AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಂಕಿತ ಉಗ್ರ ಸುಹೇಲ್ ಬಗ್ಗೆ ಸ್ಫೋಟಕ ಮಾಹಿತಿ ಕೊಟ್ಟ ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ

ಶಂಕಿತ ಉಗ್ರ ಸುಹೇಲ್ ಬಗ್ಗೆ ಸ್ಫೋಟಕ ಮಾಹಿತಿ ಕೊಟ್ಟ ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ

ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on:Jun 24, 2026 | 1:10 PM

Share

Davanagere News: ದಾವಣಗೆರೆಯ ಹರಿಹರದಲ್ಲಿ ಬಂಧಿತನಾದ ಉತ್ತರ ಪ್ರದೇಶ ಮೂಲದ ಶಂಕಿತ ಉಗ್ರ ಸುಹೇಲ್, ಪಾಕಿಸ್ತಾನಿ ಮೂಲದ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ಸ್ಫೋಟಕ ಮಾಹಿತಿಯನ್ನು ದಾವಣಗೆರೆ ಎಸ್ಪಿ ಡಾ. ಹೆಚ್.ಟಿ. ಶೇಖರ್ ಬಹಿರಂಗಪಡಿಸಿದ್ದಾರೆ. 15 ದಿನಗಳ ಹಿಂದೆ ಖಾಸಗಿ ಕಾರ್ಖಾನೆಗೆ ಕೆಲಸಕ್ಕೆ ಬಂದಿದ್ದ ಈತ,ಕಾರ್ಖಾನೆ ಬಳಿಯ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಎಂಬುದನ್ನೂ ಅವರು ತಿಳಿಸಿದ್ದಾರೆ.

ದಾವಣಗೆರೆ, ಜೂನ್​​ 24: ಹರಿಹರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ (ಜೂನ್​​ 23) ಉತ್ತರಪ್ರದೇಶ ಮೂಲದ ಶಂಕಿತ ಉಗ್ರ ಸುಹೇಲ್ (20) ಬಂಧನ ಪ್ರಕರಣ ಸಂಬಂಧ ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಡಾ.ಹೆಚ್​.ಟಿ.ಶೇಖರ್​ ಮಾಹಿತಿ ನೀಡಿದ್ದಾರೆ. 15 ದಿನಗಳ ಹಿಂದೆ ಖಾಸಗಿ ಕಾರ್ಖಾನೆಗೆ ಕೆಲಸಕ್ಕೆ ಬಂದಿದ್ದ ಈತ,ಕಾರ್ಖಾನೆ ಬಳಿಯ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ಅನುಮಾನದ ಮೇರೆಗೆ ಆರೋಪಿ ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಆರೋಪಿ ಹಲವು ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ದು, ಈತನ ಮೊಬೈಲ್​ನಲ್ಲಿ ಮತ್ತಷ್ಟು ವಿಷಯ ಪತ್ತೆಯಾಗಿದೆ. ಈತ ಪಾಕ್​ ಸಂಘಟನೆಗಳ ಜೊತೆ ನಂಟು ಹೊಂದಿರುವ ವಿಚಾರ ಬಹಿರಂಗವಾಗಿದ್ದು, ಆರೋಪಿ ವಿರುದ್ಧ ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗೆ ಜಾಲತಾಣಗಳ ಮೂಲಕ ಹಲವು ಉಗ್ರ ಸಂಘಟನೆಗಳ ನಂಟಿದ್ದು, ಆ ಪೈಕಿ ವಿದ್ವಂಸಕ ಕೃತ್ಯಗಳ ಹಿನ್ನೆಲೆ ಇರುವ ಸಂಘಟನೆಗಳೂ ಇವೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Jun 24, 2026 01:08 PM

Follow Us