ಬಿಹಾರನಲ್ಲಿ ಹುಟ್ಟಿದ ದಕ್ಷಿಣ ಭಾರತದ ಮಾಧವನ್ ಪ್ಯಾನ್-ಇಂಡಿಯ ಲುಕ್ಸ್​​ನಿಂದಾಗಿ ದೇಶದೆಲ್ಲೆಡೆ ಸಲ್ಲುತ್ತಾರೆ!

ಮಾಧವನ್ ತಮಿಳು ಚಿತ್ರರಂಗದಲ್ಲಿ ಅತ್ಯಂತ ಬಿಸಿ ನಟ ನಿಜ ಆದರೆ ಅವರು ಮೊದಲ ಚಿತ್ರ ಹಿಂದಿ ಭಾಷೆಯಲ್ಲಾಗಿತ್ತು. ಹಿಂದಿ, ತಮಿಳು ಮತ್ತು ತೆಲುಗು ಸೇರಿದಂತೆ ಅವರು ಸುಮಾರು 80 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ

ಬಹುಭಾಷಾ ನಟ ಆರ್ ಮಾಧವನ್ ಅವರಿಗೆ ಈಗ 51 ರ ಪ್ರಾಯ ಅಂದರೆ ನೀವು ನಂಬ್ತೀರಾ? 1970ರಲ್ಲಿ ಮಾಧವನ್ ಜೊತೆ ಹುಟ್ಟಿದವರಿಗೆಲ್ಲ ವಯಸ್ಸಾಗಿದೆ, ಆದರೆ ಅವರಿಗೆ ಮಾತ್ರ 30 ರಲ್ಲೇ ಸ್ಟ್ರಕ್ ಆದಂತಿದೆ. ಆರೋಗ್ಯ, ಉತ್ತಮ ದೇಹದಾರ್ಢ್ಯ ಮತ್ತು ಲುಕ್ಸ್ನ ಗುಟ್ಟು ಶಿಸ್ತಿನ ಬದುಕು, ನಿಯಮಿತ ವ್ಯಾಯಾಮ ಮತ್ತು ಡಯೆಟ್ ಎಂದು ಅವರೇ ಹೇಳುತ್ತಾರೆ. ಮಾಧವನ್ ಅವರದ್ದು ಪಕ್ಕಾ ಬ್ರಾಹ್ಮಣ ಕುಟುಂಬವಾದರೂ ಹುಟ್ಟಿದ್ದು ಮಾತ್ರ ಬಿಹಾರದ ಜೆಮ್ಷೆಡ್ಪುರ್ನಲ್ಲಿ. ಆವರ ತಂದೆ ರಂಗನಾಥನ್ ಅಯ್ಯಂಗಾರ್ ಟಾಟಾ ಸ್ಟೀಲ್ ಕಂಪನಿಯಲ್ಲಿ ದೊಡ್ಡ ಹುದ್ದೆಯಲ್ಲಿದ್ದರು ಮತ್ತು ಅಮ್ಮ ಸರೋಜ ಬ್ಯಾಕೊಂದರಲ್ಲಿ ಅಧಿಕಾರಿಣಿಯಾಗಿದ್ದರು. ಮಾಧವನ್ ಒಂದು ಕನ್ನಡ ಚಿತ್ರದಲ್ಲೂ ನಟಿಸಿರುವ ಸಂಗತಿ ನಿಮಗೆ ಗೊತ್ತಾ? 1998ರಲ್ಲಿ ಬಿಡುಗಡೆಯಾದ ಶಾಂತಿ ಶಾಂತಿ ಶಾಂತಿ ಕಾಮಿಡಿ ಚಿತ್ರದಲ್ಲಿ ಅವರ ಮುಖ್ಯಪಾತ್ರದಲ್ಲಿ ನಟಿಸಿದ್ದರು.

ಮಾಧವನ್ ತಮಿಳು ಚಿತ್ರರಂಗದಲ್ಲಿ ಅತ್ಯಂತ ಬಿಸಿ ನಟ ನಿಜ ಆದರೆ ಅವರು ಮೊದಲ ಚಿತ್ರ ಹಿಂದಿ ಭಾಷೆಯಲ್ಲಾಗಿತ್ತು. ಹಿಂದಿ, ತಮಿಳು ಮತ್ತು ತೆಲುಗು ಸೇರಿದಂತೆ ಅವರು ಸುಮಾರು 80 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು 4 ಬಾರಿ ಫಿಲಂಫೇರ್ ಅವಾರ್ಡ್​ಗಳನ್ನು ಗಿಟ್ಟಿಸಿದ್ದಾರೆ. ದಕ್ಷಿಣ ಭಾರತದ ನಟರು ಬಾಲಿವುಡ್​ನಲ್ಲಿ ಮಾಧವನ್ ಅವರ ಹಾಗೆ ಸೆಟ್ಲ್ ಆದ ಉದಾಹರಣೆಗಳು ಬಹಳ ಕಡಿಮೆ.

ಸೂಪರ್ ಸ್ಟಾರ್ ಮತ್ತು ಮೆಗಾ ಸ್ಟಾರ್ ಗಳಾದ ಕಮಲಹಾಸನ್, ರಜಿನಿಕಾಂತ್, ಚಿರಂಜೀವಿ, ಮಮ್ಮೂಟಿ, ಮೋಹನ್ ಲಾಲ್ ಮೊದಲಾದವರಿಗೆ ಸಾಧ್ಯವಾಗದೇ ಹೋಗಿದ್ದು ಮಾಧವನ್ ಗೆ ಸಾಧ್ಯವಾಗಿದ್ದು ಪ್ಯಾನ್-ಇಂಡಿಯಾ ಲುಕ್ಸ್ ನಿಂದಾಗಿ ಅಂತ ಹೇಳಲಾಗುತ್ತದೆ.

ಕಮಲಹಾಸನ್ ಅವರ ಕಟ್ಟಾ ಅಭಿಮಾನಿ ಎಂದು ಹೇಳಿಕೊಳ್ಳುವ ಮಾಧವನ್ ಸ್ನೇಹಜೀವಿ ಮತ್ತು ಬೇರೆಯವರ ಕಷ್ಟವನ್ನ ಆರ್ಥಮಾಡಿಕೊಳ್ಳುವ ಸ್ವಭಾವದವರು. ಸಹೊದ್ಯೋಗಿ ನಟಿಯರಾದ ರೀಮಾ ಸೇನ್, ಸದಾ ಮತ್ತು ನಿಶಾ ಕೊಠಾರಿ ಅವಕಾಶಗಳಿಲ್ಲದೆ ಸಮಸ್ಯೆಗೆ ಸಿಕ್ಕಾಗ ತಮ್ಮ ಚಿತ್ರಗಳಲ್ಲಿ ಅದನ್ನು ಕಲ್ಪಿಸಿ ಔದಾರ್ಯತೆ ಮೆರೆದಿದ್ದಾರೆ.

ಅವರಲ್ಲಿ ಎಲ್ಲವೂ ಉತ್ತಮ ಅಂತ ಕಾಣಿಸುತ್ತೆ!

ಇದನ್ನೂ ಓದಿ:  ಪಂದ್ಯ ಸೋತರೂ ಪಾಕಿಸ್ತಾನ ಆಟಗಾರರ ಬೆನ್ನು ತಟ್ಟಿದ ವಿರಾಟ್ ಕೊಹ್ಲಿ; ವಿಡಿಯೋ ವೈರಲ್​

Click on your DTH Provider to Add TV9 Kannada