ಬರೋಬ್ಬರಿ 40 ಅಡಿ ಆಳದ ನೀರಿಲ್ಲದ ಬಾವಿಗೆ ಬಿದ್ದ ಎತ್ತು: ಅಗ್ನಿಶಾಮಕ ದಳ ಸಿಬ್ಬಂದಿಗಳಿಂದ ರಕ್ಷಣೆ
40 ಅಡಿ ಆಳದ ನೀರಿಲ್ಲದ ಬಾವಿಗೆ ಬಿದ್ದಿದ್ದ ಎತ್ತು ರಕ್ಷಣೆ ಮಾಡಿರುವಂತಹ ರೋಚಕ ಘಟನೆ ಒಂದು ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅಂಬ್ರಾಯಿ ಬಳಿಯ ಸಾತಗೇರಿ ಗ್ರಾಮದಲ್ಲಿ ನೀರು ಅರಸಿ ಬಂದಾಗ ಆಕಸ್ಮಿಕವಾಗಿ ಎತ್ತು ಬಾವಿಗೆ ಬಿದ್ದಿದೆ.
ಕಾರವಾರ: 40 ಅಡಿ ಆಳದ ನೀರಿಲ್ಲದ ಬಾವಿಗೆ ಬಿದ್ದಿದ್ದ ಎತ್ತು (Ox) ರಕ್ಷಣೆ ಮಾಡಿರುವಂತಹ ರೋಚಕ ಘಟನೆ ಒಂದು ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅಂಬ್ರಾಯಿ ಬಳಿಯ ಸಾತಗೇರಿ ಗ್ರಾಮದಲ್ಲಿ ನೀರು ಅರಸಿ ಬಂದಾಗ ಆಕಸ್ಮಿಕವಾಗಿ ಎತ್ತು ಬಾವಿಗೆ ಬಿದ್ದಿದೆ. ಅದರ ನರಳಾಟ ಕಂಡು ಸ್ಥಳೀಯರು ರಕ್ಷಣೆಗೆ ಮುಂದಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿಗಳು ಒಂದು ಗಂಟೆಗಳ ನಿರಂತರ ಕಾರ್ಯಚರಣೆ ಮೂಲಕ ಎತ್ತನ್ನು ರಕ್ಷಣೆ ಮಾಡಲಾಗಿದೆ. ಎತ್ತಿಗೆ ಸಣ್ಣಪುಟ್ಟ ಗಾಯ ಹಿನ್ನೆಲೆ ಪಶು ಆಸ್ಪತ್ರೆ ಸಿಬ್ಬಂದಿಯಿಂದ ಚಿಕಿತ್ಸೆ ನೀಡಲಾಗಿದೆ. ಸದ್ಯ ಅಗ್ನಿಶಾಮಕ ದಳ ಸಿಬ್ಬಂದಿಗಳ ರೋಚಕ ರಕ್ಷಣೆ ಕಾರ್ಯಚರಣೆ ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.