ಗ್ಯಾರಂಟಿ ಜಾರಿಗೊಳಿಸುವ ಸರ್ಕಾರದ ಘೋಷಣೆ ಸ್ವಾಗತಿಸುತ್ತೇನೆ, ಆದರೆ ಹಣಕಾಸಿನ ಮೂಲದ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು: ನಳಿನ್ ಕುಮಾರ್ ಕಟೀಲ್
ಸರ್ಕಾರದ ಮೇಲೆ ಹೊರೆ ಹೆಚ್ಚಾಗಿ ಅದು ಜನರ ಮೇಲೆ ಟ್ರಾನ್ಸ್ಫರ್ ಆಗಬಾರದು ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಮಂಗಳೂರು: ಸಿದ್ದರಾಮಯ್ಯ (Siddaramaiah) ನೇತೃತ್ವದ ಕಾಂಗ್ರೆಸ್ ಪಕ್ಷ ಚುನಾವಣೆ ಸಮಯದಲ್ಲಿ ಜನರಿಗೆ ನೀಡಿದ 5 ಗ್ಯಾರಂಟಿಗಳನ್ನು (5 Guarantees) ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಈಡೇರಿಸುವುದಾಗಿ ಹೇಳಿತ್ತು, ಆದರೆ ಜನ ಮತ್ತು ವಿರೋಧ ಪಕ್ಷಗಳ ಒತ್ತಡ ಹೆಚ್ಚಿದಾಗ 15 ದಿನಗಳ ಬಳಿಕ ಅವುಗಳನ್ನು ಜಾರಿಗೊಳಿಸಿದೆ, ಗ್ಯಾರಂಟಿಗಳೆಲ್ಲ ಜನಪರವಾಗಿರುವುದರಿಂದ ಅವುಗಳನ್ನು ಸ್ವಾಗತಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalim Kumar Kateel) ಇಂದು ಮಂಗಳೂರಲ್ಲಿ ಹೇಳಿದರು. ಮಾಧ್ಯಮದವರೊಂದಿಗೆ ಮಾತಾಡಿದ ಕಟೀಲ್, ಗ್ಯಾರಂಟಿಗಳನ್ನು ಕಾರ್ಯರೂಪಕ್ಕೆ ತರಲು ಅಪಾರ ಪ್ರಮಾಣದ ಹಣ ಬೇಕಾಗುತ್ತದೆ, ಆ ಹಣವನ್ನು ಹಣವನ್ನು ಹೇಗೆ ಕ್ರೋಢೀಕರಿಸಲಾಗುತ್ತದೆ, ಹಣದ ಮೂಲಗಳು ಯಾವವು ಅನ್ನೋದರ ಬಗ್ಗೆ ಸರ್ಕಾರ ಒಂದು ಶ್ವೇತಪತ್ರ ಹೊರಡಿಸಬೇಕು ಎಂದು ಹೇಳಿದರು. ಸರ್ಕಾರದ ಮೇಲೆ ಹೊರೆ ಹೆಚ್ಚಾಗಿ ಅದು ಜನರ ಮೇಲೆ ಟ್ರಾನ್ಸ್ ಫರ್ ಆಗಬಾರದು ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ