ಚುನಾವಣೆಗಳಲ್ಲಿ ಎದುರಾಳಿ ಪಕ್ಷದವರು ಟಾರ್ಗೆಟ್ ಮಾಡೋದು ಸ್ವಾಭಾವಿಕ: ಡಿಕೆ ಸುರೇಶ್, ಸಂಸದ

|

Updated on: Mar 07, 2024 | 4:47 PM

ಬಿಜೆಪಿ ಮತ್ತು ಜೆಡಿಎಸ್ ನಡುವೆ ಏರ್ಪಟ್ಟಿರುವ ಮೈತ್ರಿಯನ್ನು ಗೇಲಿ ಮಾಡಿದ ಸುರೇಶ್ ಅದು ಮೈತ್ರಿಯೋ ಅಥವಾ ಒಬ್ಬರ ಕಾಲು ಮತ್ತೊಬ್ಬರ ಎಳೆಯುವುದಕ್ಕೆ ಮಾಡಿಕೊಂಡಿರುವ ಒಪ್ಪಂದವೋ ಗೊತ್ತಾಗುತ್ತಿಲ್ಲ ಆದರೆ ಚುನಾವಣೆಯಲ್ಲಿ ಅವರಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ರಾಮನಗರ: ಹನಕೆರೆ ಬಳಿ ಅಂಡರ್ ಪಾಸ್ ಗಾಗಿ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಶಾಸಕ ರವಿ ಗಣಿಗ (Ravi Ganiga) ಅವರಿಗೆ ಸಾಥ್ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಂಸದ ಡಿಕೆ ಸುರೇಶ್ (DK Suresh), ಬರುವ ಲೋಕಸಭಾ ಚುನಾವಣೆಯಲ್ಲಿ (Lok Sabha polls) ತಾನು ಎಲ್ಲಿಂದ ಸ್ಪರ್ಧಿಸಬೇಕೆಂದು ಪಕ್ಷದ ಹೈಕಮಾಂಡ್ ತೀರ್ಮಾನಿಸುತ್ತದೆ, ತಮ್ಮದು ಒಂದು ರಾಷ್ಟ್ರೀಯ ಪಕ್ಷ ಎಂದರು. ಸಂಸತ್ತಿನಲ್ಲಿ ಸುರೇಶ್ ಕಾಂಗ್ರೆಸ್ ಪಕ್ಷದ ಏಕೈಕ ಪ್ರತಿನಿಧಿಯಾಗಿರುವುದರಿಂದ ಟಾರ್ಗೆಟ್ ಮಾಡಲಾಗುತ್ತಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಸದ, ಚುನಾವಣೆಯಲ್ಲಿ ಟಾರ್ಗೆಟ್ ಮಾಡುವುದು ಸ್ವಾಭಾವಿಕ ಎಂದರು. ಬಿಜೆಪಿ ಮತ್ತು ಜೆಡಿಎಸ್ ನಡುವೆ ಏರ್ಪಟ್ಟಿರುವ ಮೈತ್ರಿಯನ್ನು ಗೇಲಿ ಮಾಡಿದ ಸುರೇಶ್ ಅದು ಮೈತ್ರಿಯೋ ಅಥವಾ ಒಬ್ಬರ ಕಾಲು ಮತ್ತೊಬ್ಬರ ಎಳೆಯುವುದಕ್ಕೆ ಮಾಡಿಕೊಂಡಿರುವ ಒಪ್ಪಂದವೋ ಗೊತ್ತಾಗುತ್ತಿಲ್ಲ ಆದರೆ ಚುನಾವಣೆಯಲ್ಲಿ ಅವರಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಹೈಕಮಾಂಡ್ ಬೇರೆ ಕ್ಷೇತ್ರದಿಂದ ಸ್ಪರ್ಧಿಸುವಂತೆ ಹೇಳಿದರೆ ಮಾಡುತ್ತೀರಾ ಎಂದಾಗ ಸುರೇಶ್, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನ ಮತ್ತು ಕಾರ್ಯಕರ್ತರು ತನ್ನನ್ನು ಇದೇ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ ಅಂತ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬೆಂಗಳೂರು ಗ್ರಾಮಾಂತರಕ್ಕೆ ಡಿಕೆ ಸುರೇಶ್ ವಿರುದ್ಧ ಬಿಜೆಪಿಯಿಂದ ಯಾರು? ಕೆಲ ಅಚ್ಚರಿ ಸಂಗತಿ ಬಿಚ್ಚಿಟ್ಟ ಯೋಗೇಶ್ವರ್

Published on: Mar 07, 2024 04:45 PM