ರಾಮನಗರ: ಉದ್ಘಾಟನೆಗೂ ಮುನ್ನವೇ ಒಡೆದ ಪೈಪ್: ಆಕಾಶಕ್ಕೆ ಚಿಮ್ಮಿದ ನೀರು
ಉದ್ಘಾಟನೆಗೂ ಮುನ್ನವೇ ಕಾವೇರಿ ಕುಡಿಯುವ ನೀರಿನ ಯೋಜನೆಗೆ ಹಾಕಿದ ಪೈಪ್ ಒಡೆದು ನೀರು ಆಕಾಶಕ್ಕೆ ಚಿಮ್ಮಿದ ಘಟನೆ ರಾಮನಗರ ಪಟ್ಟಣದ ಎಮ್.ಜಿ.ರಸ್ತೆಯಲ್ಲಿ ನಡೆದಿದೆ. ಇದೇ ಆಗಸ್ಟ್ 15 ಕ್ಕೆ ಉದ್ಘಾಟನೆ ಆಗಬೇಕಿತ್ತು. ಆದರೆ ಉದ್ಘಾಟನೆಗೂ ಮೊದಲೇ ಪೈಪ್ ಒಡೆದು ಅವಾಂತರ ಸೃಷ್ಟಿಯಾಗಿದೆ.
ರಾಮನಗರ, ಆ.07: ರಾಮನಗರ(Ramanagara) ಕಾವೇರಿ ನೀರಿನ ಕುಡಿಯುವ ಯೋಜನೆಗೆ ಹಾಕಿದ ಪೈಪ್ ಉದ್ಘಾಟನೆಗೂ ಮುನ್ನ ಒಡೆದು ನೀರು ಆಕಾಶಕ್ಕೆ ಚಿಮ್ಮಿದ ಘಟನೆ ನಡೆದಿದೆ. ಪ್ರಾಯೋಗಿಕ ಹಂತದಲ್ಲಿರುವ 24×7 ಕುಡಿಯುವ ನೀರಿನ ಯೋಜನೆ, ಇದೇ ಆಗಸ್ಟ್ 15 ಕ್ಕೆ ಉದ್ಘಾಟನೆ ಆಗಬೇಕಿತ್ತು. ದುರಾದೃಷ್ಟವಶಾತ್ ಉದ್ಘಾಟನೆಗೂ ಮುನ್ನವೇ ಪೈಪ್ ಒಡೆದು ಅವಾಂತರ ಸೃಷ್ಟಿಯಾಗಿದೆ. ಹೌದು, ನೀರು ಚಿಮ್ಮಿದ ರಭಸಕ್ಕೆ ಕೆಲ ವಾಹನಗಳು ಜಖಂಗೊಂಡಿದೆ. ಸ್ಥಳಕ್ಕೆ ನಗರಸಭಾ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos