ಧಾರವಾಡ: ಮದುವೆ ಮನೆಯವರು ಆದರಾತಿಥ್ಯದಲ್ಲಿ ಬ್ಯೂಸಿ, ಕಳ್ಳರ ಜೋಡಿ ರೂ. 35 ಲಕ್ಷದ ಚಿನ್ನಾಭರಣಗಳೊಂದಿಗೆ ಪರಾರಿ!

|

Updated on: Mar 07, 2024 | 1:11 PM

ಅಂದಹಾಗೆ ಅವರು ಅತಿಥಿಗಳಲ್ಲ, ಅತಿಥೇಯರೂ ಅಲ್ಲ. ಅವರು ಚಾಲಾಕಿ ಕಳ್ಳರು! ಮದುವೆ ಮನೆಯವರು ಆದರಾತಿಥ್ಯದಲ್ಲಿ ಬ್ಯೂಸಿಯಾಗಿದ್ದಾಗ, ಇವರಿಬ್ಬರು ಸುಮಾರು ರೂ. 35 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಬ್ಯಾಗಲ್ಲಿ ತುಂಬಿಕೊಂಡು ಆರಾಮವಾಗಿ ಜಾಗ ಖಾಲಿಮಾಡುತ್ತಿದ್ದಾರೆ.

ಧಾರವಾಡ: ವಿವಾಹ ಮಹೋತ್ಸವ ವಿಜೃಂಭಣೆಯಿಂದ ಜರುಗಿದ ಬಳಿಕ ರಿಸಿಪ್ಷನ್ ಕಾರ್ಯಕ್ರಮವನ್ನು ನಗರದ ಹೊರವಲಯದಲ್ಲಿರುವ ಸ್ಟಾರ್ ಹೋಟೆಲ್ ನಲ್ಲಿ (star hotel) ಇಟ್ಟುಕೊಳ್ಳಲಾಗಿದೆ. ಹೋಟೆಲ್ ಆವರಣದ ಬಯಲು ಪ್ರದೇಶದಲ್ಲಿ ಅತಿಥಿಗಳಿಗಾಗಿ (guests) ಊಟದ ವ್ಯವಸ್ಥೆ ಮಾಡಲಾಗಿದೆ. ಚಿಕ್ಕದಾಗಿ ನಿರ್ಮಿಸಲಾಗಿರುವ ವೇದಿಕೆಯ ಮೇಲೆ ಮೈಕ್ ಹಿಡಿದು ನಿಂತಿರುವ ಅತಿಥೇಯರೊಬ್ಬರು, ಅತಿಥಿಗಳನ್ನು ಊಟಕ್ಕೆ ಬರಮಾಡಿಕೊಳ್ಳುತ್ತಿದ್ದಾರೆ. ಆದರೆ, ಕಪ್ಪು ಟ್ರೌಸರ್ ಮತ್ತು ಶ್ವೇತ ವರ್ಣದ ಅಂಗಿತೊಟ್ಟಿರುವ ಇಬ್ಬರು ಯಾರಿಗೆ ಬೇಕು ನಿಮ್ಮ ಊಟ ಅನ್ನುವ ಹಾಗೆ ಹೊರಗೆ ನಡೆದುಹೋಗುತ್ತಿದ್ದಾರೆ. ಒಬ್ಬನ ಹೆಗಲ ಮೇಲೆ ಡಕ್ಬ್ಯಾಕ್ ಬ್ಯಾಗನ್ನು ನೀವು ನೋಡಬಹುದು. ಅಂದಹಾಗೆ ಅವರು ಅತಿಥಿಗಳಲ್ಲ, ಅತಿಥೇಯರೂ ಅಲ್ಲ. ಅವರು ಚಾಲಾಕಿ ಕಳ್ಳರು! ಮದುವೆ ಮನೆಯವರು ಆದರಾತಿಥ್ಯದಲ್ಲಿ ಬ್ಯೂಸಿಯಾಗಿದ್ದಾಗ, ಇವರಿಬ್ಬರು ಸುಮಾರು ರೂ. 35 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಬ್ಯಾಗಲ್ಲಿ ತುಂಬಿಕೊಂಡು ಆರಾಮವಾಗಿ ಜಾಗ ಖಾಲಿಮಾಡುತ್ತಿದ್ದಾರೆ. ಇದು ಧಾರವಾಡದವರೇ ಆಗಿರುವ ಗಂಗಾಧರಪ್ಪ ಪಟ್ಟಣಶೆಟ್ಟಿ (Gangadharappa Pattanshetty) ಕುಟುಂಬದ ವಿವಾಹ ಮಹೋತ್ಸವ. ಬ್ಯಾಗ್ ಹೊತ್ತಿರುವ ಕಳ್ಳ ಪ್ರಾಯಶಃ ಅವನ ಎಡಭಾಗದಲ್ಲಿ ಅಳವಡಿಸಿದ್ದ ಸಿಸಿ ಕೆಮೆರಾ ಗಮನಿಸಿದ ಅಂತ ಕಾಣುತ್ತದೆ, ಅದು ಕಂಡ ಕೂಡಲೇ ಅವನು ನಡಿಗೆಯ ವೇಗ ಹೆಚ್ಚಿಸುತ್ತಾನೆ ಮತ್ತು ಮುಖ ಮುಚ್ಚಿಕೊಳ್ಳುವ ಪ್ರಯತ್ನವಾಗಿ ನೆಲದ ಕಡೆ ನೋಡುತ್ತಾ ನಡೆದು ಹೋಗುತ್ತಾನೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Video: ಚಾಲಾಕಿ ಕಳ್ಳ, ಪ್ರಯಾಣಿಕರನ್ನು ತುಂಬಿಕೊಂಡೇ ಆರ್​​​ಟಿಸಿ ಬಸ್ ಕದ್ದೊಯ್ದ! ಮಾರ್ಗ ಮಧ್ಯೆ ಡೀಸೆಲ್ ಖಾಲಿಯಾದಾಗ ಏನು ಮಾಡಿದ?