Video: ಉನ್ನಾವೋದಲ್ಲಿ ವ್ಯಕ್ತಿಯನ್ನು ತುಳಿದು ಕೊಂದ ಎತ್ತು
ಎತ್ತೊಂದು ವ್ಯಕ್ತಿಯನ್ನು ತುಳಿದು ಕೊಂದಿರುವ ಘಟನೆ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದಿದೆ. ಗಾಂಧಿನಗರದ ತಿರಹಾ ಬಳಿ ಬೈಕ್ ಎತ್ತಿಗೆ ಡಿಕ್ಕಿ ಹೊಡೆದು ಬಿದ್ದಿದೆ. ಬೈಕ್ನ ಹಿಂದೆ ಕುಳಿತಿದ್ದ ವ್ಯಕ್ತಿಯನ್ನು ಹಲವು ಬಾರಿ ಎತ್ತು ತುಳಿದಿದ್ದು ಬಳಿಕ ಅವರು ಸಾವನ್ನಪ್ಪಿದ್ದಾರೆ.ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಸದರ್ ಕೊತ್ವಾಲಿಯ ಗಾಂಧಿ ನಗರ ಮೊಹಲ್ಲಾ ನಿವಾಸಿ ಸುಶೀಲ್ ಬಾಜ್ಪೈ (40), ಓಂಕಾರ್ ಅವರ ಪುತ್ರ ಹಾಗೂ ಅವರ ಸೋದರಳಿಯ ಶುಭಂ (29) ಅವರೊಂದಿಗೆ ಶನಿವಾರ ಮಧ್ಯಾಹ್ನ ಬೈಕ್‌ನಲ್ಲಿ ಮಾರುಕಟ್ಟೆಗೆ ಹೋಗಿದ್ದರು.
ಉನ್ನಾವೋ, ಜೂನ್ 1: ಎತ್ತೊಂದು ವ್ಯಕ್ತಿಯನ್ನು ತುಳಿದು ಕೊಂದಿರುವ ಘಟನೆ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದಿದೆ. ಗಾಂಧಿನಗರದ ತಿರಹಾ ಬಳಿ ಬೈಕ್ ಎತ್ತಿಗೆ ಡಿಕ್ಕಿ ಹೊಡೆದು ಬಿದ್ದಿದೆ. ಬೈಕ್ನ ಹಿಂದೆ ಕುಳಿತಿದ್ದ ವ್ಯಕ್ತಿಯನ್ನು ಹಲವು ಬಾರಿ ಎತ್ತು ತುಳಿದಿದ್ದು ಬಳಿಕ ಅವರು ಸಾವನ್ನಪ್ಪಿದ್ದಾರೆ.ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಸದರ್ ಕೊತ್ವಾಲಿಯ ಗಾಂಧಿ ನಗರ ಮೊಹಲ್ಲಾ ನಿವಾಸಿ ಸುಶೀಲ್ ಬಾಜ್ಪೈ (40), ಓಂಕಾರ್ ಅವರ ಪುತ್ರ ಹಾಗೂ ಅವರ ಸೋದರಳಿಯ ಶುಭಂ (29) ಅವರೊಂದಿಗೆ ಶನಿವಾರ ಮಧ್ಯಾಹ್ನ ಬೈಕ್‌ನಲ್ಲಿ ಮಾರುಕಟ್ಟೆಗೆ ಹೋಗಿದ್ದರು.
ವಸ್ತುಗಳನ್ನು ತೆಗೆದುಕೊಂಡು ಹಿಂದಿರುಗುತ್ತಿದ್ದಾಗ ಘಟನೆ ನಡೆದಿದೆ. ಇಬ್ಬರನ್ನೂ ಆಂಬ್ಯುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸುಶೀಲ್ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದರು. ಶುಭಂ ಅವರಿಗೆ ಚಿಕಿತ್ಸೆ ನೀಡಲಾಯಿತು.ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಕೊತ್ವಾಲ್ ಅವನೀಶ್ ಸಿಂಗ್ ತಿಳಿಸಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ