Operation Sindoor: ಸೇನೆಯ ಭದ್ರತೆಯೊಂದಿಗೆ ಪಹಲ್ಗಾಮ್ ನಲ್ಲಿ ಪುನಃ ಪ್ರವಾಸಿಗರ ಕಲರವ, ಭಾರತ್ ಮಾತಾ ಕೀ ಜೈ ಅಂತ ಜೈಕಾರ
ಗುಜರಾತ್ ರಾಜ್ಯದ ಬರೋಡದಿಂದ ಪಹಲ್ಗಾಮ್ ಗೆ ಬಂದಿರುವ ಮೆಹುಲ್ ಮತ್ತು ಅವರ ಸಂಗಡಿಗರು ಭಾರತೀಯ ಸೇನೆ ತಮ್ಮ ಜೊತೆ ಇರುವುದರಿಂದ ಭಯವಿಲ್ಲ, ಆತಂಕವಿಲ್ಲ ಎಂದು ಹೇಳಿ ಭಾರತೀಯ ಸೇನೆ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಜೈಕಾರ ಹಾಕುತ್ತಾರೆ. ಕೇರಳದಿಂದ ಬಂದಿರುವ ವ್ಯಕ್ತಿಯೊಬ್ಬರು, ತಮ್ಮ ಸುರಕ್ಷತೆಯನ್ನು ನೋಡಿಕೊಳ್ಳುವ ಸೇನೆಗೆ ಭಾರತೀಯರೆಲ್ಲ ಬೆಂಬಲಿಸಬೇಕು ಅನ್ನುತ್ತಾರೆ.
ಪಹಲ್ಗಾಮ್ (ಜಮ್ಮು ಮತ್ತು ಕಾಶ್ಮೀರ), ಮೇ 7: ಪಹಲ್ಗಾಮ್ನಲ್ಲಿ ಉಗ್ರರ ದಾಳಿ ನಡೆದು ಎರಡು ವಾರ ಮಾತ್ರ ಕಳೆದಿದೆ, ಅದರೆ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುವುದನ್ನು ಪುನಃ ಆರಂಭಿಸಿದ್ದಾರೆ. ಗುಜರಾತ್, ಕೇರಳ ಮತ್ತು ದೇಶದ ಇತರ ಭಾಗಗಳಿಂದಲೂ ಜನ ಇಲ್ಲಿಗೆ ಬರುತ್ತಿದ್ದಾರೆ. ಭಾರತ್ ಮಾತಾ ಕೀ ಜೈ, ಹಿಂದೂಸ್ತಾನ್ ಜಿಂದಾಬಾದ್ ಎನ್ನುತ್ತ ಪ್ರವಾಸಿಗರು ಸೆಲ್ಫೀ, ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಮತ್ತು ಭಾರತದ ಸೇನೆ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ನಿನ್ನೆ ರಾತ್ರಿ ದಾಳಿ ನಡೆಸಿದ್ದನ್ನು ಗರ್ವದಿಂದ ಹೇಳುತ್ತ ಕೇಕೆ ಹಾಕುತ್ತಿದ್ದಾರೆ. ಸೇನೆಯಿಂದಾಗಿ ಪಹಲ್ಗಾಮ್ ಗೆ ಬರಲು ತಮಗೆ ಯಾವುದೇ ಭಯವಿಲ್ಲ ಎಂದು ಪ್ರವಾಸಿಗರು ಹೇಳುತ್ತಾರೆ.
ಇದನ್ನೂ ಓದಿ: ಭಾರತದ ದಾಳಿಯಿಂದ ಕೋಪಗೊಂಡು ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಗುಂಡು ಹಾರಿಸಿದ ಪಾಕ್, 10 ನಾಗರಿಕರು ಸಾವು
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಮೂರೇ ದಿನಗಳಲ್ಲಿ ಕೆಆರ್ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
