Gowri: ಪ್ರಶಂಸೆಗಳಿಗೆ ನಾಚಿ ನೀರಾದ ಸಮರ್ಜಿತ್ ಲಂಕೇಶ್
ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ಮೊದಲ ಬಾರಿಗೆ ನಾಯಕರಾಗಿ ನಟಿಸಿರುವ ‘ಗೌರಿ’ ಸಿನಿಮಾ ಆಗಸ್ಟ್ 15 ರಂದು ತೆರೆಗೆ ಬರುತ್ತಿದೆ. ಸಿನಿಮಾ ಬಿಡುಗಡೆಗೆ ಮುನ್ನವೇ ಸಮರ್ಜಿತ್ಗೆ ಹೊಗಳಿಕೆಗಳ ಸುರಿಮಳೆಯೇ ಆಗುತ್ತಿದೆ. ಆದರೆ ಯುವಕ ಸಮರ್ಜಿತ್ ಈ ಹೊಗಳಿಕೆಗಳಿಗೆ ಪ್ರತಿಕ್ರಿಯಿಸುವುದು ತಿಳಿಯದೆ ನಾಚುತ್ತಿದ್ದಾರೆ.
ನಿರ್ದೇಶಕ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಯುವಕ ಸಮರ್ಜಿತ್ ತಮ್ಮ ಮುದ್ದಾದ ಮುಖ, ಅದಕ್ಕೆ ತಕ್ಕನಾಗಿ ಹುಗಟ್ಟಿದ ಮೈಕಟ್ಟಿನಿಂದ ಗಮನ ಸೆಳೆಯುತ್ತಿದ್ದಾರೆ. ಸಮರ್ಜಿತ್ ‘ಗೌರಿ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾ ಇದೇ ಆಗಸ್ಟ್ 15ಕ್ಕೆ ತೆರೆಗೆ ಬರಲಿದೆ. ಇತ್ತೀಚೆಗಷ್ಟೆ ಸಿನಿಮಾದ ಪ್ರಚಾರ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ನಟ ಸುದೀಪ್, ‘ಕನ್ನಡದ ಹೃತಿಕ್ ರೋಷನ್’ ಎಂದು ಹೊಗಳಿಬಿಟ್ಟಿದ್ದಾರೆ. ತಮಗೆ ಸಿಗುತ್ತಿರುವ ಈ ಹೊಗಳಿಕೆಗಳಿಂದ ಖುಷಿಯಾಗಿರುವ ಸಮರ್ಜಿತ್, ಮುಖದ ಮುಂದೆ ಬರುತ್ತಿರುವ ಹೊಗಳಿಕೆಗಳಿಂದ ನಾಚಿ ನೀರಾಗುತ್ತಿದ್ದಾರೆ. ಸಮರ್ಜಿತ್ ಎದುರು ನಾಯಕಿಯಾಗಿ ಸಾನ್ಯಾ ಐಯ್ಯರ್ ನಟಿಸಿದ್ದು, ‘ಗೌರಿ’ ಸಿನಿಮಾ ಆಗಸ್ಟ್ 15ಕ್ಕೆ ತೆರೆಗೆ ಬರುತ್ತಿದೆ. ಸಿನಿಮಾವನ್ನು ಸಮರ್ಜಿತ್ರ ತಂದೆ ಇಂದ್ರಜಿತ್ ಲಂಕೇಶ್ ನಿರ್ದೇಶನ ಮಾಡಿದ್ದು, ಅವರೇ ನಿರ್ಮಾಣ ಸಹ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

