AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dangerous Bike Stunt: ರೀಲ್ಸ್​​ ಗೀಳು, ಡೇಂಜರ್ ಸ್ಟಂಟ್.. ಹಯಾತ್‌ನಗರದಲ್ಲಿ ಕಣ್ಣೆದುರೇ ಸತ್ತುಹೋದ ಸ್ನೇಹಿತ, ವಿಡಿಯೋ ನೋಡಿ

Dangerous Bike Stunt: ರೀಲ್ಸ್​​ ಗೀಳು, ಡೇಂಜರ್ ಸ್ಟಂಟ್.. ಹಯಾತ್‌ನಗರದಲ್ಲಿ ಕಣ್ಣೆದುರೇ ಸತ್ತುಹೋದ ಸ್ನೇಹಿತ, ವಿಡಿಯೋ ನೋಡಿ

ಸಾಧು ಶ್ರೀನಾಥ್​
|

Updated on: Jul 24, 2024 | 3:50 PM

Share

Dangerous Stunts For Social Media: ಅಲ್ಲಿ ಸಣ್ಣಗೆ ಮಳೆ ಬರುತ್ತಿತ್ತು.. ನೀರಿನಿಂದ ಆವೃತ್ತವಾದ ರಸ್ತೆ ಸವಾರರಿಗೆ ಜಾರಿಕೆಯಾಗಿತ್ತು. ಅಂತಹ ಹೊತ್ತಿನಲ್ಲಿ ಇಬ್ಬರು ಹುಡುಗರು ಅಪಾಯಕಾರಿ ಸಾಹಸಗಳನ್ನು ಮಾಡಿ ಸೋಷಿಯಲ್ ಮೀಡಿಯಾ ರೀಲ್‌ಗಾಗಿ ನಡೆಸಿದ ಪ್ರಯತ್ನ ಈ ದುರಂತಕ್ಕೆ ಕಾರಣವಾಗಿದೆ. ಮಗನನ್ನು ಕಳೆದುಕೊಂಡ ತಾಯಿ ಈಗ ಹೃದಯವಿದ್ರಾವಕವಾಗಿ ಅಳುತ್ತಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ವಿಜೃಂಭಿಸಲು ಮತ್ತು ಲೈಕ್‌ಗಳನ್ನು ಪಡೆಯುವ ಸಲುವಾಗಿ, ಯುವಕರು ತಮ್ಮ ಜೀವನವನ್ನು ಸರತಿ ಸಾಲಿನಲ್ಲಿ ಪಣಕ್ಕೊಡ್ಡುತ್ತಿದ್ದಾರೆ. ಇತ್ತೀಚೆಗೆ, ಬೈಕ್‌ನಲ್ಲಿ ಅಪಾಯಕಾರಿ ಸಾಹಸಗಳು ಸಾಕಷ್ಟು ಜೀವಗಳನ್ನು ಕಳೆದುಕೊಂಡಿವೆ. ಯುವಕನೊಬ್ಬ ತನ್ನ ಸ್ನೇಹಿತನೊಂದಿಗೆ ಬೈಕ್ ನಲ್ಲಿ ಸ್ಟಂಟ್ ಮಾಡುತ್ತಿದ್ದಾಗ ನಿಯಂತ್ರಣ ತಪ್ಪಿ, ಸ್ಕಿಡ್ ಆಗಿ ಪಲ್ಟಿ ಹೊಡೆದಿದ್ದಾನೆ. ಬೈಕ್ ಹಿಂಬದಿ ಕುಳಿತಿದ್ದ ಯುವಕ ಭಯಾಣಕವಾಗಿ ಜಾರಿಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ. ಬೈಕ್ ಚಲಾಯಿಸುತ್ತಿದ್ದ ಹದಿಹರೆಯದ ಸ್ಟೂಡೆಂಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಆಘಾತಕಾರಿ ಘಟನೆ ಹೈದರಾಬಾದ್ ಮಹಾನಗರದ ಉಪನಗರ ಹಯಾತ್‌ನಗರ ಬಳಿ ನಡೆದಿದೆ.

ಅಲ್ಲಿ ಸಣ್ಣಗೆ ಮಳೆ ಬರುತ್ತಿತ್ತು.. ನೀರಿನಿಂದ ಆವೃತ್ತವಾದ ರಸ್ತೆ ಸವಾರರಿಗೆ ಜಾರಿಕೆಯಾಗಿತ್ತು. ಅಂತಹ ಹೊತ್ತಿನಲ್ಲಿ ಇಬ್ಬರು ಹುಡುಗರು ಅಪಾಯಕಾರಿ ಸಾಹಸಗಳನ್ನು ಮಾಡಿ ಸೋಷಿಯಲ್ ಮೀಡಿಯಾ ರೀಲ್‌ಗಾಗಿ ನಡೆಸಿದ ಪ್ರಯತ್ನ ಈ ದುರಂತಕ್ಕೆ ಕಾರಣವಾಗಿದೆ. ಮಗನನ್ನು ಕಳೆದುಕೊಂಡ ತಾಯಿ ಈಗ ಹೃದಯವಿದ್ರಾವಕವಾಗಿ ಅಳುತ್ತಿದ್ದಾರೆ. ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಮಗ ಬೈಕ್ ಸ್ಟಂಟ್ ಗೆ ಬಲಿಯಾಗಿದ್ದಾನೆ ಎಂದು ತಿಳಿದು ಸಹಿಸಲಸಾಧ್ಯವಾಗುತ್ತಿದೆ ಪೋಷಕರಿಗೆ. ಶನಿವಾರ (ಜುಲೈ 20) ಸಂಜೆ ಈ ಬೈಕ್‌ನಲ್ಲಿ ಇಬ್ಬರು ಹೈದರಾಬಾದ್-ವಿಜಯವಾಡ ಹೆದ್ದಾರಿಯ ಅಂಬರ್‌ಪೇಟ್‌ನಲ್ಲಿ ಮಳೆಯ ನಡುವೆಯೇ ಸಾಹಸ ಮಾಡುತ್ತಿದ್ದು, ಈ ದೃಶ್ಯಗಳನ್ನು ಸ್ನೇಹಿತರು ಚಿತ್ರೀಕರಿಸುತ್ತಿದ್ದರು.

ಆದರೆ, ಕೆಲವೇ ಕ್ಷಣಗಳಲ್ಲಿ ಬೈಕ್ ನಿಯಂತ್ರಣ ತಪ್ಪಿ, ಇಬ್ಬರೂ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡ ಇಬ್ಬರೂ ಸ್ನೇಹಿತರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಶಿವ ಎಂಬ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾನೆ. ಬೈಕ್ ಚಲಾಯಿಸುತ್ತಿದ್ದ ಯುವಕ ಗಾಯಗೊಂಡಿದ್ದಾನೆ. ಮಗನ ಸಾವನ್ನು ಕಂಡ ತಂದೆ ತಾಯಿಯ ದುಃಖ ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ. ಏತನ್ಮಧ್ಯೆ, ಘಟನೆಗೆ ಸಂಬಂಧಿಸಿದಂತೆ ಹಯಾತ್‌ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.