Oppo A3X 5G: ಒಪ್ಪೊ ಹೊಸ ಫೋನ್ ಐಫೋನ್ ಡಿಸೈನ್​ನಲ್ಲಿ ಮಾರುಕಟ್ಟೆಗೆ ಲಗ್ಗೆ

Oppo A3X 5G: ಒಪ್ಪೊ ಹೊಸ ಫೋನ್ ಐಫೋನ್ ಡಿಸೈನ್​ನಲ್ಲಿ ಮಾರುಕಟ್ಟೆಗೆ ಲಗ್ಗೆ

ಕಿರಣ್​ ಐಜಿ
|

Updated on: Aug 07, 2024 | 1:01 PM

ಹೊಸ Oppo A3X 5G ವಿನ್ಯಾಸ ಕೂಡ ನೋಡಲು ಜನಪ್ರಿಯ ಆ್ಯಪಲ್ ಐಫೋನ್ 11ರಂತೆಯೇ ಇದೆ. ಹಿಂಭಾಗದಲ್ಲಿ ಎರಡು ಕ್ಯಾಮೆರಾ ಸಹಿತ ವಿನ್ಯಾಸ ಆಕರ್ಷಕವಾಗಿದೆ. ಹೊಸ ಒಪ್ಪೋ ಫೋನ್ ಬೆಲೆ ಮತ್ತು ಕ್ಯಾಮೆರಾ ಕುರಿತು ಡೀಟೇಲ್ಸ್ ಇಲ್ಲಿದೆ.

ಒಪ್ಪೋ ಕಂಪನಿಯ ಫೋನ್​ಗಳಿಗೆ ದೇಶದಲ್ಲಿ ಹೆಚ್ಚಿನ ಮಟ್ಟದ ಮಾರುಕಟ್ಟೆಯಿದೆ. ಕಡಿಮೆ ದರದ ಫೋನ್​ಗಳಿಂದ ತೊಡಗಿ, ಪ್ರೀಮಿಯಂ ದರದವರೆಗಿನ ಫೋನ್​ಗಳನ್ನು ಒಪ್ಪೋ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತದೆ. ವಿವಿಧ ಸರಣಿಯ ಫೋನ್​ಗಳನ್ನು ಬಜೆಟ್ ದರಕ್ಕೆ ಅನುಗುಣವಾಗಿ ಒಪ್ಪೋ ಗ್ರಾಹಕರಿಗೆ ಒದಗಿಸುತ್ತದೆ. ಈ ಬಾರಿ ಒಪ್ಪೋ ಎ ಸರಣಿಯಲ್ಲಿ Oppo A3X 5G ಬಿಡುಗಡೆಯಾಗಿದೆ. ಹೊಸ Oppo A3X 5G ವಿನ್ಯಾಸ ಕೂಡ ನೋಡಲು ಜನಪ್ರಿಯ ಆ್ಯಪಲ್ ಐಫೋನ್ 11ರಂತೆಯೇ ಇದೆ. ಹಿಂಭಾಗದಲ್ಲಿ ಎರಡು ಕ್ಯಾಮೆರಾ ಸಹಿತ ವಿನ್ಯಾಸ ಆಕರ್ಷಕವಾಗಿದೆ. ಹೊಸ ಒಪ್ಪೋ ಫೋನ್ ಬೆಲೆ ಮತ್ತು ಕ್ಯಾಮೆರಾ ಕುರಿತು ಡೀಟೇಲ್ಸ್ ಇಲ್ಲಿದೆ.