AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಾಜಿನಗರದಲ್ಲಿ ಗಣೇಶನ ಪ್ರತಿಷ್ಠಾಪನೆ ಸರ್ವಧರ್ಮಗಳ ಸಮಾಗಮಕ್ಕೆ ವೇದಿಕೆಯಾಯಿತು

ಶಿವಾಜಿನಗರದಲ್ಲಿ ಗಣೇಶನ ಪ್ರತಿಷ್ಠಾಪನೆ ಸರ್ವಧರ್ಮಗಳ ಸಮಾಗಮಕ್ಕೆ ವೇದಿಕೆಯಾಯಿತು

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 19, 2023 | 6:25 PM

ಶಿವಾಜಿನಗರದಲ್ಲಿ ಇಂದು ನಡೆದ ವಿಘ್ನೇಶ್ವರನ ಪ್ರತಿಷ್ಠಾಪನೆಯಲ್ಲಿ ಹಿಂದೂ ಮುಸಲ್ಮಾನರಲ್ಲದೆ ಬೇರೆ ಧರ್ಮಗಳ ಜನ ಸಹ ಸೇರಿದ್ದರು. ಪಾರ್ಸಿ ಧರ್ಮ ಮತ್ತು ಸಿಖ್ ಸಮುದಾಯಕ್ಕೆ ಸೇರಿದ ವ್ಯಕ್ತಿಗಳನ್ನೂ ಇಲ್ಲಿ ನೋಡಬಹುದು. ಗಣೇಶ ಚತುರ್ಥಿ ಹಬ್ಬ ಸರ್ವಧರ್ಮಗಳ ಸಮಾಗಮಕ್ಕೆ ವೇದಿಕೆಯಾಗಿದ್ದು ಕನ್ನಡಿಗರಿಗೆ ಅನಂದ ಉಂಟು ಮಾಡಿರುವುದರಲ್ಲಿ ಸಂಶಯವಿಲ್ಲ.

ಬೆಂಗಳೂರು: ಗೌರಿ ಗಣೇಶ ಹಬ್ಬದ  ಪ್ರಯುಕ್ತ ಇಂದು ನಗರದ ಪ್ರಮುಖ ಭಾಗವಾಗಿರುವ ಶಿವಾಜಿನಗರದಲ್ಲಿ ವಿಶಿಷ್ಟವಾದ ರೀತಿಯಲ್ಲಿ ವಿನಾಯಕನನ್ನು ಪ್ರತಿಷ್ಠಾಪಿಸಿ (Ganesh installation) ಪೂಜೆ ಸಲ್ಲಿಸಲಾಯಿತು. ನಿನ್ನೆ ಮೈಸೂರು ನಗರದ ಒಂದು ಭಾಗದಲ್ಲಿ ಹಿಂದೂಗಳ ಜೊತೆ ಮುಸ್ಲಿಂ ಸಮುದಾಯದ (Muslim community) ಜನ ಸಹ ಗಣೇಶನನ್ನು ಪ್ರತಿಷ್ಠಾಪಿಸಿದ ಬಗ್ಗೆ ನಾವು ವರದಿ ಮಾಡಿದ್ದೇವೆ. ಶಿವಾಜಿನಗರದಲ್ಲಿ ಇಂದು ನಡೆದ ವಿಘ್ನೇಶ್ವರನ ಪ್ರತಿಷ್ಠಾಪನೆಯಲ್ಲಿ ಹಿಂದೂ ಮುಸಲ್ಮಾನರಲ್ಲದೆ ಬೇರೆ ಧರ್ಮಗಳ ಜನ ಸಹ ಸೇರಿದ್ದರು. ನೀವು ವಿಡಿಯೋದಲ್ಲಿ ನೋಡುತ್ತಿರುವ ಹಾಗೆ ಗಣೇಶನಿಗೆ ಸಲ್ಲುತ್ತಿರುವ ಪೂಜೆಯಲ್ಲಿ ಒಬ್ಬ ಕ್ರೈಸ್ತ ಪಾದ್ರಿ (Christian priest) ಕೂಡ ಇದ್ದಾರೆ ಮತ್ತು ಜೈನ ಧರ್ಮದ (Jain Community) ಅನುಯಾಯಿಯೂ ಇದ್ದಾರೆ. ಅಷ್ಟೇ ಅಲ್ಲ, ಪಾರ್ಸಿ ಧರ್ಮ ಮತ್ತು ಸಿಖ್ ಸಮುದಾಯಕ್ಕೆ ಸೇರಿದ ವ್ಯಕ್ತಿಗಳನ್ನೂ ಇಲ್ಲಿ ನೋಡಬಹುದು. ಗಣೇಶ ಚತುರ್ಥಿ ಹಬ್ಬ ಸರ್ವಧರ್ಮಗಳ ಸಮಾಗಮಕ್ಕೆ ವೇದಿಕೆಯಾಗಿದ್ದು ಕನ್ನಡಿಗರಿಗೆ ಅನಂದ ಉಂಟು ಮಾಡಿರುವುದರಲ್ಲಿ ಸಂಶಯವಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ