Loading video

ಬೆಲ್ಲ ತಯಾರಿಕೆಯಲ್ಲಿ ಮೊದಲು ಕೆಮಿಕಲ್ ಬಳಸಲಾಗುತಿತ್ತು, ಈಗ ಯಾರೂ ಅಂಥ ದುಸ್ಸಾಹಸಕ್ಕೆ ಕೈಹಾಕಲ್ಲ: ಆಲೆಮನೆ ಮಾಲೀಕ

|

Updated on: Mar 05, 2025 | 11:13 AM

ಆಲೆಮನೆಯೊಂದರಲ್ಲಿ ಬೆಲ್ಲ ತಯಾರಿಸುವ ವಿಧಾನದ ಬಗ್ಗೆ ಟಿವಿ9 ವರದಿಗಾರ ನಿಖರವಾದ ಮಾಹಿತಿಯನ್ನು ನೀಡಿದ್ದಾರೆ. ರೈತರಿಂದ ಖರೀದಿಸಲ್ಪಡುವ ಕಬ್ಬನ್ನು ಗಾಣದಲ್ಲಿ ಹಾಕಿ ಅದರಿಂದ ರಸವನ್ನು ತೆಗೆಯುತ್ತಾರೆ. ರಸವು ನಿರ್ದಿಷ್ಟವಾದ ಉಷ್ಣಾಂಶದಲ್ಲಿ ಕಾದಿರುವ ಕೊಪ್ಪರಿಗೆ ಹರಿದು ಬಂದು ಬೆಲ್ಲದ ಪಾಕವಾಗಿ ಮಾರ್ಪಡುತ್ತದೆ. ಪಾಕವನ್ನು ಅಚ್ಚುಗಳಿಗೆ ಹಾಕಿ ಅಚ್ಚು ಬೆಲ್ಲ ತಯಾರಿಸುತ್ತಾರೆ. ಇದೇ ಆಲೆಮನೆಯಲ್ಲಿ ಮುದ್ದೆ ಬೆಲ್ಲ ಮತ್ತು ಪುಡಿ ಬೆಲ್ಲ ಕೂಡ ತಯಾರಾಗುತ್ತದೆ.

ಮಂಡ್ಯ, ಮಾರ್ಚ್ 05 : ನಾವೆಲ್ಲ ತಿನ್ನುವ ಬೆಲ್ಲ (jaggery) ಶುದ್ಧವೇ, ಅದರಲ್ಲಿ ಕಲಬೆರಕೆ ಇಲ್ಲವೇ? ಬೆಲ್ಲ ಆಕರ್ಷಕವಾಗಿ ಕಾಣಲು, ಅದರಲ್ಲಿ ಸಿಹಿ ಅಂಶವನ್ನ ಹೆಚ್ಚಿಸಲು ರಾಸಾಯನಿಕಗಳನ್ನು ಬಳಸಲಾಗುತ್ತದೆಯೇ? ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಇತ್ತೀಚಿಗೆ ನೀಡಿರುವ ಮಾಹಿತಿಯ ಪ್ರಕಾರ ಬೆಲ್ಲವೂ ಕೆಮಿಕಲ್ ಮುಕ್ತವಲ್ಲ. ಅದನ್ನು ಪರೀಕ್ಷಿಸಲೆಂದು ಸಕ್ಕರೆ ನಗರಿ ಎಂದು ಕರೆಸಿಕೊಳ್ಳುವ ಮಂಡ್ಯದ ಆಲೆಮನೆಯೊಂದಕ್ಕೆ ನಮ್ಮ ಸ್ಥಳೀಯ ವರದಿಗಾರ ಭೇಟಿ ನೀಡಿ ಅದರ ಮಾಲೀಕರೊಂದಿಗೆ ಮಾತಾಡಿದ್ದಾರೆ. ಮಾಲೀಕ ಚಂದ್ರು ದೃಢವಾಗಿ ಹೇಳುವಂತೆ ಬೆಲ್ಲ ತಯಾರಿಕೆಯಲ್ಲಿ ಮೊದಲು ರಾಸಾಯನಿಕಗಳನ್ನು ಬಳಸಲಾಗುತಿತ್ತು, ಆದರೆ ಈಗ ಯಾರೂ ಬಳಸುತ್ತಿಲ್ಲ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕಲ್ಲಂಗಡಿ ಹಣ್ಣುಗಳಲ್ಲಿ ವಿಷಕಾರಕ ಕೆಮಿಕಲ್ ಪತ್ತೆಗೆ ಮುಂದಾದ ಆಹಾರ ಇಲಾಖೆಯ ಅಧಿಕಾರಿಗಳು