ಹೇಮಾವತಿ ಜಲಾಶಯದ ಪ್ರಾಕೃತಿಕ ಸೊಬಗಿನಲ್ಲಿ ಹರ್ಷದಿಂದ ಕುಣಿದಾಡಿದ ಯುವಕ ಯುವತಿಯರು

|

Updated on: Jul 24, 2024 | 5:40 PM

ಹೇಮಾವತಿ ಜಲಾಶಯದ ಪಕ್ಕ ಪ್ರಕೃತಿಯ ಸೊಬಗನ್ನು ಆಸ್ವಾದಿಸುತ್ತಿರುವ ಯುವಕ ಮತ್ತು ಯುವತಿಯರು ಹುಚ್ಚು ಸಾಹಸಗಳನ್ನು ಮಾಡುತ್ತಿಲ್ಲ. ಸುರಕ್ಷಿತವಾದ ಸ್ಥಳದಲ್ಲಿ ನಿಂತು ಎಂಜಾಯ್ ಮಾಡುತ್ತಿದ್ದಾರೆ. ಯುವತಿಯರನ್ನು ಇಂಪ್ರೆಸ್ ಮಾಡಲು ಸಾಮಾನ್ಯವಾಗಿ ಯುವಕರು ಇಂಥ ಸ್ಥಳಗಳಲ್ಲಿ ಪರಾಕ್ರಮ ಪ್ರದರ್ಶಿಸಲು ಪ್ರಯತ್ನಿಸುತ್ತಾರೆ. ಇಲ್ಲಿ ಅದ್ಯಾವುದೂ ನಡೆಯುತ್ತಿಲ್ಲ.

ಹಾಸನ: ಈ ಯುವಕ ಯುವತಿಯರ ಆನಂದಕ್ಕೆ ಪಾರವೇ ಇಲ್ಲ ಮಾರಾಯ್ರೇ. ಇವರೆಲ್ಲ ಕಾಲೇಜೊಂದಲ್ಲಿ ಪಿಯು ಓದುತ್ತಿರುವ ಮಕ್ಕಳಿರಬಹುದು ಅನಿಸುತ್ತೆ. ಒಬ್ಬ ಹುಡುಗ ಉತ್ತರ ಕರ್ನಾಟಕದವರು ಅಂತ ಹೇಳುವುದು ಕೇಳಿಸುತ್ತದೆ. ಇವರೆಲ್ಲ ಹಾಸನ ತಾಲೂಕಿನ ಗೊರೂರು ಬಳಿಯಿರುವ ಹೇಮಾವತಿ ಜಲಾಶಯ ನೋಡಲು ಕಾಲೇಜಿಂದ ಟ್ರಿಪ್ ಬಂದಿರುತ್ತಾರೆ. ಹಾಸನ ಜಿಲ್ಲೆಯಲ್ಲೂ ಸತತವಾಗಿ ಮಳೆಯಾಗುತ್ತಿರುವ ಸಂಗತಿಯನ್ನು ನಾವು ಹೇಳುತ್ತಲೇ ಇದ್ದೇವೆ. ಅಧಿಕ ಮಳೆಯ ಕಾರಣ ಹೇಮಾವತಿ ಜಲಾಶಯಕ್ಕೆ 23,363 ಕ್ಯೂಸೆಕ್ಸ್ ನೀರು ಹರಿದು ಬಂದಿದೆ. ಹಾಗಾಗಿ ಜಲಾಶಯದಿಂದ 22,000 ಕ್ಯೂಸೆಕ್ಸ್ ನೀರನ್ನು ಹೊರಕ್ಕೆ ಹರಿಬಿಡಲಾಗಿದೆ. ಜಲಾಶಯದಿಂದ ಹೊರ ಧುಮ್ಮುಕ್ಕುತ್ತಿರುವ ನೀರಿನ ರಭಸ ಮತ್ತು ಗಾಳಿಗೆ ತುಂತುರು ನೀರು ಅಕ್ಕಪಕ್ಕ ಸಿಡಿಯುತ್ತಿದ್ದು ಜಲಾಶಯದ ಪಕ್ಕದಲ್ಲಿ ಒಂದು ಸುಂದರ ಮತ್ತು ಮನಮೋಹಕ ದೃಶ್ಯವನ್ನು ಸೃಷ್ಟಿಸಿದೆ. ತಮ್ಮ ದೇಹಗಳನ್ನು ತುಂತುರು ಹನಿಗಳಿಗೆ ಒಡ್ಡುತ್ತಾ ಮೈಯೆಲ್ಲ ತೋಯಿಸಿಕೊಂಡಿರುವ ಯುವಕ ಮತ್ತು ಯುವತಿಯರು ಹಾಡುತ್ತಾ, ಕುಣಿಯುತ್ತಾ, ಚೀರಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   Karnataka Dam Water Level: ಆಲಮಟ್ಟಿ ​ಭರ್ತಿಗೆ 1 ಅಡಿ ಬಾಕಿ, ರಾಜ್ಯದ 14 ಜಲಾಶಯಗಳ ನೀರಿನ ಮಟ್ಟ ವಿವರ ಹೀಗಿದೆ

Follow us on