Sign In

By signing in or creating an account, you agree with Associated Broadcasting Company's Terms & Conditions and Privacy Policy.

MBP hits out at HDK; ನಮ್ಮ ಸರ್ಕಾರವಿನ್ನೂ ಸೆಟ್ಲ್ ಆಗಿಲ್ಲ, ಆಗಲೇ ಕುಮಾರಸ್ವಾಮಿಗೆ ಆರೋಪ ಮಾಡುವ ಆತುರ: ಎಂಬಿ ಪಾಟೀಲ್, ಸಚಿವ

MBP hits out at HDK; ನಮ್ಮ ಸರ್ಕಾರವಿನ್ನೂ ಸೆಟ್ಲ್ ಆಗಿಲ್ಲ, ಆಗಲೇ ಕುಮಾರಸ್ವಾಮಿಗೆ ಆರೋಪ ಮಾಡುವ ಆತುರ: ಎಂಬಿ ಪಾಟೀಲ್, ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 29, 2023 | 4:16 PM

ಕುಮಾರಸ್ವಾಮಿಯವರು ಸತ್ಯಾಂಶವಿಲ್ಲದ ಆರೋಪಗಳನ್ನು ಮಾಡೋದು ಸರಿಯಲ್ಲ ಎಂದು ಸಚಿವ ಪಾಟೀಲ್ ಹೇಳಿದರು.

ಬೆಂಗಳೂರು: ವರ್ಗಾವಣೆ ದಂಧೆ ಶುರುವಾಗಿದೆ ಎಂದು ಜೆಡಿಎಸ್ ಶಾಸಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮಾಡಿರುವ ಅರೋಪಕ್ಕೆ ಸಚಿವ ಎಂಬಿ ಪಾಟೀಲ್ (MB Patil) ತಿರುಗೇಟು ನೀಡಿದ್ದಾರೆ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಪಾಟೀಲ್ ತಮ್ಮ ಸರ್ಕಾರ ಇನ್ನೂ ಸೆಟ್ಲ್ ಆಗೋದ್ರಲ್ಲಿದೆ, ಆದರೆ ಕುಮಾರಸ್ವಾಮಿಯವರಿಗೆ ಆಗಲೇ ಆತುರ ಎಂದರು. ಸರ್ಕಾರ ಇನ್ನೂ ಟೆಂಡರ್ ಗಳನ್ನು ಓಪನ್ ಮಾಡಿಲ್ಲ ಮತ್ತು ಯಾವ ಕಾಮಗಾರಿಗೂ ಹಣ ಬಿಡುಗಡೆ ಮಾಡಿಲ್ಲ, ನಿನ್ನೆ ನಡೆದ ಸಂಪುಟ ಸಭೆಯಲ್ಲಿ (cabinet meeting) ಮುಖ್ಯಮಂತ್ರಿ ಸಿದ್ದರಾಮಯ್ಯ ಟೆಂಡರ್ ಗಳನ್ನು ಪರಿಶೀಲಿಸುವಂತೆ ಹೇಳಿದ್ದಾರೆ ಮತ್ತು ಎಲ್ಲವೂ ಪಾರದರ್ಶಕವಾಗಿರಲಿ ಅಂತ ಸೂಚನೆ ಸಹ ನೀಡಿದ್ದಾರೆ ಎಂದು ಪಾಟೀಲ್ ಹೇಳಿದರು. ಯಾವುದೇ ಇಲಾಖೆಯಿಂದ ಇದುವರೆಗೆ ಟೆಂಡರ್ ಗನ್ನು ಕರೆದಿಲ್ಲ ಮತ್ತು ಹಣವನ್ನೂ ಬಿಡುಗಡೆ ಮಾಡಿಲ್ಲ, ಹಾಗಾಗಿ ಕುಮಾರಸ್ವಾಮಿಯವರು ಸತ್ಯಾಂಶವಿಲ್ಲದ ಆರೋಪಗಳನ್ನು ಮಾಡೋದು ಸರಿಯಲ್ಲ ಎಂದು ಸಚಿವ ಪಾಟೀಲ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ