ಗುರುತಿನ ಚೀಟಿ ಇಲ್ಲದೆ ಮತ ಎಣಿಕೆ ಕೇಂದ್ರಕ್ಕೆ ನುಗ್ಗಿದ ಹನುಮಂತ ನಿರಾಣಿಯ ಪಿಎಯನ್ನು ಬೆಳಗಾವಿ ಡಿಸಿ ಗದರಿ ಹೊರಗೆ ಕಳಿಸಿದರು!
ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ಐಡಿ ಕಾರ್ಡ್ ಇಲ್ಲದೆ ಹೇಗೆ ಬಂದಿರಿ ಅಂತ ದಬಾಯಿದರಲ್ಲದೆ, ದ್ವಾರದ ಬಳಿ ನಿಂತಿದ್ದ ಅಧಿಕಾರಿಗಳಿಗೆ ಅವರನ್ನು ಹೊರಗೆ ಕಳುಹಿಸಿ ಅಂತ ಕೂಗಿ ಹೇಳುತ್ತಾರೆ. ಪಾಪ ಪಿಎ ಪೆಚ್ಚುಮೋರೆ ಹಾಕಿಕೊಂಡು ಹೊರಗೆ ಹೋಗುತ್ತಾರೆ.
ಬೆಳಗಾವಿ: ಅಧಿಕಾರಿಗಳೆಂದರೆ ಹೀಗಿರಬೇಕು ಮಾರಾಯ್ರೇ. ವಿಧಾನ ಪರಿಷತ್ ವಾಯುವ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹನುಮಂತ ನಿರಾಣಿ (Hanumanth Nirani) ಅವರ ಅಪ್ತ ಸಹಾಯಕ (PA) ಅಂತ ಹೇಳಿಕೊಂಡು ವ್ಯಾಲಿಡ್ ಪಾಸ್ ಇಲ್ಲದೆ ಮತ ಎಣಿಕೆ ಕೇಂದ್ರಕ್ಕೆ ನುಗ್ಗಿದ ಸುರೇಶ್ ಎನ್ನುವ ವ್ಯಕ್ತಿಯನ್ನು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ (Nitesh Patil) ಅವರು ಐಡಿ ಕಾರ್ಡ್ ಇಲ್ಲದೆ ಹೇಗೆ ಬಂದಿರಿ ಅಂತ ದಬಾಯಿದರಲ್ಲದೆ, ದ್ವಾರದ ಬಳಿ ನಿಂತಿದ್ದ ಅಧಿಕಾರಿಗಳಿಗೆ ಅವರನ್ನು ಹೊರಗೆ ಕಳುಹಿಸಿ ಅಂತ ಕೂಗಿ ಹೇಳುತ್ತಾರೆ. ಪಾಪ ಪಿಎ ಪೆಚ್ಚುಮೋರೆ ಹಾಕಿಕೊಂಡು ಹೊರಗೆ ಹೋಗುತ್ತಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.