ದೆಹಲಿಯಲ್ಲಿ ಧರಣಿ ರಾಜ್ಯದ ಜನತೆಗಾಗಿ ಮಾಡುತ್ತಿರುವುದರಿಂದ ಬಿಜೆಪಿ ಸಹ ನಮ್ಮ ಜೊತೆಗೂಡಲಿ: ಜಿ ಪರಮೇಶ್ವರ, ಗೃಹ ಸಚಿವ
ತಮ್ಮ ಸರ್ಕಾರ ರೈತರು ಎದುರಿಸುತ್ತಿರುವ ಸಂಕಷ್ಟಗಳಿಗೆ ಸ್ಪಂದಿಸುತ್ತಿದೆ. ಅವರಿಗೆ ತಲಾ 2,000 ರೂ. ಯಂತೆ ನೀಡಲು ಈಗಾಗಲೇ 645 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದೆ, ಸರ್ಕಾರ ತನ್ನ ಕರ್ತವ್ಯ ಸರಿಯಾಗಿ ನಿಭಾಯಿಸುತ್ತಿದೆ ಎಂದು ಹೇಳಿದ ಪರಮೇಶ್ವರ್, ಖಜಾನೆ ಖಾಲಿಯಾಗಿದೆ ಅಂತ ಬಿಜೆಪಿ ಅಪಪ್ರಚಾರ ಮಾಡುತ್ತಿದೆ, ಇವರು ಯಾವಾಗ ಖಜಾನೆ ಬಳಿ ಹೋಗಿದ್ದರು ಎಂದರು.
ಬೆಂಗಳೂರು: ಕೇಂದ್ರದಿಂದ ಅನುದಾನ ಸಿಗದಿರುವುದನ್ನು ಪ್ರತಿಭಟಿಸಿ ರಾಜ್ಯದ ಕಾಂಗ್ರೆಸ್ ಸರ್ಕಾರ (Karnataka government) ನಾಳೆ ದೆಹಲಿಯಲ್ಲಿ ಧರಣಿ ನಡೆಸಲಿದೆ. ಪ್ರತಿಭಟನೆ ಪಾಲ್ಗೊಳ್ಳುವಂತೆ ರಾಜ್ಯದ ಎಲ್ಲ ಬಿಜೆಪಿ ಸಂಸದರು ಮತ್ತು ಜೆಡಿಎಸ್ ನಾಯಕರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅಹ್ವಾನಿಸಿದ್ದಾರೆ, ಯಾಕೆಂದರೆ ಕಾಂಗ್ರೆಸ್ ಮಾಡುತ್ತಿರೋದು ಪಕ್ಷದ ಹೋರಾಟವಲ್ಲ, ರಾಜ್ಯಕ್ಕೆ ಅಗಿರುವ ಅನ್ಯಾಯ, ಜನರಿಗೆ ಪಡುತ್ತಿರುವ ಸಂಕಷ್ಟಗಳಿಗಾಗಿ ನಡೆಸುವ ಹೋರಾಟವಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ (G Parameshwara) ಹೇಳಿದರು. ಕೇಂದ್ರ ಹಣ ಕೊಟ್ಟಿಲ್ಲ ಅಂತ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ, ದರಣಿಯಿಂದ ಬಿಜೆಪಿ ನಾಯಕರಿಗೆ ಇರುಸು ಮುರುಸು ಉಂಟಾಗುತ್ತಿದ್ದರೆ ದೆಹಲಿಗೆ ಹೋಗಿ ಹಣ ಬಿಡುಗಡೆ ಮಾಡಿಕೊಂಡು ಬರಲಿ ಎಂದು ಪರಮೇಶ್ವರ್ ಹೇಳಿದರು. ತಮ್ಮ ಸರ್ಕಾರ ರೈತರು ಎದುರಿಸುತ್ತಿರುವ ಸಂಕಷ್ಟಗಳಿಗೆ ಸ್ಪಂದಿಸುತ್ತಿದೆ. ಅವರಿಗೆ ತಲಾ 2,000 ರೂ. ಯಂತೆ ನೀಡಲು ಈಗಾಗಲೇ 645 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದೆ, ಸರ್ಕಾರ ತನ್ನ ಕರ್ತವ್ಯ ಸರಿಯಾಗಿ ನಿಭಾಯಿಸುತ್ತಿದೆ ಎಂದು ಹೇಳಿದ ಪರಮೇಶ್ವರ್, ಖಜಾನೆ ಖಾಲಿಯಾಗಿದೆ ಅಂತ ಬಿಜೆಪಿ ಅಪಪ್ರಚಾರ ಮಾಡುತ್ತಿದೆ, ಇವರು ಯಾವಾಗ ಖಜಾನೆ ಬಳಿ ಹೋಗಿದ್ದರು? ಅದು ಖಾಲಿಯಾಗಿದ್ದರೆ, 645 ಕೋಟಿ ರೂ. ಬಿಡುಗಡೆ ಮಾಡೋದು ಹೇಗೆ ಸಾಧ್ಯವಾಗುತಿತ್ತು ಎಂದು ಗೃಹ ಸಚಿವ ಪ್ರಶ್ನಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ