ಪಾಕಿಸ್ತಾನದಲ್ಲಿ ಜಗನ್ನಾಥನ ರಥಯಾತ್ರೆ; ಲಕ್ಷಾಂತರ ಹಿಂದೂಗಳು ಭಾಗಿ, ಭಕ್ತರಲ್ಲಿ ಸಂಭ್ರಮ

Updated on: Jun 11, 2025 | 8:25 PM

ಒಡಿಷಾದ ಪುರಿಯಲ್ಲಿ ನಡೆಯುವ ಜಗನ್ನಾಥನ ರಥಯಾತ್ರೆ (ಜಗನ್ನಾಥ ರಥೋತ್ಸವ) ಯಾರಿಗೆ ತಾನೇ ಗೊತ್ತಿಲ್ಲ? ಪ್ರತಿವರ್ಷ ಜೂನ್ ಮತ್ತು ಜುಲೈ ತಿಂಗಳಲ್ಲಿ ನಡೆಯುವ ಅತ್ಯಂತ ಭವ್ಯ, ಪುರಾತನ ಮತ್ತು ವಿಶ್ವವಿಖ್ಯಾತ ಧಾರ್ಮಿಕ ಆಚರಣೆಯಲ್ಲಿ ದೇಶವಿದೇಶಗಳ ಜನ ಲಕ್ಷಾಂತರ ಭಕ್ತಾದಿಗಳು ಭಾಗವಹಿಸುತ್ತಾರೆ. ಈ ಬಾರಿಯ ಜಗನ್ನಾಥ ರಥಯಾತ್ರೆಯು ಜೂನ್ 22 ರಂದು ಆರಂಭಗೊಂಡು ಜುಲೈ 19ರಂದು ಸಂಪನ್ನಗೊಳ್ಳಲಿದೆ.

ಬೆಂಗಳೂರು, ಜೂನ್ 11: ಪಾಕಿಸ್ತಾನ ಒಂದು ಪಕ್ಕಾ ಇಸ್ಲಾಮಿಕ್ ದೇಶ (Islamic country), ಆದರೆ ನಮ್ಮ ನೆರೆರಾಷ್ಟ್ರದಲ್ಲಿ ಹಿಂದೂಗಳು ಇದ್ದಾರೆನ್ನುವುದು ಭಾರತೀಯರೆಲ್ಲರಿಗೆ ಗೊತ್ತಿರುವ ಸಂಗತಿ. ಅಲ್ಲಿರುವ ಶೇಕಡ 2 ರಷ್ಟು ಹಿಂದೂಗಳು ಸುರಕ್ಷಿತವಾಗಿದ್ದಾರೆಯೇ? ಒಂದು ಇಸ್ಲಾಮಿಕ್ ದೇಶದಲ್ಲಿ ಭಾರತೀಯ ಹಿಂದೂಗಳ ಹಾಗೆ ಅಲ್ಲಿರುವ ಹಿಂದೂಗಳೂ ಧಾರ್ಮಿಕ ಆಚರಣೆ, ಹಬ್ಬಹರಿದಿನಗಳನ್ನು ಸೆಲಿಬ್ರೇಟ್ ಮಾಡುತ್ತಾರೆಯೇ? ಇಂಥ ಹತ್ತು ಹಲವು ಪ್ರಶ್ನೆಗಳಿಗೆ ಒಂದೇ ಉತ್ತರ, ಹೌದು! ವಿಡಿಯೋದ ಬಲಭಾಗದಲ್ಲಿ ಕಾಣುತ್ತಿರುವ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಒಂದು ಪ್ರದೇಶದಲ್ಲಿ ಜಗದೋದ್ಧಾರಕ ಜಗನ್ನಾಥನ ದೇವಸ್ಥಾನವಿದ್ದು ನಿನ್ನೆ ಅಂದರೆ ಜೂನ್ 10 ರಂದು ನಡೆದ ರಥಯಾತ್ರೆಯಲ್ಲಿ ಲಕ್ಷಾಂತರ ಪಾಕಿಸ್ತಾನೀ ಹಿಂದೂಗಳು ಭಾಗಿಯಾಗಿ ರಥ ಎಳೆದು ಸಂಭ್ರಮಿಸಿದ್ದಾರೆ. ಭಕ್ತಿಭಾವದಿಂದ ಜಗನ್ನಾಥನಿಗೆ ಜೈಕಾರ ಹಾಕಿದ್ದಾರೆ, ಪ್ರಸಾದ ಹಂಚಿದ್ದಾರೆ. ವಿಡಿಯೋದಲ್ಲಿ ಕಾಣುವ ಬಾವುಟಗಳು ನಾವೆಲ್ಲೇ ಇದ್ದರೂ ಹಿಂದೂಗಳು, ನಮ್ಮ ಆಚರಣೆ ನಮ್ಮ ಹಕ್ಕು ಸ್ಲೋಗನ್​ಗಳನ್ನು ಜಗತ್ತಿಗೆ ಸಾರುತ್ತಿವೆ. ಅನೇಕರು ತಮ್ಮ ಹರ್ಷ ಮತ್ತು ಸಂಭ್ರಮವನ್ನು ಸೋಶಿಯಲ್ ಮೀಡಿಯ ಪೋಸ್ಟ್​ಗಳ ಮೂಲಕ ಹಂಚಿಕೊಂಡಿದ್ದಾರೆ

ಇದನ್ನೂ ಓದಿ:  ದಸರಾ ಹಬ್ಬ ಎಲ್ಲ ಭಾರತೀಯರಿಗೆ ಒಂದೇಯಾದರೂ ಆಚರಣೆಗಳಲ್ಲಿ ಮಾತ್ರ ನಾನಾ ವಿಧ!

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: Jun 11, 2025 04:22 PM