My India My Life Goals: ಸಸಿ ನೆಡಲು ಹಣವಿಲ್ಲದಾದಾಗ ಕೋಟಿಮರವೀರ ಪದ್ಮಶ್ರೀ ರಾಮಯ್ಯ ತಮ್ಮ ಮೂರೆಕರೆ ಜಮೀನು ಮಾರಿಬಿಟ್ಟರು!

|

Updated on: Aug 07, 2023 | 5:04 PM

ಅವರ ಪರಿಸರ ಕಾಳಜಿ ಮತ್ತು ಪ್ರತಿದಿನ ಸಸಿ ನೆಡುವ ಕಾಯಕ ನೋಡಿದವರು ಹುಚ್ಚ ಅಂತ ಜರಿಯುತ್ತಿದ್ದರಂತೆ. ಆದರೆ ಜನರ ಕುಹುಕ, ವ್ಯಂಗ್ಯಕ್ಕೆ ಕ್ಯಾರೆ ಅನ್ನದ ಅವರು ಒಬ್ಬ ತಪಸ್ವೀಯಂತೆ ತಮ್ಮನ್ನು ಸಸಿ ನೆಡುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ.

ಬೆಂಗಳೂರು: ಪರಿಸರ ಮೇಲಿನ ಪ್ರೀತಿ ಮತ್ತು ಕಾಳಜಿಗೆ ಪದ್ಮಶ್ರೀ ದಾರಿಪಲ್ಲಿ ರಾಮಯ್ಯ (Daripalli Ramaiah) ಅವರಿಗಿಂತ ದೊಡ್ಡ ಉದಾಹರಣೆ ಮತ್ತೊಂದಿರಲಾರದು. 86ರ ಇಳಿವಯಸ್ಸಿನಲ್ಲೂ ಪ್ರತಿದಿನ ಸಸಿ ನೆಡಲು ತಮ್ಮ ಸ್ಕೂಟರ್ ಮೇಲೆ ಹೊರಬೀಳುವ ರಾಮಯ್ಯ ಇದುವರೆಗೆ ಒಂದು ಕೋಟಿಗೂ (more than a crore) ಹೆಚ್ಚು ಸಸಿ ನೆಟ್ಟು ಪೋಷಿಸಿದ್ದಾರೆಂದರೆ ಅವರ ವೃಕ್ಷಪ್ರೇಮ ಎಷ್ಟು ಅಗಾಧ ಅಂತ ಕಲ್ಪಿಸಿಕೊಳ್ಳಿ. ತೆಲಂಗಾಣದ ಖಮ್ಮಮ್ ಜಿಲ್ಲೆಯ ರೆಡ್ಡಿಪಲ್ಲಿಯಲ್ಲಿ ಜನಸಿರುವ ರಾಮಯ್ಯ ಅವರ ಪರಿಸರ ಕಾಳಜಿ ಮತ್ತು ಪ್ರತಿದಿನ ಸಸಿ ನೆಡುವ ಕಾಯಕ ನೋಡಿದವರು ಹುಚ್ಚ ಅಂತ ಜರಿಯುತ್ತಿದ್ದರಂತೆ. ಆದರೆ ಜನರ ಕುಹುಕ, ವ್ಯಂಗ್ಯಕ್ಕೆ ಕ್ಯಾರೆ ಅನ್ನದ ಅವರು ಒಬ್ಬ ತಪಸ್ವೀಯಂತೆ ತಮ್ಮನ್ನು ಸಸಿ ನೆಡುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಇವರ ಪರಿಸರ ಕಾಳಜಿಯನ್ನು ಗಮನಿಸಿದ ಕೇಂದ್ರ ಸರ್ಕಾರ 2017 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. ಅದೊಮ್ಮೆ ಇವರಲ್ಲಿ ಬೀಜ ಕೊಳ್ಳಲು ಹಣವಿಲ್ಲದ ಸ್ಥಿತಿ ಎದುರಾಯಿತಂತೆ. ಆಗ ಈ ಹಿರಿಜೀವಿ ತಮ್ಮ ಮೂರು ಎಕರೆ ಜಮೀನು ಮಾರಿ ಬೀಜ ಖರೀದಿಸಿದರಂತೆ! ಎಂಥ ನಿಸ್ವಾರ್ಥ ಮನೋಭಾವ ಎಂಥ ಪರಿಸರ ಪ್ರೇಮ! ಇವರು ಜೀವಿಸುವ ಗ್ರಹದಲ್ಲೇ ನಾವು ಜೀವಿಸುತ್ತಿರೋದು ನಮ್ಮ ಪುಣ್ಯವಲ್ಲದೆ ಮತ್ತೇನೂ ಅಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ