PAK vs BAN: ಪಾಕ್ ತಂಡದ ಫೀಲ್ಡಿಂಗ್ ನೋಡಿ ಅಂಪೈರ್ಗೂ ಅಚ್ಚರಿ; ವಿಡಿಯೋ ನೋಡಿ
PAK vs BAN: ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಬರ್ ಆಝಂ ಸರಳ ಕ್ಯಾಚ್ ಕೈಚೆಲ್ಲಿದ್ದರು. ಇದೀಗ ಎರಡನೇ ಟೆಸ್ಟ್ ಪಂದ್ಯದಲ್ಲೂ ಪಾಕ್ ಆಟಗಾರರು ಸರಳ ಕ್ಯಾಚ್ ಕೈಚೆಲ್ಲಿದ್ದಾರೆ. ಅಚ್ಚರಿಯ ವಿಷಯವೆಂದರೆ ಈ ಕ್ಯಾಚ್ ಹಿಡಿಯಲು ಒಂದಲ್ಲ ಎರಡಲ್ಲ ಮೂವರು ಪಾಕ್ ಆಟಗಾರರು ಪ್ರಯತ್ನಿಸಿದರೂ ಯಾರೂ ಸಫಲರಾಗಲಿಲ್ಲ. ಈ ಕ್ಯಾಚ್ ಮಿಸ್ ಆದಾಗ ಅಂಪೈರ್ ಕೂಡ ಆಶ್ಚರ್ಯ ಚಕಿತರಾದ ರೀತಿಯಲ್ಲಿ ಪ್ರತಿಕ್ರಿಯಿಸಿದರು.
ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಉಭಯ ತಂಡಗಳ ನಡುವೆ ಈಗಾಗಲೇ ಮೊದಲ ಪಂದ್ಯ ನಡೆದಿದ್ದು, ಈ ಪಂದ್ಯದಲ್ಲಿ ಅವಮಾನಕರ ಸೋಲಿನ ನಂತರ ಪಾಕ್ ತಂಡ ಈ ಸರಣಿಯಲ್ಲಿ ಕಮ್ ಬ್ಯಾಕ್ ಮಾಡುವ ಹಂಬಲದಲ್ಲಿದೆ. ಆತಿಥೇಯ ಪಾಕಿಸ್ತಾನ ತಂಡ ಯಾವುದೇ ಬೆಲೆ ತೆತ್ತಾದರೂ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲಲೇಬೇಕು. ಏಕೆಂದರೆ ಪಾಕಿಸ್ತಾನ ಈ ಪಂದ್ಯವನ್ನು ಸೋತರೆ, ಬಾಂಗ್ಲಾದೇಶ ವಿರುದ್ಧ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟೆಸ್ಟ್ ಸರಣಿ ಸೋತ ಅವಮಾನಕ್ಕೆ ಒಳಗಗಾಲಿದೆ. ಸದ್ಯ ಉಭಯ ತಂಡಗಳ ನಡುವೆ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಈ ಮಾಡು ಇಲ್ಲವೇ ಮಡಿ ಪಂದ್ಯದಲ್ಲೂ ಪಾಕಿಸ್ತಾನದ ಕಳಪೆ ಫೀಲ್ಡಿಂಗ್ ಮತ್ತೊಮ್ಮೆ ಮುನ್ನಲೆಗೆ ಬಂದಿದೆ.
ಈ ಪಂದ್ಯದಲ್ಲಿ ಮಾತ್ರವಲ್ಲ ಮೊದಲ ಪಂದ್ಯದಲ್ಲೂ ಪಾಕಿಸ್ತಾನಿ ಆಟಗಾರರು ಕಳಪೆ ಫೀಲ್ಡಿಂಗ್ ಮಾಡಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಬರ್ ಆಝಂ ಸರಳ ಕ್ಯಾಚ್ ಕೈಚೆಲ್ಲಿದ್ದರು. ಇದೀಗ ಎರಡನೇ ಟೆಸ್ಟ್ ಪಂದ್ಯದಲ್ಲೂ ಪಾಕ್ ಆಟಗಾರರು ಸರಳ ಕ್ಯಾಚ್ ಕೈಚೆಲ್ಲಿದ್ದಾರೆ. ಅಚ್ಚರಿಯ ವಿಷಯವೆಂದರೆ ಈ ಕ್ಯಾಚ್ ಹಿಡಿಯಲು ಒಂದಲ್ಲ ಎರಡಲ್ಲ ಮೂವರು ಪಾಕ್ ಆಟಗಾರರು ಪ್ರಯತ್ನಿಸಿದರೂ ಯಾರೂ ಸಫಲರಾಗಲಿಲ್ಲ. ಈ ಕ್ಯಾಚ್ ಮಿಸ್ ಆದಾಗ ಅಂಪೈರ್ ಕೂಡ ಆಶ್ಚರ್ಯ ಚಕಿತರಾದ ರೀತಿಯಲ್ಲಿ ಪ್ರತಿಕ್ರಿಯಿಸಿದರು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪಾಕಿಸ್ತಾನದ ಕಳಪೆ ಫೀಲ್ಡಿಂಗ್ ಅನ್ನು ನೆಟ್ಟಿಗರು ಸಾಕಷ್ಟು ಟ್ರೋಲ್ ಮಾಡುತ್ತಿದ್ದಾರೆ.