಾಯದಿಂದ ಅದನ್ನು ಒಡೆದು ಹಸುವನ್ನು ಮೇಲೆತ್ತಬೇಕಾಯಿತು.
ಬಾಗಲಕೋಟೆ: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಹಸುವೊಂದು (cow) ಆಕಸ್ಮಿಕವಾಗಿ ಇಕ್ಕಟ್ಟಾದ ಚರಂಡಿಗೆ (drainage) ಬಿದ್ದು ಮೇಲೇಳಲಾಗದೆ ಓದ್ದಾಡುತ್ತಿದ್ದಾಗ ನಗರಸಭೆ ಸಿಬ್ಬಂದಿ, ಅಗ್ನಿಶಾಮಕ ದಳ ಸಿಬ್ಬಂದಿ (fire brigade staff), ಗೋರಕ್ಷಣಾ ಪಡೆಯ ಸದಸ್ಯರು ರಕ್ಷಿಸಿದ ಘಟನೆ ಬಾಗಲಕೋಟೆ ನವನಗರದ ಸೆಕ್ಟರ್ 8 ರಲ್ಲಿ ಗುರುವಾರ ಸಂಭವಿಸಿದೆ. ಚರಂಡಿಯ ಅಗಲ ಬಹಳ ಕಿರಿದಾಗಿದ್ದರಿಂದ ಬುಲ್ಡೋಜರ್ ಸಹಾಯದಿಂದ ಅದನ್ನು ಒಡೆದು ಹಸುವನ್ನು ಮೇಲೆತ್ತಬೇಕಾಯಿತು.