Video: ಕರಾಚಿ ಏರ್​​ಪೋರ್ಟ್​ನಲ್ಲಿ ತೊಳ್ಕೊಳೋಕೂ ನೀರಿಲ್ವಂತೆ, ಪಾಕ್ ನಟಿ ಹೇಳಿದ್ದೇನು ನೋಡಿ

Updated on: May 29, 2025 | 2:09 PM

ಕರಾಚಿ ಏರ್​ಪೋರ್ಟ್​ನಲ್ಲೂ ನೀರಿನ ಅಭಾವ ಕಾಡುತ್ತಿದೆ. ಏರ್​ಪೋರ್ಟ್​ನ ಶೌಚಾಲಯದಲ್ಲಿ ಕೂಡ ನೀರಿಲ್ಲ ಎಂದು ಪಾಕಿಸ್ತಾನಿ ನಟಿಯೊಬ್ಬರು ಮಾಹಿತಿ ನೀಡಿದ್ದಾರೆ. ವಿಡಿಯೋ ಮಾಡಿರುವ ಅವರು, ಕರಾಚಿ ಏರ್​ಪೋರ್ಟ್​ನ ಶೌಚಾಲಯದಲ್ಲಿರುವ ನಲ್ಲಿಗಳೆಲ್ಲಾ ಒಣಗಿದೆ.ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಅನೇಕರು ವ್ಯಂಗ್ಯವಾಡಿದ್ದಾರೆ. ಈ ವಿಡಿಯೋವನ್ನು ವಿವಿಧ ಬಳಕೆದಾರರು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಮರುಹಂಚಿಕೊಂಡಿದ್ದಾರೆ.

ಇಸ್ಲಾಮಾಬಾದ್, ಮೇ 29: ಕರಾಚಿ ಏರ್​ಪೋರ್ಟ್​ನಲ್ಲೂ ನೀರಿನ ಅಭಾವ ಕಾಡುತ್ತಿದೆ. ಏರ್​ಪೋರ್ಟ್​ನ ಶೌಚಾಲಯದಲ್ಲಿ ಕೂಡ ಒಂದು ನೀರಿಲ್ಲ ಎಂದು ಪಾಕಿಸ್ತಾನಿ ನಟಿಯೊಬ್ಬರು ಹೇಳಿದ್ದಾರೆ. ವಿಡಿಯೋ ಮಾಡಿರುವ ಅವರು, ಕರಾಚಿ ಏರ್​ಪೋರ್ಟ್​ನ ಶೌಚಾಲಯದಲ್ಲಿರುವ ನಲ್ಲಿಗಳೆಲ್ಲಾ ಒಣಗಿದೆ ಎಂದಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಅನೇಕರು ವ್ಯಂಗ್ಯವಾಡಿದ್ದಾರೆ. ಈ ವಿಡಿಯೋವನ್ನು ವಿವಿಧ ಬಳಕೆದಾರರು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಮರುಹಂಚಿಕೊಂಡಿದ್ದಾರೆ.

ನಟಿ ಹೀನಾ ಬಾಯತ್ ವಿಡಿಯೋದಲ್ಲಿ‘‘ ನಾನು ಕರಾಚಿ ಇಂಟರ್​ನ್ಯಾಷನಲ್​ ಏರ್​ಪೋರ್ಟ್​ನಲ್ಲಿದ್ದೇನೆ, ಇಂದು ನಾವು ಪಾಕಿಸ್ತಾನದ ಸಾಧನೆಗಳನ್ನು ಸೆಲೆಬ್ರೇಟ್​ ಮಾಡಲೇಬೇಕಿದೆ. ಇಲ್ಲಿರುವ ಯಾವುದೇ ಶೌಚಾಲಯದಲ್ಲೂ ನೀರಿಲ್ಲ.ಜನರು ನಮಾಜ್ ಮಾಡಲು, ಮಕ್ಕಳನ್ನು ಕರೆದುಕೊಂಡು ವಾಶ್​ರೂಮ್​ಗೆ ಹೋಗುತ್ತಿದ್ದಾರೆ ಆದರೆ ಇಲ್ಲಿ ಒಂದು ಹನಿಯೂ ನೀರಿಲ್ಲ’’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಅಂತಾರಾಷ್ಟ್ರೀಯ ಏರ್​ಪೋರ್ಟ್​ನಲ್ಲೇ ಈ ಸ್ಥಿತಿಯಾದರೆ ಪಾಕ್​ನ ಸ್ಥಿತಿ ಹೇಗಿರಬಹುದೆಂದು ನೀವೇ ಊಹಿಸಬಹುದು.

ಪಹಲ್ಗಾಮ್​ನಲ್ಲಿ ಉಗ್ರರು ದಾಳಿ ನಡೆಸಿ 26 ಅಮಾಯಕರನ್ನು ಹತ್ಯೆಗೈದಿದ್ದರು, ಪ್ರತೀಕಾರವಾಗಿ ಭಾರತವು ಆಪರೇಷನ್ ಸಿಂಧೂರ್ ನಡೆಸಿ ಪಾಕ್​ನಲ್ಲಿ ಉಗ್ರ ನೆಲೆಗಳನ್ನು ನಾಶಪಡಿಸಿತ್ತು. ಬಳಿಕ ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಿದ್ದ ಕಾರಣ ಪಾಕ್​ಗೆ ಹೋಗುವ ನೀರನ್ನೂ ತಡೆ ಹಿಡಿಯಲಾಗಿತ್ತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: May 29, 2025 02:07 PM
Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More