ಸ್ವಾತಂತ್ರ್ಯ ಸಿಕ್ಕಾಗಿನಿಂದ ಕಾಂಗ್ರೆಸ್ ಪಕ್ಷ ದಲಿತ ಸಮುದಾಯಕ್ಕೆ ಮೋಸ ಮಾಡುತ್ತಾ ಬಂದಿದೆ: ಕೆ ಎಸ್ ಈಶ್ವರಪ್ಪ

ಸ್ವಾತಂತ್ರ್ಯ ಸಿಕ್ಕಾಗಿನಿಂದ ಕಾಂಗ್ರೆಸ್ ಪಕ್ಷ ದಲಿತ ಸಮುದಾಯಕ್ಕೆ ಮೋಸ ಮಾಡುತ್ತಾ ಬಂದಿದೆ: ಕೆ ಎಸ್ ಈಶ್ವರಪ್ಪ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 07, 2024 | 2:43 PM

ಅಸಲು ವಿಷಯವೇನೆಂದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ಸುಮ್ಮನಿದ್ದ ಡಿಕೆ ಶಿವಕುಮಾರ್ ಈಗ ಮತ್ತೆ ತಾನು ಮುಖ್ಯಮಂತ್ರಿಯಾಗಬೇಕೆನ್ನುವ ಆಸೆ ವ್ಯಕ್ತಪಡಿಸುತ್ತಿದ್ದಾರೆ. ಅವರನ್ನು ಸುಮ್ಮನಾಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಪ್ತ ಮತ್ತು ಸಚಿವ ಹೆಚ್ ಸಿ ಮಹದೇವಪ್ಪರನ್ನು ಛೂ ಬಿಟ್ಟಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

ಶಿವಮೊಗ್ಗ: ಕಾಂಗ್ರೆಸ್ ಪಕ್ಷದ ಜಾತಿ ರಾಜಕಾರಣ ರಾಜ್ಯದ ಜನರಲ್ಲಿ ವಾಕರಿಕೆ ತರಿಸುವಂತಾಗಿದೆ, ಕೇವಲ ಚುನಾವಣಾ ಸಮಯದಲ್ಲಿ ಮಾತ್ರ ಅವರು ದಲಿತ ಮುಖ್ಯಮಂತ್ರಿಯ (Dalit CM) ಚರ್ಚೆ ಮುನ್ನೆಲೆಗೆ ತರುತ್ತಾರೆ ಎಂದು ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಕಾಂಗ್ರೆಸ್ ನಾಯಕರ (Congress leaders) ಕುತಂತ್ರದ ರಾಜಕಾರಣದಿಂದ ಜನ ಬೇಸತ್ತಿದ್ದಾರೆ, ದಲಿತ ನಾಯಕನೊಬ್ಬನನ್ನು ಮುಖ್ಯಮಂತ್ರಿ ಮಾಡಲು ಅವರಿಗೆ ಅಡ್ಡಿಯಾಗಿದ್ದಾದರೂ ಏನು? ಅವರ ಕೈಯಲ್ಲೇ ಅಧಿಕಾರವಿತ್ತು ಮಾಡಬಹುದಿತ್ತಲ್ಲ? ಸ್ವಾತಂತ್ರ್ಯ ಬಂದಾಗಿನಿಂದ ದಲಿತ ಮುಖ್ಯಮಂತ್ರಿ ಅನ್ನುತ್ತಾ ಆ ಸಮುದಾಯದ ಜನರಿಗೆ ಬರೀ ಮೋಸ ಮಾಡುತ್ತಾ ಬಂದಿದ್ದಾರೆ ಎಂದು ಈಶ್ವರಪ್ಪ ಹೇಳಿದರು. ಅಸಲು ವಿಷಯವೇನೆಂದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ಸುಮ್ಮನಿದ್ದ ಡಿಕೆ ಶಿವಕುಮಾರ್ ಈಗ ಮತ್ತೆ ತಾನು ಮುಖ್ಯಮಂತ್ರಿಯಾಗಬೇಕೆನ್ನುವ ಆಸೆ ವ್ಯಕ್ತಪಡಿಸುತ್ತಿದ್ದಾರೆ. ಅವರನ್ನು ಸುಮ್ಮನಾಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಪ್ತ ಮತ್ತು ಸಚಿವ ಹೆಚ್ ಸಿ ಮಹದೇವಪ್ಪರನ್ನು ಛೂ ಬಿಟ್ಟಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ದಲಿತ ನಾಯಕನಿಗೆ ಮುಖ್ಯಮಂತ್ರಿ ಸ್ಥಾನ ಸಿಗದಿರುವುದಕ್ಕೆ ಬೇಸರ ಮತ್ತು ಅಸಮಾಧಾನ ಹೊರಹಾಕಿದ ಹೆಚ್ ಸಿ ಮಹದೇವಪ್ಪ