Operation Sindoor: ಭಾರತದ ದಾಳಿಗೆ ಪಾಕಿಸ್ತಾನದಲ್ಲಿ ವಿಮಾನ ಸಂಚಾರ ರದ್ದು, ಭಾರತ ತೊಂದರೆ ನೀಡುತ್ತಿದೆ ಎಂದ ಒಬ್ಬ ಪಾಕಿಸ್ತಾನಿ
ಇಲ್ಲೊಬ್ಬ ಹಿರಿಯ ವ್ಯಕ್ತಿಯಿದ್ದಾರೆ, ಅವರು ಜೆಡ್ಡಾದಿಂದ ಇಸ್ಲಾಮಾಬಾದ್ ಗೆ ಬಂದಿದ್ದಾರೆ, ಅವರಿಗೆ ವಡಾಗ್ರಾಮ್ ಗೆ ಹೋಗಬೇಕಿತ್ತಂತೆ. ಏನಾದರೂ ವ್ಯವಸ್ಥೆ ಮಾಡುತ್ತೇವೆ ಅಂತ ಹೇಳಿದ ಸಂಬಂಧಪಟ್ಟ ಅಧಿಕಾರಿಗಳು ಕರಾಚಿಗೆ ಕರೆತಂದು ಬಿಟ್ಟಿದ್ದಾರೆ. ಇದೇನಿದು ಅಂತ ಇವರು ಕೇಳಿದಾಗ ನಿಮ್ಮ ವ್ಯವಸ್ಥೆ ನೀವು ಮಾಡಿಕೊಳ್ಳಿ ಎಂದು ಆಧಿಕಾರಿಗಳು ಹೇಳಿದ್ದಾರೆ, ಪಾಕಿಸ್ತಾನವೆಂದರೆ ಇದು!
ಕರಾಚಿ (ಪಾಕಿಸ್ತಾನ್), ಮೇ 7: ಕರಾಚಿಯ ಜಿನ್ನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Jinnah International Airport) ವಿಮಾನವೊಂದನ್ನು ಹತ್ತಿ ಬೇರೆಲ್ಲೋ ಹೋಗಬೇಕಿದ್ದ ಪಾಕಿಸ್ತಾನಿ ಯುವಕ ನಿಲ್ದಾಣದ ಮುಂದೆ ಭಾರತ ನಮಗೆ ಬಹಳ ತೊಂದರೆಯನ್ನುಂಟು ಮಾಡಿದೆ ಅಂತ ಹೇಳುವ ಭಾರತದ ತಂಟೆಗೆ ಹೋಗಬೇಡಿ, ಅದು ಬಲಾಢ್ಯ ರಾಷ್ಟ್ರ ಮತ್ತು ಅದರ ಸೇನೆಯೂ ಬಹಳ ಬಲಿಷ್ಠ ಅಂತ ಪಾಕಿಸ್ತಾನ ಸರ್ಕಾರಕ್ಕೆ ಹೇಳಿದ್ದರೆ ಅವನಿಗೆ ಇಂಥ ಸ್ಥಿತಿ ಬರುತ್ತಿರಲಿಲ್ಲ. ಭಾರತದ ಹೊಡೆತವೇ ಹಾಗೆ ಮಾರಾಯ್ರೇ ಪಾಕಿಸ್ತಾನ ಮುಟ್ಟಿ ನೋಡಿಕೊಳ್ಳಬೇಕು. ಪಾಕಿಸ್ತಾನದಲ್ಲಿರುವ ಉಗ್ರ ನೆಲೆಗಳ ಮೇಲೆ ನಿನ್ನೆ ರಾತ್ರಿ ಭಾರತ ದಾಳಿ ನಡೆಸಿದ ಬಳಿಕ ಪಾಕಿಸ್ತಾನಕ್ಕೆ ಆಗಮಿಸಬೇಕಿದ್ದ ಮತ್ತು ಅಲ್ಲಿಂದ ಬೇರೆ ಕಡೆ ತೆರಳಬೇಕಿದ್ದ ವಿಮಾನಗಳು ರದ್ದಾಗಿವೆ ಜನ ಕಂಗಾಲಾಗಿದ್ದಾರೆ.
ಇದನ್ನೂ ಓದಿ: Operation Sindoor: ಭಾರತ ದಾಳಿ ನಡೆಸಿದ್ದಕ್ಕೆ ಸಾಕ್ಷ್ಯ ಬೇಕೆ? ಪಾಕಿಸ್ತಾನದಿಂದಲೇ ಬಂದ ವರದಿಗಳಿವೆ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ