AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Operation Sindoor: ಭಾರತ ದಾಳಿ ನಡೆಸಿದ್ದಕ್ಕೆ ಸಾಕ್ಷ್ಯ ಬೇಕೆ? ಪಾಕಿಸ್ತಾನದಿಂದಲೇ ಬಂದ ವರದಿಗಳಿವೆ

Evidences for Operation Sindoor: ಪಾಕಿಸ್ತಾನ ವಿರುದ್ಧ ಭಾರತ ಆಪರೇಷನ್ ಸಿಂಧೂರ ನಡೆಸಿರುವುದಕ್ಕೆ ಹಲವು ಸಾಕ್ಷ್ಯಗಳಿವೆ. ದಾಳಿಯ ಲೈವ್ ದೃಶ್ಯಗಳನ್ನು ಬಿಡುಗಡೆ ಮಾಡಲಾಗಿದೆ. ಪಾಕಿಸ್ತಾನದಲ್ಲಿರುವ ಅಂತಾರಾಷ್ಟ್​ರೀಯ ಮಾಧ್ಯಮಗಳೂ ಈ ದಾಳಿ ನಡೆದಿರುವುದನ್ನು ಖಚಿತಪಡಿಸಿವೆ. ಇಸ್ಲಾಮಾಬಾದ್​​ನ ಹಲವೆಡೆ ಜನರಿಗೆ ಸ್ಫೋಟಗಳ ಸದ್ದು ಕೇಳಿರುವುದು ತಿಳಿದುಬಂದಿದೆ.

Operation Sindoor: ಭಾರತ ದಾಳಿ ನಡೆಸಿದ್ದಕ್ಕೆ ಸಾಕ್ಷ್ಯ ಬೇಕೆ? ಪಾಕಿಸ್ತಾನದಿಂದಲೇ ಬಂದ ವರದಿಗಳಿವೆ
ಪಾಕಿಸ್ತಾನದ ಸಿಎನ್​​ಎನ್ ವರದಿಗಾರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:May 07, 2025 | 1:14 PM

Share

ನವದೆಹಲಿ, ಮೇ 7: ಬಾಲಾಕೋಟ್ ಏರ್​​ಸ್ಟ್ರೈಕ್ ನಡೆದಾಗ, ಹಾಗೂ 2016ರಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆದಾಗ ಪಾಕಿಸ್ತಾನದಲ್ಲಿ ಏನೂ ಆಗೇ ಇಲ್ಲ ಎಂದು ಹೇಳಲಾಗಿತ್ತು. ಈ ಬಾರಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರದ (Operation Sindoor) ಬಗ್ಗೆ ಈಗಾಗಲೇ ಸಾಕ್ಷ್ಯಗಳು ದೊರಕಿವೆ. ಪಾಕಿಸ್ತಾನದ ಹಲವು ಮಾಧ್ಯಮಗಳಲ್ಲಿ ದೃಶ್ಯಗಳು ಪ್ರಸಾರವಾಗಿವೆ. ಪ್ರಮುಖ ಅಂತಾರಾಷ್ಟ್ರೀಯ ಮಾಧ್ಯಮವಾದ ಸಿಎಎನ್​​​ನ ವರದಿಗಾರರೊಬ್ಬರು ಖುದ್ದಾಗಿ ಇದನ್ನು ವರದಿ ಮಾಡಿದ್ದಾರೆ.

ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್​​​ನಲ್ಲೇ ಬಹಳ ಜನರು ಸ್ಫೋಟಗಳ ಶಬ್ದವನ್ನು ಕೇಳಿದ್ದಾರೆ. ಇಲ್ಲಿಂದ 100 ಕಿಮೀ ದೂರದಲ್ಲಿರುವ ತಮ್ಮ ಕ್ಯಾಮರಾಮ್ಯಾನ್ (ಜಾವೆದ್) ಅವರ ಮನೆ ಅಲುಗಾಡಿತ್ತು ಎಂದು ಸಿಎನ್​​ಎನ್ ವರದಿಗಾರರು ಹೇಳಿದ್ದಾರೆ. ಪಾಕಿಸ್ತಾನೀಯರು ತಮ್ಮ ಮೊಬೈಲ್​​​ಗಳಲ್ಲಿ ಕೆಲ ದಾಳಿ ಮತ್ತು ಸ್ಫೋಟ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಈ ದೃಶ್ಯಗಳೂ ಕೂಡ ಇಂಟರ್ನೆಟ್​​​ನಲ್ಲಿ ಲಭ್ಯ ಇವೆ.

ಇದನ್ನೂ ಓದಿ
Image
ಹಿಂದೂ ಮಹಿಳೆಯರ ಕುಂಕುಮ ಅಳಿಸಿದವರಿಗೆ ತಕ್ಕ ಶಾಸ್ತಿಯಾಗಿದೆ ಎಂದ ಸೇನೆ
Image
ಪಾಕಿಸ್ತಾನದ ಈ 9 ಸ್ಥಳಗಳ ಮೇಲೆ ಭಾರತದಿಂದ ದಾಳಿ, ಮನೆ ಬಿಟ್ಟು ಓಡಿದ ಜನರು
Image
ಆಪರೇಷನ್ ಸಿಂಧೂರ್ ಎಂದರೇನು? ಈ ದಾಳಿಗೆ ಭಾರತ ಇದೇ ಹೆಸರಿಟ್ಟಿದ್ದೇಕೆ?
Image
ಮಾಕ್ ಡ್ರಿಲ್​ಗೆ ಭಾರತ ಸಜ್ಜು, ಇಸ್ರೇಲ್​ನಂತೆ ದಾಳಿ ನಡೆಯಲಿದೆ ಎಂದ ಪಾಕ್

ಇದನ್ನೂ ಓದಿ: ಅಭಿ ಪಿಕ್ಚರ್ ಬಾಕಿ ಹೈ ಎಂದ ಮನೋಜ್ ನರವನೆ; ದೊಡ್ಡ ಪ್ರಹಾರದ ಮುನ್ಸೂಚನೆ ಕೊಟ್ಟರಾ ಮಾಜಿ ಸೇನಾ ಮುಖ್ಯಸ್ಥ?

ಪಾಕಿಸ್ತಾನ ಸರ್ಕಾರ ಮತ್ತು ಮಿಲಿಟರಿ ಕೂಡ ಭಾರತದ ವೈಮಾನಿಕ ದಾಳಿಯನ್ನು ತಳ್ಳಿ ಹಾಕಿಲ್ಲ. ಆದರೆ, ಉಗ್ರರ ನೆಲೆಗಳ ಮೇಲೆ ದಾಳಿಯಾಗಿಲ್ಲ ಎಂದಷ್ಟೇ ಹೇಳುತ್ತಿವೆ.

ಪಾಕಿಸ್ತಾನದ ಮಾಧ್ಯಮ ವಿಭಾಗವು ಹೇಳಿಕೆ ನೀಡಿದ್ದು, ಪಂಜಾಬ್ ಪ್ರಾಂತ್ಯದ ಬಹವಾಲಪುರ್​​, ಮುಜಾಫರಬಾದ್​​ನ ಕೋಟ್ಲಿ ಮತ್ತು ಪಾಕ್ ಆಡಳಿತದ ಕಾಶ್ಮೀರದ ಮುಜಾಫರ್​​ಬಾದ್​ನ ಮೂರು ಸ್ಥಗಳ ಮೇಲೆ ವಾಯು ದಾಳಿ ನಡೆದಿದೆ ಎಂದು ಹೇಳಿಕೆ ನೀಡಿದೆ. ಇದು ಭಾರತದಿಂದ ಆಪರೇಷನ್ ಸಿಂದೂರ ನಡೆದಿರುವುದಕ್ಕೆ ಸ್ಪಷ್ಟ ಸಾಕ್ಷ್ಯ.

ಇದನ್ನೂ ಓದಿ: ಆಪರೇಷನ್ ಸಿಂಧೂರ್: ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಿದ ಕರ್ನಲ್ ಸೋಫಿಯಾ ಖುರೇಷಿ ಯಾರು? ಇಲ್ಲಿದೆ ಮಾಹಿತಿ

ಭಾರತದ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆ ಸಂಯೋಜಿತವಾಗಿ ನಡೆಸಿದ ಆಪರೇಷನ್ ಸಿಂದೂರದಲ್ಲಿ ಭಾರತದ ವಿಮಾನಗಳು ಪಾಕ್ ಪ್ರದೇಶಕ್ಕೆ ನುಗ್ಗಿ 9 ಸ್ಥಳಗಳ ಮೇಲೆ ಸ್ಟ್ರೈಕ್ ಮಾಡಿವೆ. ಆಪರೇಷನ್ ಸಿಂದೂರ ಯಶಸ್ವಿಯಾಗಿದೆ ಎಂದು ಸೇನೆ ಹೇಳಿಕೊಂಡಿದೆ. ಆದರೆ, ಭಾರತದ ಆಪರೇಷನ್ ಸಿಂಧೂರಕ್ಕೆ ಪಾಕಿಸ್ತಾನವೂ ತಕ್ಕ ಉತ್ತರ ನೀಡಲಿದೆ. ಯಾವಾಗ, ಹೇಗೆ ಎಂಬುದನ್ನು ಈಗ ಹೇಳುವುದಿಲ್ಲ ಎಂದು ಪಾಕ್ ಸೇನಾ ಮುಖ್ಯಸ್ಥರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:10 pm, Wed, 7 May 25