ಬೆಳಗಾವಿ: ದರ್ಬಾರ್ ಗಲ್ಲಿಯಲ್ಲಿ 200 ಮೀಟರ್​ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜದ ದರ್ಬಾರ್

| Updated By: ಆಯೇಷಾ ಬಾನು

Updated on: Sep 21, 2024 | 2:32 PM

ಗಣೇಶೋತ್ಸವ ಹಿನ್ನೆಲೆ ಈದ್ ಮಿಲಾದ್ ಮೆರವಣಿಗೆ ಮುಂದೂಡಲಾಗಿತ್ತು. ಸೆಪ್ಟೆಂಬರ್ 22ಕ್ಕೆ ಈದ್ ಮಿಲಾದ್ ಮೆರವಣಿಗೆ ಮುಂದೂಡಿದ್ದರು. ಮೆರವಣಿಗೆ ಹಿನ್ನೆಲೆ ಪ್ಯಾಲೆಸ್ತೀನ್ ಧ್ವಜ ಕಟ್ಟಲಾಗಿತ್ತು. ಬೆಳಗಾವಿ ನಗರದ ದರ್ಬಾರ್ ಗಲ್ಲಿಯಲ್ಲಿ 200 ಮೀಟರ್​ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜದ ಶಾಮಿಯಾನ ಹಾಕಿದ್ದರು. ಸದ್ಯ ಧ್ವಜ ತೆರವು ಮಾಡಲಾಗಿದೆ.

ಬೆಳಗಾವಿ, ಸೆ.21: ಕಿಡಿಗೇಡಿಗಳು ಬೆಳಗಾವಿ ನಗರದ ದರ್ಬಾರ್ ಗಲ್ಲಿಯಲ್ಲಿ ಪ್ಯಾಲೆಸ್ತೀನ್ ಧ್ವಜದ ದೊಡ್ಡ ಶಾಮಿಯಾನ ಹಾಕಿದ್ದಾರೆ. 200 ಮೀಟರ್​ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜದ ಶಾಮಿಯಾನ ಹಾಕಿದ್ದರು. ಸದ್ಯ ಮಾರ್ಕೆಟ್ ಠಾಣೆ ಪೊಲೀಸರು ಪ್ಯಾಲೆಸ್ತೀನ್ ಧ್ವಜ ತೆರವು ಮಾಡಿಸಿದ್ದಾರೆ. ಇನ್ನು ಮತ್ತೊಂದೆಡೆ ಗಣೇಶೋತ್ಸವ ಹಿನ್ನೆಲೆ ಈದ್ ಮಿಲಾದ್ ಮೆರವಣಿಗೆ ಮುಂದೂಡಲಾಗಿತ್ತು. ಸೆಪ್ಟೆಂಬರ್ 22ಕ್ಕೆ ಈದ್ ಮಿಲಾದ್ ಮೆರವಣಿಗೆ ಮುಂದೂಡಿದ್ದರು. ಮೆರವಣಿಗೆ ಹಿನ್ನೆಲೆ ಪ್ಯಾಲೆಸ್ತೀನ್ ಧ್ವಜ ಕಟ್ಟಲಾಗಿತ್ತು. ಪೊಲೀಸರು ಪ್ಯಾಲೆಸ್ತೀನ್ ಧ್ವಜ ಕಟ್ಟಿದವರ ಮಾಹಿತಿ ಪಡೆಯುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ