ಮೋದಿ ಮೆಚ್ಚುಗೆಗೆ ಬಾಗಲಕೋಟೆಯ ಪದಗಾರ ವೆಂಕಪ್ಪ ಸುಗತೇಕರ್ ಫುಲ್ ಖುಷ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 25, 2024 | 3:57 PM

ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಇಂದು (ಫೆ.25) ನಡೆಸಿಕೊಟ್ಟ 110ನೇ ಮನ್​ ಕೀ ಬಾತ್ (Mann Ki Baat)​ (ರೇಡಿಯೋ ಕಾರ್ಯಕ್ರಮದಲ್ಲಿ ಬಾಗಲಕೋಟೆಯ (Bagalakote) ಗೊಂದಲಿ ಪದ (Gondhali Pada) ಹಾಡುಗಾರ ವೆಂಕಪ್ಪ ಅಂಬಾಜಿ ಸುಗತೇಕರ್ (Venkappa Ambaji Sugtekr) ಅವರನ್ನು ಗುಣಗಾನ ಮಾಡಿದರು. ಈ ಹಿನ್ನಲೆ ವೆಂಕಪ್ಪ ಅವರು, ಮನೆಯಲ್ಲಿ ಮಕ್ಕಳ‌ ಜೊತೆ ಗೊಂದಲಿ ಪದ ಹಾಡುವ ಮೂಲಕ ಸಂತಸಪಟ್ಟಿದ್ದಾರೆ.

ಬಾಗಲಕೋಟೆ, ಫೆ.25: ಬಾಗಲಕೋಟೆ (Bagalakote) ನವನಗರದ ನಿವಾಸಿ ಗೊಂದಲಿ ಪದ ಹಾಡುಗಾರನ ಬಗ್ಗೆ ಮನ್ ಕಿ ಬಾತ್​ನಲ್ಲಿ ಮೋದಿ ಗುಣಗಾನ ಹಿನ್ನೆಲೆ ಗೊಂದಲಿ ಪದಗಾರ ವೆಂಕಪ್ಪ ಸುಗತೇಕರ್(Venkappa Ambaji Sugatekar) ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಮನೆಯಲ್ಲಿ ಮಕ್ಕಳ‌ ಜೊತೆ ಗೊಂದಲಿ ಪದ ಹಾಡುವ ಮೂಲಕ ಸಂತಸಪಟ್ಟಿದ್ದಾರೆ. ಈ ಕುರಿತು ಟಿವಿ9 ಜೊತೆ ಮಾತನಾಡಿದ ಅವರು, ‘ ಮೋದಿ ಅವರು ನಮ್ಮ ಬಗ್ಗೆ ಮಾತಾಡಿದ್ದು ಕೇಳಿ ಬಹಳ ಆನಂದವಾಯಿತು. ನಮ್ಮ ಈ ಸೇವೆ ಪೂರ್ವಜರಿಂದ ಬಂದಿದೆ. ನಾನು ಓದಿಲ್ಲ, ನಮ್ಮ ತಂದೆ ಹಾಗೂ ಅಜ್ಜ ಕೂಡ ಓದಿಲ್ಲ. ಬರಿ ಪದ ಕಲಿಸುತ್ತಿದ್ದರು, ಕಥೆ ಹೇಳುತ್ತಿದ್ದರು. ಅಂಬಾಭವಾನಿ ಆಶೀರ್ವಾದದಿಂದ ಆಕಾಶವಾಣಿ, ದೂರದರ್ಶನ ಸೇರಿದಂತೆ ಎಲ್ಲ ಕಡೆ ಹಾಡಿದ್ದೇನೆ. ಇದೀಗ ನಮ್ಮನ್ನ ಗುರುತಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಮ್ಮನ್ನು ಹೊಗಳಿದಾರೆ ಅಂದರೆ ಜೀವನ ಸಾರ್ಥಕವಾಯ್ತು. ಇಂತಹ ವಯಸ್ಸಲ್ಲೂ ನಾವು ಇದೇ ಸೇವೆ ಮಾಡುತ್ತೀವಿ. ಎಲ್ಲರೂ ನಮಗೆ ಆಹ್ವಾನ ನೀಡುತ್ತಾರೆ. ಇನ್ನು ನನ್ನ ಮಕ್ಕಳು ಹಾಗೂ ಮೊಮ್ಮಕ್ಕಳು ಕೂಡ ಗೊಂದಲಿ ಪದ ಸಂಪ್ರದಾಯ ಮುಂದುವರೆಸಿದ್ದಾರೆ ಎಂದು ಸಂತಸ ಹಂಚಿಕೊಂಡರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ