ಹೊಂಡ ಕಂಡಾಕ್ಷಣ ದೇಹ ತಂಪಾಗಿಸಿಕೊಳ್ಳಲು ನೀರಿಗಿಳಿದ ಆನೆಹಿಂಡು, ಜಲಕ್ರೀಡೆಯ ಸುಂದರ ದೃಶ್ಯ

Updated on: Apr 03, 2025 | 10:47 AM

ಈಗಾಗಲೇ ವರದಿಯಾಗಿರುವ ಹಾಗೆ ಈ ಬಾರಿಯ ಬೇಸಿಗೆ ಹಿಂದೆಂದಿಗಿಂತಲೂ ತೀಕ್ಷ್ಣವಾಗಿದೆ. ವಿಶ್ವದಾದ್ಯಂತ ಕನಿಷ್ಠ ಮತ್ತು ಗರಿಷ್ಠ ಉಷ್ಣಾಂಶದಲ್ಲಿ 2 ಡಿಗ್ರೀ ಸೆಲ್ಸಿಯಸ್ ನಷ್ಟು ಏರಿಕೆಯಾಗಿದೆ. ನಾಗರಹೊಳೆ ಅರಣ್ಯ ಪ್ರದೇಶದಲ್ಲಿರುವ ಕೆರೆಕುಂಟೆಗಳಲ್ಲಿ ನೀರು ಬತ್ತಿ ಹೋಗಿರುವುದರಿಂದ ಹೊಂಡಗಳಲ್ಲಿ ಟ್ಯಾಂಕರ್​ಗಳಿಂದ ನೀರು ತುಂಬಿಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡುತ್ತಿದೆ.

ಚಾಮರಾಜನಗರ, ಏಪ್ರಿಲ್ 3:  ಕಡು ಬೇಸಿಗೆಯ ಮಧ್ಯಭಾಗವಿದು, ರಾಜ್ಯದೆಲ್ಲೆಡೆ ರಣಬಿಸಿಲು. ಅರಣ್ಯಪ್ರದೇಶಗಳಲ್ಲಿ ವನ್ಯಪ್ರಾಣಿಗಳಿಗೆ (wild animals ) ನೀರಿನ ಸಮಸ್ಯೆ ಎದುರಾಗಿದೆ. ಜಿಲ್ಲೆಯ ಹನೂರು ತಾಲ್ಲೂಕಿನ ವಡಕೆಹಳ್ಳ ರಸ್ತೆಯಲ್ಲಿರುವ ಚಿಕ್ಕ ನೀರಿನ ಹೊಂಡವೊಂದರಲ್ಲಿ ಸ್ವಚ್ಛವಲ್ಲದಿದ್ದರೂ ನೀರನ್ನು ಕಂಡ ಆನೆಗಳ ಗುಂಪಿಗೆ ಖುಷಿಯೋ ಖುಷಿ. ನಾಲ್ಕು ಆನೆಗಳು ಜಲಕ್ರೀಡೆ ನಡೆಸುವ ದೃಶ್ಯ ವಾಹನವಾರರ ಮೊಬೈಲ್ ಫೋನ್​ಗಳಲ್ಲಿ ಸೆರೆಯಾಗಿದೆ. ಆನೆಗಳು ಸೊಂಡಿಲುಗಳಿಂದ ನೀರನ್ನು ಮೈಮೇಲೆ ಹುಯ್ಯಿದುಕೊಂಡು ಸುಡುವ ಬಿಸಿಲಿಂದ ತಾತ್ಕಾಲಿಕ ನಿರಾಳತೆ ಪಡೆಯುವ ಪ್ರಯತ್ನದಲ್ಲಿವೆ.

ಇದನ್ನೂ ಓದಿ:  ನಾಗರಹೊಳೆ ಅಭಯಾರಣ್ಯದಲ್ಲಿ ವನ್ಯಜೀವಿಗಳಿಗೆ ನೀರಿನ ಹಾಹಾಕಾರ, ಟ್ಯಾಂಕರ್ ಮೂಲಕ ಕೆರೆಕುಂಟೆಗಳಿಗೆ ನೀರು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: Apr 03, 2025 10:35 AM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More