ಕದನ ವಿರಾಮ ಉಲ್ಲಂಘನೆ: ಪಾಕಿಸ್ತಾನದಿಂದ ಭಾರತದ ಮೇಲೆ ಮತ್ತೆ ದಾಳಿ

Updated on: May 10, 2025 | 10:18 PM

ಪಾಕಿಸ್ತಾನವು ಕದನವಿರಾಮ ಉಲ್ಲಂಘಿಸಿ ಭಾರತದ ಮೇಲೆ ಡ್ರೋನ್ ದಾಳಿ ನಡೆಸಿದೆ. ಶ್ರೀನಗರದಲ್ಲಿ ಸ್ಫೋಟಗಳ ಸದ್ದು ಕೇಳಿಬಂದಿದೆ. ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ರಾಜಸ್ಥಾನಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಭಾರತೀಯ ಸೇನೆ ಪ್ರತ್ಯುತ್ತರ ದಾಳಿ ನಡೆಸಿದೆ. ಪಾಕಿಸ್ತಾನದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಕದನವಿರಾಮದ ಉಲ್ಲಂಘನೆಯನ್ನು ಖಂಡಿಸಿದ್ದಾರೆ. ಈ ಘಟನೆಯಿಂದ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಿದೆ.

ಪಾಕಿಸ್ತಾನ ಮತ್ತೆ ತನ್ನ ಕುತಂತ್ರ ಬುದ್ದಿಯನ್ನು ತೋರಿಸಿದೆ. ಕದನ ವಿರಾಮವನ್ನು ಉಲ್ಲಂಘಿಸಿ ಭಾರತದ ಮೇಲೆ ದಾಳಿ ಮಾಡುತ್ತಿದೆ. ಇದಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಈ ವಿಚಾರವಾಗಿ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಉಮರ್​ ಅಬ್ದುಲ್ಲಾ ಟ್ವೀಟ್​ ಮಾಡಿ, ಕದನ ವಿರಾಮ ಏನಾಯಿತು? ಶ್ರೀನಗರದಾದ್ಯಂತ ಸ್ಫೋಟಗಳ ಸದ್ದು ಕೇಳಿಬಂದಿದೆ. ಇದು ಕದನ ವಿರಾಮ ಉಲ್ಲಂಘನೆ ಎಂದು ಟ್ವೀಟ್​ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರ, ಪಂಜಾಬ್​, ರಾಜಸ್ಥಾನದಲ್ಲಿ ಬ್ಲಾಕ್​ ಔಟ್​ ಆಗಿದೆ. ಪಾಕಿಸ್ತಾನದಿಂದ ಮತ್ತೆ ಡ್ರೋನ್​ ದಾಳಿ ಮಾಡುತ್ತಿದೆ. ಈ ಡ್ರೋನ್​ಗಳನ್ನು ಭಾರತೀಯ ವಾಯಸೇನೆ ಹೊಡೆದು ಹಾಕುತ್ತಿದೆ.

Published on: May 10, 2025 09:41 PM