ಮದ್ವೆಯಾದ ಆರೇ ದಿನಕ್ಕೆ ನೌಕಾಪಡೆ ಅಧಿಕಾರಿ ಸಾವು: ಹೆಂಡ್ತಿಯೊಂದಿಗಿನ ಕೊನೆ ರೀಲ್ಸ್
ನೌಕಾಪಡೆ ಅಧಿಕಾರಿ ವಿನಯ್ ನರ್ವಾಲ್ ಅಂತ್ಯಕ್ರಿಯೆ ಹರಿಯಾಣದ ಕರ್ನಾಲ್‌ನಲ್ಲಿ ನೆರವೇರಿದ್ದು, ಸೋದರಿ ವಿನಯ್ ನರ್ವಾಲ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಆದ್ರೆ, ಇದೀಗ ವಿನಯ್ ನರ್ವಾಲ್ ಅವರು ಹನಿಮೂನ್ ಟ್ರಿಪ್ ವೇಳೆ ಪಹಲ್ಗಾಮ್ ಹೆಂಡ್ತಿಯೊಂದಿಗೆ ಡ್ಯಾನ್ಸ್ ಮಾಡಿರುವ ಕೊನೆಯ ವಿಡಿಯೋ ಲಭ್ಯವಾಗಿದ್ದು, ಈ ವಿಡಿಯೋ ನೋಡಿದರೆ ನೀರು ತರಿಸುತ್ತೆ.
ಶ್ರೀನಗರ, (ಏಪ್ರಿಲ್ 23): ಲೆಫ್ಟಿನೆಂಟ್ ವಿನಯ್ ನರ್ವಾಲ್ ಮದುವೆಯಾದ ಆರೇ ದಿನದಲ್ಲಿ ಉಗ್ರರ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಮದುವೆಯಾದ ಖುಷಿಯಲ್ಲಿ ಪತ್ನಿಯೊಂದಿಗೆ ಪಹಲ್ಗಾಮ್ ಹನಿಮೂನ್ ಟ್ರಿಪ್ ಹೋಗಿದ್ದರು. ಆದ್ರೆ, ಭಯೋತ್ಪಾದಕ ದಾಳಿಯಲ್ಲಿ ವಿನಯ್ ನರ್ವಾಲ್ ಮೃತಪಟ್ಟಿದ್ದು, ವಿವಾಹವಾದ ಆರೇ ದಿನದಲ್ಲಿ ಗಂಡನನ್ನು ಕಳೆದುಕೊಂಡ ಹೆಂಡ್ತಿಯ ರೋಧನೆ ಕಟು ಹೃದಯದವರನ್ನು ಕೂಡ ಕರಗಿಸುವಂತಿದೆ. ವಿನಯ್ ನರ್ವಾಲ್ ಅವರ ಪಾರ್ಥಿವ ಶರೀರವನ್ನು ಹರ್ಯಾಣದ ಕರ್ನಾಲ್‌ನ ಹುಟ್ಟೂರಿಗೆ ತೆಗೆದುಕೊಂಡು ಹೋಗುವ ಮೊದಲು ದೆಹಲಿಯ ಏರ್‌ಪೋರ್ಟ್‌ಗೆ ತಂದಾಗ ಪತ್ನಿ ಹಿಮಾಂಶೀ , ಪತಿಯ ಶವ ಪೆಟ್ಟಿಗೆ ಹಿಡಿದು ಬಿಕ್ಕಿ ಬಿಕ್ಕಿ ಅತ್ತಿರುವ ವಿಡಿಯೋ ಹೃಯದ ಹಿಂಡುವಂತಿದೆ. ಇನ್ನು ನೌಕಾಪಡೆ ಅಧಿಕಾರಿ ವಿನಯ್ ನರ್ವಾಲ್ ಅಂತ್ಯಕ್ರಿಯೆ ಹರಿಯಾಣದ ಕರ್ನಾಲ್‌ನಲ್ಲಿ ನೆರವೇರಿದ್ದು, ಸೋದರಿ ವಿನಯ್ ನರ್ವಾಲ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಆದ್ರೆ, ಇದೀಗ ವಿನಯ್ ನರ್ವಾಲ್ ಅವರು ಹನಿಮೂನ್ ಟ್ರಿಪ್ ವೇಳೆ ಪಹಲ್ಗಾಮ್ ಹೆಂಡ್ತಿಯೊಂದಿಗೆ ಡ್ಯಾನ್ಸ್ ಮಾಡಿರುವ ಕೊನೆಯ ವಿಡಿಯೋ ಲಭ್ಯವಾಗಿದ್ದು, ಈ ವಿಡಿಯೋ ನೋಡಿದರೆ ನೀರು ತರಿಸುತ್ತೆ.