Video: ಪಾಕ್ ಮಹಿಳಾ ರಿಪೋರ್ಟರ್ಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ವಕ್ತಾರ
ಪಾಕಿಸ್ತಾನ ಮಹಿಳಾ ರಿಪೋರ್ಟರ್ಗೆ ಪಾಕಿಸ್ತಾನ ಸೇನಾ ವಕ್ತಾರ ಕಣ್ಣು ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ. ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಗ್ಗೆ ಪತ್ರಕರ್ತೆ ಅಬ್ಸಾ ಕೋಮನ್ ಪ್ರಶ್ನೆಯನ್ನು ಕೇಳಿದಾಗ ಅವರತ್ತ ಪಾಕಿಸ್ತಾನದ ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ನ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಕಣ್ಣು ಮಿಟುಕಿಸಿದ್ದಾರೆ. ಚೌಧರಿ ಖಾನ್ ಇಮ್ರಾನ್ ಖಾನ್ನನ್ನು ನಾರ್ಸಿಸಿಸ್ಟ್ ಎಂದು ಕರೆದಿದ್ದಾರೆ. ಅವರ ರಾಜಕೀಯ ಮಹತ್ವಾಕಾಂಕ್ಷೆಗಳು ತುಂಬಾ ಮಿತಿಮೀರಿದ್ದು, ತಾನು ಅಧಿಕಾರದಲ್ಲಿ ಇಲ್ಲದಿದ್ದರೆ, ಬೇರೆ ಯಾರೂ ಇರಬಾರದು ಎಂದು ಅವರು ನಂಬುತ್ತಾರೆ.
ಇಸ್ಲಾಮಾಬಾದ್, ಡಿಸೆಂಬರ್ 10: ಪಾಕಿಸ್ತಾನ ಮಹಿಳಾ ರಿಪೋರ್ಟರ್ಗೆ ಪಾಕಿಸ್ತಾನ ಸೇನಾ ವಕ್ತಾರ ಕಣ್ಣು ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ. ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಗ್ಗೆ ಪತ್ರಕರ್ತೆ ಅಬ್ಸಾ ಕೋಮನ್ ಪ್ರಶ್ನೆಯನ್ನು ಕೇಳಿದಾಗ ಅವರತ್ತ ಪಾಕಿಸ್ತಾನದ ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ನ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಕಣ್ಣು ಮಿಟುಕಿಸಿದ್ದಾರೆ. ಚೌಧರಿ ಖಾನ್ ಇಮ್ರಾನ್ ಖಾನ್ನನ್ನು ನಾರ್ಸಿಸಿಸ್ಟ್ ಎಂದು ಕರೆದಿದ್ದಾರೆ. ಅವರ ರಾಜಕೀಯ ಮಹತ್ವಾಕಾಂಕ್ಷೆಗಳು ತುಂಬಾ ಮಿತಿಮೀರಿದ್ದು, ತಾನು ಅಧಿಕಾರದಲ್ಲಿ ಇಲ್ಲದಿದ್ದರೆ, ಬೇರೆ ಯಾರೂ ಇರಬಾರದು ಎಂದು ಅವರು ನಂಬುತ್ತಾರೆ. ಅವರ ಹೆಸರನ್ನು ಹೇಳದಿದ್ದರೂ, ಜೈಲಿನಲ್ಲಿ ಖಾನ್ ಅವರನ್ನು ಭೇಟಿ ಮಾಡುವವರನ್ನು ಸೇನೆಯ ವಿರುದ್ಧ ವಿಷ ಹರಡಲು ಬಳಸಲಾಗುತ್ತಿದೆ ಎಂದು ಚೌಧರಿ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ