ಚೈತ್ರಾ ಕುಂದಾಪುರ ಮತ್ತವಳ ತಂಡ ಚುನಾವಣಾ ಟಿಕೆಟ್ ವ್ಯವಹಾರವಲ್ಲದೆ ಬೇರೆ ಅಕ್ರಮಗಳನ್ನೂ ನಡೆಸಿದೆ: ಎಂ ಲಕ್ಷ್ಮಣ್, ಕೆಪಿಸಿಸಿ ವಕ್ತಾರ

|

Updated on: Sep 19, 2023 | 4:45 PM

ಇಬ್ಬರು ರಾಜಕಾರಣಿಗಳು ಸಹ ಅವಳಿಗೆ ಹಣ ಕೊಟ್ಟು ಕಳೆದುಕೊಂಡಿದ್ದಾರೆ. ಅವರ ಹೆಸರುಗಳು ಬೇಗ ಬಯಲಿಗೆ ಬರಲಿವೆ ಎಂದು ಲಕ್ಷ್ಮಣ್ ಹೇಳಿದರು. ಸಿಸಿಬಿ ಅಧಿಕಾರಿಗಳು ಚೈತ್ರಾಳ ಮಂಪರು ಪರೀಕ್ಷೆ ನಡೆಸಿದರೆ ಬಹಳಷ್ಟು ಸಂಗತಿಗಳು ಹೊರಬೀಳಲಿವೆ ಎಂದು ಅವರು ಹೇಳಿದರು.

ಮೈಸೂರು: ನಗರದಲ್ಲಿಂದು ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ (M Laxman), ಪಿಎಸ್ಐ ನೇಮಕಾತಿ ಹಗರಣ ಪ್ರಕರಣವಲ್ಲದೆ ಬೇರೆ 3-4 ಹಗರಣಗಳಲ್ಲೂ ಶಾಮೀಲಾಗಿದ್ದಾಳೆ ಎಂದು ಆರೋಪಿಸಿದರು. ಚೈತ್ರಾ ಟಿಕೆಟ್-ಫಾರ್-ಕ್ಯಾಶ್ ಕೇಸ್ ಅಂದುಕೊಳ್ಳುವಷ್ಟು ಸುಲಭವಾಗಿಲ್ಲ ಎಂದ ಲಕ್ಷ್ಮಣ್; ಪ್ರಕರಣದಲ್ಲಿ ಸಿಟಿ ರವಿ (CT Ravi), ಚಕ್ರವರ್ತಿ ಸೂಲಿಬೆಲೆ (Chakravarti Sulibele), ಬಿಎಸ್ ಯಡಿಯೂರಪ್ಪ (BS Yediyurappa) ಮೊದಲಾದವರ ಹೆಸರುಗಳು ತೇಲಿ ಬರುತ್ತಿರುವುದರಿಂದ ಅವರೊಂದಿಗೆ ಚೈತ್ರಾ ಯಾವ ಸ್ವರೂಪದ ಲಿಂಕ್ ಇಟ್ಟುಕೊಂಡಿದ್ದಳು ಅನ್ನೋದು ತನಿಖೆಯಾಗಬೇಕು ಎಂದರು. ಚೈತ್ರಾ ಟಿಕೆಟ್ ವಂಚನೆ ಪ್ರಕರಣ, ಹನಿಟ್ರ್ಯಾಪ್ ಸೇರಿದಂತೆ ಇತರ ಪ್ರಕರಣಗಳಲ್ಲೂ ಶಾಮೀಲಾಗಿರುವ ಬಗ್ಗೆ ಮಾಹಿತಿ ಇದೆ ಎಂದು ಲಕ್ಷ್ಮಣ್ ಹೇಳಿದರು. ಚೈತ್ರಾ ಮತ್ತು ಈಗ ಸಿಕ್ಕಿಬಿದ್ದಿರುವ ಅವಳ ಗ್ಯಾಂಗ್ ನ ಸದಸ್ಯರು ಹಲವಾರು ವ್ಯವಹಾರಗಳನ್ನು ನಡೆಸಿದ್ದಾರೆ. ಚುನಾವಣೆ ಹತ್ತಿರ ಬಂದಾಗ ಟಿಕೆಟ್ ಕೊಡಿಸುವ ವ್ಯವಹಾರ, ನಂತರ ಮತ್ತೊಂದು ವ್ಯವಹಾರ-ಹೀಗೆ ಅವರು ಮೂರು ತಿಂಗಳಿಗೊಮ್ಮೆ ತಮ್ಮ ವ್ಯವಹಾರ ಬದಲಾಯಿಸುತ್ತಿದ್ದರು. ಇಬ್ಬರು ರಾಜಕಾರಣಿಗಳು ಸಹ ಅವಳಿಗೆ ಹಣ ಕೊಟ್ಟು ಕಳೆದುಕೊಂಡಿದ್ದಾರೆ. ಅವರ ಹೆಸರುಗಳು ಬೇಗ ಬಯಲಿಗೆ ಬರಲಿವೆ ಎಂದು ಲಕ್ಷ್ಮಣ್ ಹೇಳಿದರು. ಸಿಸಿಬಿ ಅಧಿಕಾರಿಗಳು ಚೈತ್ರಾಳ ಮಂಪರು ಪರೀಕ್ಷೆ ನಡೆಸಿದರೆ ಬಹಳಷ್ಟು ಸಂಗತಿಗಳು ಹೊರಬೀಳಲಿವೆ ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ