ಕಳಪೆ ಕಾಮಗಾರಿ; ಹೊಳೆನರಸೀಪುರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳಚಿಬಿದ್ದ ಮೇಲ್ಸೇತುವೆ ಸ್ಲ್ಯಾಬ್ಗಳು, ವಾಹನ ಸಂಚಾರ ಸ್ಥಗಿತ
ಕಳಪೆ ಕಾಮಗಾರಿಯಿಂದಾಗಿ ಸೇತುವೆಯ ಸ್ಲ್ಯಾಬ್ ಗಳು ಕಳಚಿಬಿದ್ದಿವೆ. ಮತ್ತೊಮ್ಮೆ ಮಳೆ ಜೋರಾಗಿ ಸುರಿಯಲಾರಂಭಿಸಿದರೆ ಪೂರ್ತಿ ಸೇತುವೆಯೇ ಕುಸಿದುಬೀಳುವ ಅಪಾಯವಿದೆ.
ಹಾಸನ: ಜಿಲ್ಲೆಯಲ್ಲಿ ಒಂದು ವಾರಕ್ಕಿಂತ ಹೆಚ್ಚಿನ ಅವಧಿಯಿಂದ ಸುರಿಯುತ್ತಿದ್ದ ಮಳೆ ನಿಂತಿದೆ ಆದರೆ ಅನಾಹುತಗಳು ಇನ್ನೂ ಸಂಭವಿಸುತ್ತಿವೆ. ಕೆಲ ಗ್ರಾಮಗಳಲ್ಲಿ ಮನೆ ಕುಸಿದ ಮತ್ತು ವೃದ್ಧೆಯೊಬ್ಬರು ಬಲಿಯಾದ ವರದಿ ನಾವು ಪ್ರಕಟಿಸಿದ್ದೇವೆ. ಇಲ್ನೋಡಿ, ಇದು ರಾಷ್ಟ್ರೀಯ ಹೆದ್ದಾರಿ (national highway) 373 ರಲ್ಲಿ ನಿರ್ಮಿಸಿರುವ ಮೇಲ್ಸೇತುವೆ (overbridge). ಸೇತುವೆ ಹೊಳನರಸೀಪುರದ ಹಂಗರಹಳ್ಳಿ ಬಳಿಯಿದೆ. ಕಳಪೆ ಕಾಮಗಾರಿಯಿಂದಾಗಿ (substandard works) ಸೇತುವೆಯ ಸ್ಲ್ಯಾಬ್ ಗಳು ಕಳಚಿಬಿದ್ದಿವೆ. ಮತ್ತೊಮ್ಮೆ ಮಳೆ ಜೋರಾಗಿ ಸುರಿಯಲಾರಂಭಿಸಿದರೆ ಪೂರ್ತಿ ಸೇತುವೆಯೇ ಕುಸಿದುಬೀಳುವ ಅಪಾಯವಿದೆ. ಇದನ್ನು ಮನಗಂಡೇ ಬೇಲೂರು-ಬಿಳಿಕೆರೆ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಡೈವರ್ಟ್ ಮಾಡಲಾಗಿದೆ. ವಾಹ ಸವಾರರು ಮತ್ತು ಸ್ಥಳೀಯರು ಕಳಪೆ ಕಾಮಗಾರಿಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳನ್ನು ದೂಷಿಸುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos